ಲೈಂಗಿಕಥೆಯಿಲ್ಲದೆ ಬದುಕಿಲ್ಲ. ಹೆಚ್ಚೂ ಕಡಿಮೆ 150 ಕೋಟಿ ಜನಸಂಖ್ಯೆಯ ಭಾರತದಲ್ಲಿ ಲೈಂಗಿಕತೆಗೆ ಕೊರತೆಯೂ ಇಲ್ಲ. ಕಾಮದ ಕುರಿತು ಇಡೀ ಜಗತ್ತಿನಲ್ಲೇ ಒಂದು ಅಧ್ಯಯನ ಯೋಗ್ಯ ಗ್ರಂಥ ವಾತ್ಸಾಯನ ಕಾಮಸೂತ್ರವನ್ನು ರಚಿಸಿದವರು ನಮ್ಮ ಭಾರತೀಯರು. ಆದರೆ ಈ ಬಗ್ಗೆಯೇ ಅತೀ ಹೆಚ್ಚು ಮೂಢನಂಬಿಕೆಗಳಿರುವುದು ಕೂಡಾ ನಮ್ಮಲ್ಲೇ. ನಾವೀಗ ಹೇಳ್ತಿರೋದು ಆ ಸ್ಟೋರಿ ಅಲ್ಲ. ಕನ್ನಡದಲ್ಲಿ ಲೈಂಗಿಕಥೆಯ ಕಥಾವಸ್ತುವೇ ಪ್ರಧಾನವಾಗಿ ಬಂದ ಕೆಲವು ಚಿತ್ರಗಳ ಬಗ್ಗೆ ಮಾತ್ರ.
ಅಂದಹಾಗೆ ಈ ಲಿಸ್ಟಿನಲ್ಲಿ ಹಲೋ ಡಾಕ್ಟರ್, ಪ್ರಥಮ ಅನುಭವ, ಅವಳ ರಾತ್ರಿಗಳು ನಂತಹಾ ಬಿ ಗ್ರೇಡ್ ಚಿತ್ರಗಳ ಬಗ್ಗೆ ಖಂಡಿತಾ ಇರಲ್ಲ. ಇಲ್ಲಿ ನಾವು ಹೇಳೋಕೆ ಹೊರಟಿರೋದು ಮುಖ್ಯವಾಹಿನಿಯಲ್ಲಿಯೇ ಬಂದ ಲೈಂಗಿಕಥೆಯ ಕಥಾವಸ್ತುವಿನ ಚಿತ್ರಗಳ ಬಗ್ಗೆ ಮಾತ್ರ.


ಕನ್ನಡದಲ್ಲಿ ಲೈಂಗಿಕ ಕಥಾವಸ್ತುವಿನ ಚಿತ್ರಗಳಲ್ಲಿ ಬಂದು ಗೆದ್ದು ಸದ್ದು ಮಾಡಿ ದುಡ್ಡೂ ಮಾಡಿದ ಮೊದಲ ಚಿತ್ರ ಅನುಭವ. ಆ ಕ್ರಾಂತಿ ಮಾಡಿದವರು ಕಾಶೀನಾಥ್. ವಯಸ್ಸು ಬೆಳೆದರೂ ಲೈಂಗಿಕತೆಗೆ ತೆರೆದುಕೊಳ್ಳದ ಹುಡುಗಿ, ವಯೋಸಹಜ ಕಾಮನೆಗಳನ್ನು ಈಡೇರಿಸಿಕೊಳ್ಳಲು ಪಡಬಾರದ ಕಷ್ಟ ಪಟ್ಟು ಅಡ್ಡದಾರಿ ಹಿಡಿಯುವ ನಾಯಕ, ಆತನ ಆ ಆಸೆಯನ್ನೇ ಬಳಸಿಕೊಂಡು ಆಟವಾಡುವ ಇನ್ನೊಬ್ಬಳು.. ಹೀಗೆ ಕಥೆಯನ್ನು ಆಗಿನ ಕಾಲಕ್ಕೆ ಭಯಂಕರ ಹಸಿಬಿಸಿಯಾಗಿಯೇ ತೋರಿಸಿದ್ದರು ಕಾಶೀನಾಥ್.
ಉಮಾಶ್ರೀಯವರಂತೂ ಆ ಚಿತ್ರದ ಇಮೇಜ್ನಿಂದ ಹೊರಬರೋಕೆ ಎರಡು ದಶಕ ಕಷ್ಟಪಡಬೇಕಾಯ್ತು. ಆ ಚಿತ್ರದ ಇಮೇಜ್ ಕಾಶೀನಾಥ್ ಅವರಿಗೆ ಹೇಗೆ ಅಂಟಿಕೊಂಡಿತೆಂದರೆ ಕಾಶೀನಾಥ್ ಅವರನ್ನು ಪೋಲಿ ಡೈರೆಕ್ಟರ್ ಎಂದೇ ಕರೆಯಲಾಯಿತು. ಸೆನ್ಸಾರಿನವರಂತೂ ಇಂಥಾದ್ದೊಂದು ದರಿದ್ರ ಚಿತ್ರವನ್ನು ನಾನು ಜೀವಮಾನದಲ್ಲಿ ನೋಡಿಲ್ಲ ಎಂದಿದ್ದರಂತೆ. ಇದು ನಮ್ಮ ಸಂಸ್ಕøತಿಯೇ ಅಲ್ಲ ಎಂದಿದ್ದರಂತೆ. ವಿಚಿತ್ರವೆಂದರೆ ಈ ಚಿತ್ರ ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ರೀಮೇಕ್ ಆಯ್ತು. ಕಾಶೀನಾಥ್ ಎದುರು ಅಭಿನಯ ನಾಯಕಿ. ಉಮಾಶ್ರೀ ಪ್ರತಿ ನಾಯಕಿಯಾಗಿದ್ದರು.
ಅನಂತನ ಅವಾಂತರ : 

ಈಗ ಎಲ್ಲೆಲ್ಲೂ ಪತ್ರಿಕೆಗಳಲ್ಲಿ ಪಾಂಪ್ಲೆಟ್ಟುಗಳಲ್ಲಿ ಟಿವಿ ಶೋಗಳಲ್ಲಿ ನೋಡುತ್ತಲೇ ಇರುತ್ತೀರಿ. ನಿಮಗೆ ನಿಮಿರು ದೌರ್ಬಲ್ಯವಿದೆಯೇ.. ಇದೋ ನಮ್ಮಲ್ಲಿದೆ ಔಷಧ ಎನ್ನುವ ಜಾಹೀರಾತುಗಳನ್ನು. ಈಗಲೂ ಆ ವಿಷಯದ ಬಗ್ಗೆ ಹೊರಗೆ ಮಾತನಾಡಿಕೊಳ್ಳಲು ಸಂಕೋಚ ಪಡುವವರ ಸಂಖ್ಯೆಯೇ ಜಾಸ್ತಿ. ಅಂತಾದ್ದರಲ್ಲಿ ಪ್ರಥಮ ರಾತ್ರಿಯಂದೇ ಫೇಲ್ ಆಗುವ ನಾಯಕನ ಕಥೆಯನ್ನು ಆಗಿನ ಕಾಲದಲ್ಲೇ ಹೇಳಿದ್ದರು. ಆಗಂತೂ ಅಜ್ಜಿ ಲೇಹ್ಯ ಅನ್ನೋದು ಮನೆ ಮಾತಾಗಿ ಹೋಗಿತ್ತು.
ಆ ಚಿತ್ರದಲ್ಲೂ ಒಂದಿಷ್ಟು ಎಲ್ಲವನ್ನೂ ಹಸಿಬಿಸಿಯಾಗಿ ತೋರಿಸಿ ಗೆದ್ದಿದ್ದರು ಕಾಶೀನಾಥ್. ಕಾಶೀನಾಥ್ ಎದುರು ಅಂಜಲಿ ಬೀಡುಬೀಸಾಗಿ ನಟಿಸಿದ್ದರು. ಅದಾದ ಮೇಲೆ ಅವರು ಅಪ್ಪಚ್ಚಿ ಅನ್ನೋ ಸಿನಿಮಾ ಮಾಡಿದರಾದರೂ ದೊಡ್ಡ ಗೆಲುವು ಸಿಗಲಿಲ್ಲ.
ನಾಗಮಂಡಲ :

ನಾಗಮಂಡಲ ಅನ್ನೋ ಸಿನಿಮಾ ಇದ್ಯಲ್ಲ. ಇದು ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ ಆಧರಿತ ಸಿನಿಮಾ. ಲೈಂಗಿಕಥೆಯೇ ಪ್ರಮುಖ ಎಳೆಯಾದರೂ ಅದನ್ನೂ ಮೀರಿದ ಹೆಣ್ಣಿನ ಭಾವನೆಗಳನ್ನು ತೋರಿಸಿ ಅದ್ಭುತವಾಗಿ ಚಿತ್ರಿಸಿ ಗೆದ್ದಿದ್ದರು ನಾಗಾಭರಣ. ಪ್ರಕಾಶ್ ರೈ ಮತ್ತು ವಿಜಯಲಕ್ಷ್ಮಿಯವರ ಮಿಲನ ಮಹೋತ್ಸವಗಳ ಪೋಸ್ಟರ್ ಮೂಲಕವೇ ದೊಡ್ಡ ಓಪನಿಂಗ್ ಪಡೆದಿದ್ದ ಚಿತ್ರ ಬಾಕ್ಸಾಫೀಸಿನಲ್ಲೂ ಗೆದ್ದಿತ್ತು.
ಹುಂಬತನದ ನಾಯಕ, ಏನೂ ಅರಿಯದ ಆಗ ತಾನೇ ಹೊಸಕನಸಿಗೆ ತೆರೆದುಕೊಳ್ಳುವ ನಾಯಕಿ, ಆಕೆಗೆ ಕುರುಡವ್ವ ಕೊಡುವ ಔಷಧ (ವಶೀಕರಣ ವಯಾಗ್ರ ಎನ್ನಬಹುದು), ಅದರಿಂದ ಆಕೆಯ ಮೇಲೆ ಮನಸ್ಸಾಗಿ ಗಂಡನ ರೂಪ ಧರಿಸಿ ಬರುವ ನಾಗಪ್ಪ.. ಅವರಿಬ್ಬರ ಸಂಬಂಧ.. ಹೀಗೆ ಕಥೆ ಹಲವು ಕವಲಾಗಿ ಹೊರಳಿತ್ತು. ಅದ್ಭುತ ಹಾಡುಗಳೂ ಇದ್ದ ಚಿತ್ರ ಪ್ರಯೋಗಾತ್ಮಕ ಚಿತ್ರವಾಗಿ ಗೆದ್ದಿತ್ತು ಕೂಡಾ.


ಹಾಲಿವುಡ್ಡಿನಲ್ಲಿ ಸೈಕೋಗಳ ಸಿನಿಮಾಗಳಿಗೇನೂ ಕಡಿಮೆಯಿಲ್ಲ. ಕನ್ನಡದಲ್ಲಿ ಅವತ್ತಿಗೂ ಇವತ್ತಿಗೂ ಸೈಕೋ ಕಥೆಯನ್ನಾಧರಿಸಿ ಬಂದಿರೋ ಏಕೈಕ ಚಿತ್ರ ಬೆಸ್ಟ್ ಸಿನಿಮಾ ಎಂದರೆ ಅದು ಉತ್ಕರ್ಷ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಉತ್ಕರ್ಷದಲ್ಲಿ ಬೆತ್ತಲೆ ಮತ್ತು ಕಾಮದ ವಿಜೃಂಭಣೆಯಿತ್ತು. ಮೆರವಣಿಗೆಯಿತ್ತು.
ಆದರೆ ಅದನ್ನೂ ಮೀರಿ ಇಡೀ ಕಥೆ ಮತ್ತು ಚಿತ್ರಕಥೆಯಲ್ಲಿ ಅದನ್ನೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮಾಡುವುದರಲ್ಲಿ ಗೆದ್ದಿದ್ದರು ಸುನಿಲ್ ಕುಮಾರ್ ದೇಸಾಯಿ.
ದೇವರಾಜ್ ಸೈಕೋ ಪಾತ್ರದಲ್ಲಿ ಭಯ ಹುಟ್ಟಿಸಿದ್ದರೆ, ಅಂಬರೀಷ್ ಹೀರೋ. ವನಿತಾವಾಸು ನಾಯಕಿ.


ಇತ್ತೀಚಿನ ಚಿತ್ರವಿದು. ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿದ್ದ ಚಿತ್ರ. ವಿಧವೆಯೊಬ್ಬಳು ಲೈಂಗಿಕ ಅಸೆ ಈಡೇರಿಸಿಕೊಳ್ಳೋಕೆ ಮತ್ತೊಂದು ಮದುವೆಯನ್ನೇ ಆಗಬೇಕಿಲ್ಲ ಎಂಬ ಕ್ರಾಂತಿಕಾರಕ ವಿಷಯವನ್ನು ಅಷ್ಟೇ ತಣ್ಣಗೆ ಹೇಳಿದ್ದ ಸಿನಿಮಾ. ರಾಷ್ಟ್ರಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು.
ಇದನ್ನು ಹೊರತುಪಡಿಸಿಯೂ ಕೆಲವು ಚಿತ್ರಗಳು ಬಂದಿವೆ.
ಸಂಗ್ಯಾಬಾಳ್ಯಾ (ಸ್ನೇಹ, ಅಕ್ರಮ ಸಂಬಂಧವನ್ನೂ ಮೀರಿದ ಗೆಳೆಯರ ಕಥೆಯೂ ಇದೆ)
ನಾಯಿ ನೆರಳು (ಹಿಂದಿನ ಜನ್ಮದ ಹೆಂಡತಿಯ ಜೊತೆ ಪುನರ್ಜನ್ಮ ಪಡೆದು ಬಂದವನಿಂದ ಮಗುವಾಗುವ ಕಥೆ. ಆದರೆ ಚಿತ್ರದ ಕಥಾ ಹಂದರ ಅದನ್ನೂ ಮೀರಿ ವಿಸ್ತರಿಸಿದೆ)
ಅಂತರ್ಗಾಮಿ (ಬಾಲ್ಯದಲ್ಲಿ ಅತ್ಯಾಚಾರಕ್ಕೊಳಗಾಗುವ ಹೆಣ್ಣು, ಗಂಡನೊಂದಿಗೆ ಸುಖಿಸುವಾಗಲೂ ಹೆದರುವ ಕಥೆ. ಆದರೆ ಕಥೆ ಹಳಿ ತಪ್ಪುತ್ತದೆ)
ಸಂಜು ಮತ್ತು ಗೀತಾ (ಅತ್ಯಾಚಾರಕ್ಕೊಳಗಾಗಿರುವ ಹೆಣ್ಣು ಮಗಳ ಪ್ರೀತಿಯ ಕಥೆ)..
ಹೀಗೆ ಹಲವು ಚಿತ್ರಗಳಿವೆ. ಇದನ್ನೂ ಮೀರಿದ ಚಿತ್ರಗಳು ಮತ್ತು ಆ ಚಿತ್ರಗಳ ಕಥೆಗಳು ನಿಮ್ಮಲ್ಲೂ ಇರಬಹುದು. ಕಮೆಂಟ್ ಬಾಕ್ಸಿನಲ್ಲಿ ಈ ಪಟ್ಟಿಗೆ ನೀವು ಕೂಡಾ ನಿಮ್ಮ ಇಷ್ಟದ ಕಥೆಯನ್ನು ಸೇರಿಸಬಹುದು.



