ಬಿಗ್ ಬಾಸ್ ಮನೆಯಲ್ಲಿ ಸದಾ ಸದ್ದು ಮಾಡುತ್ತಿದ್ದುದು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ರೊಮ್ಯಾನ್ಸ್. ಅದು ಯಾವ ಲೆವೆಲ್ಲಿಗೆ ಹೋಗಿತ್ತೆಂದರೆ ಖುದ್ದು ಕಿಚ್ಚ ಸುದೀಪ್ ವಾರ್ನಿಂಗ್ ಮಾಡಿದ್ದರು. ಅದಾದ ಮೇಲೆ ರೂಪೇಶ್ ಶೆಟ್ಟಿ ಬೇಜಾರಾಗಿದ್ದರು. ಸಾನ್ಯ ಅಯ್ಯರ್ ಅವರೇ ಸಮಾಧಾನ ಹೇಳಿದ್ದರು. ಕಣ್ಣೀರು ಹಾಕಿ ಊಟ ಬಿಟ್ಟಿದ್ದರು. ಈಗ ಸಾನ್ಯಾ ಅಯ್ಯರ್ ಮತ್ತು ಪ್ರಶಾಂತ್ ಸಂಬರಗಿ ಕೈ ಜೋಡಿಸಿದ್ದಾರೆ. ಬಕ್ರಾ ಆಗಿರೋದು ರೂಪೇಶ್ ರಾಜಣ್ಣ.
ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಮತ್ತು ಸಂಬರಗಿ ಒಟ್ಟಿಗೇ ಮಾತನಾಡಿಕೊಂಡು ರೂಪೇಶ್ ರಾಜಣ್ಣರನ್ನ ಬಕ್ರಾ ಮಾಡೋದಕ್ಕೆ ಪ್ಲಾನ್ ಮಾಡಿದರು. ಈ ಮನೆಯಲ್ಲಿ ಯಾರ್ ಯಾರು ಏನೇನ್ ಮಾತನಾಡಿಕೊಳ್ತಾರೆ. ಎಲ್ಲೆಲ್ಲಿ ಏನೇನು ವಸ್ತುಗಳಿವೆ ಅನ್ನೋದನ್ನ ಕರೆಕ್ಟ್ ಆಗಿ ಹೇಳ್ತೀನಿ ಅಂದಾಗ ಸಾನ್ಯ ಮಾತಿಗೆ ರೂಪೇಶ್ ರಾಜಣ್ಣ ಬೆರಗಾಗಿದ್ದರು. ಆದರೆ ಆಮೇಲೆ ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರಗಿ ಜೊತೆ ಏನೇನು ಮಾತನಾಡಿದರು ಅನ್ನೋದನ್ನ ಸಾನ್ಯ ಕರೆಕ್ಟ್ ಆಗಿ ಹೇಳಿಬಿಟ್ಟರು. ಕಣ್ ಕಣ್ಣು ಬಿಟ್ಟು ನೋಡುವ ಸರದಿ ರೂಪೇಶ್ ರಾಜಣ್ಣದ್ದಾಗಿತ್ತು.
ರೂಪೇಶ್ ರಾಜಣ್ಣ ಮೇಲಿನ ಸಿಟ್ಟಿನಿಂದ ಅವರ ವಾಟರ್ ಬಾಟಲ್ನ ಪ್ರಶಾಂತ್ ಸಂಬರಗಿ ಬಚ್ಚಿಟ್ಟಿದ್ದರು. ಇದೇ ವಿಷಯವನ್ನ ಸಾನ್ಯ ಅಯ್ಯರ್ಗೆ ಹೇಳಿ, ವಾಟರ್ ಬಾಟಲ್ ಎಲ್ಲಿದೆ ಅಂತ ಪ್ರಶಾಂತ್ ಸಂಬರಗಿ ತಿಳಿಸಿದರು. ನಂತರ..
ಸಾನ್ಯ – ದೇವಿಗೆ ಇವತ್ತು ಯಾವ ತರಹ ಅಲಂಕಾರ ಮಾಡಿದ್ದಾರೆ?
ರೂಪೇಶ್ – ಕೆಂಪು
ಸಾನ್ಯ – ನಿಮ್ಮ ಬಾಟಲ್ ಕಲರ್?
ರೂಪೇಶ್ – ಕೆಂಪು
ಸಾನ್ಯ – ಅಲ್ಲೇ ಇದೆ ಉತ್ತರ. ದೇವಿ ಮುಖದ ಕಡೆಗೇ ಇದೆ. ಕೆಂಪಗೆ ಇರೋದು ಏನಾದರೂ ಒಂದು ತಂದುಕೊಡಿ.
ರೂಪೇಶ್ – ಬಾಟಲ್ ಸಿಗಲಿಲ್ಲ ಅಂದ್ರೂ ಪರ್ವಾಗಿಲ್ಲ. ನೀನು ಮೊದಲು ನಾರ್ಮಲ್ ಆಗಮ್ಮ..!
ಸಾನ್ಯ – ರೂಮ್ನಲ್ಲಿ ದಿವ್ಯಾ ಉರುಡುಗ ಬೆಡ್ ಬಳಿ ಇದೆ.
ರೂಪೇಶ್ – ಹೋಗಿ ನೋಡಿಕೊಂಡು ಬರ್ಲಾ?
ಸಾನ್ಯ ಅಯ್ಯರ್ – ಹೋಗಿ..
ಅಲ್ಲೇ ಇತ್ತು ವಾಟರ್ ಬಾಟಲ್. ಓಹ್ ಮೈ ಗಾಡ್.. ಬಿಗ್ ಬಾಸ್ ಏನಿದು ಕಥೆ? ಏನು ನಡೆಯುತ್ತಿದೆ ಮನೆಯಲ್ಲಿ? ನನಗೆ ಮೈಯೆಲ್ಲಾ ರೋಮಾಂಚನ ಆಗುತ್ತಿದೆ ಎಂದು ಥ್ರಿಲ್ಲಾದರು. ಇದು ನಿಜಕ್ಕೂ ದೊಡ್ಡ ಪವಾಡವೇ ಸರಿ. ನಿನಗೆ ಕೈಮುಗಿಯುತ್ತೇನೆ’’ ಎಂದು ಕೈಮುಗಿದರು. ಅದಾದ ನಂತರ ಸಂಬರಗಿ ಬಳಿ ಮಾತನಾಡುತ್ತಾ ನನಗೆ ಮೈಯೆಲ್ಲಾ ನಡುಕ ಬಂತು. ನನ್ನ ತಾಯಿ ಮೇಲಾಣೆ. ನನ್ನ ಜೀವನದಲ್ಲಿ ಇವತ್ತು ಆಗಿರೋ ತರಹ ಇನ್ಯಾವತ್ತೂ ಆಗಿಲ್ಲ ಸರ್. ಈ ಬಾಟಲ್ ನೀರು ಕುಡಿಯಲಾ ಬೇಡ್ವಾ ಅಂತ ಅನಿಸುತ್ತಿದೆ ಎಂದು ಹೇಳಿಕೊಂಡರು.
ಅಲ್ಲಿಗೇ ನಿಲ್ಲಲಿಲ್ಲ. ಸಾನ್ಯ ಮತ್ತು ಸಂಬರಗಿ ಇಬ್ಬರೂ ಸೇರಿಕೊಂಡು ಪಿನ್ನು ಚುಚ್ಚಿ ಕಟ್ ಆದ ಬಾಳೆಹಣ್ಣನ್ನು ದೇವರ ಮುಂದಿಟ್ಟರು. ಪಿನ್ನು ಚುಚ್ಚಿ ಬಾಳೆಹಣ್ಣು ಕಟ್ ಮಾಡೋದು ಸಂಬರಗಿಗೆ ಗೊತ್ತಿತ್ತು. ಅದಾದ ಮೇಲೆ ಸಾನ್ಯ ರೂಪೇಶ್ ರಾಜಣ್ಣಗೆ..
ದೇವರ ಪಕ್ಕದಲ್ಲಿ ಒಂದು ಬಾಳೆಹಣ್ಣು ಇದೆ. ಆಚೆ ಕಡೆಯಿಂದ ನೋಡೋಕೆ ಒಂದೇ ಬಾಳೆಹಣ್ಣು ರೀತಿ ಇದೆ. ಆದರೆ, ಒಳಗೆ 5 ಪೀಸ್ ಆಗಿದೆ. ಅದನ್ನ ನೀವು ಯಾರನ್ನ ಸೋಲಿಸಬೇಕು ಅನ್ಸುತ್ತೋ, ಅವರಿಗೆ ಹಂಚಿ.
ರೂಪೇಶ್ – ಸೋಲಿಸಬೇಕು ಅಂತ ಹಂಚೋದು ನನಗೆ ಇಷ್ಟ ಆಗಲ್ಲ.
ಸಾನ್ಯ – ಹಾಗಾದ್ರೆ, ನೀವೇ 3 ಪೀಸ್ನ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ರಾತ್ರಿ ಒಂದು ತಿನ್ನಿ. ಮಿಕ್ಕಿದ 2 ಭಾಗ ಯಾವಾಗ ತಿನ್ನಬೇಕು ಅಂತ ನಾನು ಹೇಳ್ತೀನಿ. ನೀವು ಕಟ್ ಮಾಡಬೇಡಿ.. ಅದು ಆಗಲೇ ಭಾಗ ಆಗಿದೆ.
ರೂಪೇಶ್ – ಹೌದಾ? ನಾನು ಚೆಕ್ ಮಾಡ್ಲಾ?
ಸಾನ್ಯ – ಹಾ ಮಾಡಿ..
ಅದಾದ ಮೇಲೆ ಮತ್ತೊಮ್ಮೆ ಬೆಚ್ಚಿ ಬೀಳುವ ಸರದಿ ರೂಪೇಶ್‍ರದ್ದು. ಬಾಳೆಹಣ್ಣು ಸಿಪ್ಪೆ ಸುಲಿದಾಗ ಬಾಳೆಹಣ್ಣು ಆಗಲೇ ಭಾಗ ಆಗಿತ್ತು. ಆಕೆ ಹೇಳಿದ ಹಾಗೆ ಐದು ಭಾಗ ಆಗಿದೆ. ನಾನು ಒಂದು ಭಾಗ ತಿನ್ನುತ್ತಿದ್ದೇನೆ. ಒಂದು ಮಿರಾಕಲ್ ಕ್ರಿಯೇಟ್ ಆಗಿದೆ. ನನಗೆ ನಂಬೋಕೆ ಆಗ್ತಿಲ್ಲ. ಇದು ನನ್ನ ಕಣ್ಣಾರೆ ಕಂಡಿರೋ ಸತ್ಯಗಳು. ಆದರೆ, ಇಲ್ಲಿ ಹೇಳಿದರೆ ನಗುತ್ತಿದ್ದಾರೆ. ಈ ಹಣ್ಣನ್ನ ಯಾರಿಗೂ ಕೊಡಲ್ಲ. ಹಣ್ಣು ಕೊಟ್ಟು ಸೋಲಿಸೋದು ನನಗೆ ಇಷ್ಟವಿಲ್ಲ. ಆ ತರಹ ನಾನು ಆಡಲ್ಲ’’ ಎಂದರು ರೂಪೇಶ್ ರಾಜಣ್ಣ.
ಆನಂತರ, ಸಾನ್ಯ ಅಯ್ಯರ್ ಹೇಳಿದನ್ನ ದಿವ್ಯಾ ಉರುಡುಗಗೆ ರೂಪೇಶ್ ರಾಜಣ್ಣ ಹೇಳಿದರು. ಬಾಳೆಹಣ್ಣಿನ ಎರಡನೇ ಭಾಗವನ್ನ ದಿವ್ಯಾ ಉರುಡುಗ ತಿಂದುಬಿಟ್ಟರು. ಆಗ, ‘’ಯಾಕಮ್ಮ ತಿಂದೆ?’’ ಎಂದಾಗ, ‘’ಏನೇ ಕಷ್ಟ ಬಂದರೂ ಇಬ್ಬರೂ ಫೇಸ್ ಮಾಡೋಣ’’ ಎಂದರು ದಿವ್ಯಾ ಉರುಡುಗ.
ಅದಾದ ಮೇಲೆ ಸಂಬರಗಿ ಇನ್ನೂ ಬೆಚ್ಚಿ ಬೀಳಿಸುವ ಆಟ ಆಡಿದರು. ಬೆಳಗ್ಗೆ ಕಾಲು ನೋಡಿದೆ. ದೆವ್ವಕ್ಕೆ ಇರೋ ತರಹ ಏನಾದರೂ ಇದ್ಯಾ ಅಂತ. ಆದರೆ, ನಾರ್ಮಲ್ ಆಗಿದೆ. ನಾನು ಸಾನ್ಯಗೆ ಶೇಕ್ ಹ್ಯಾಂಡ್ ಕೊಡಲಿಲ್ಲ ಎಂದು ಮತ್ತೊಮ್ಮೆ ಭಯ ಹುಟ್ಟಿಸಿದರು. ಆದರೆ ರೂಪೇಶ್ ರಾಜಣ್ಣನ ಮುಗ್ಧತೆ ಹಲವರಿಗೆ ಇಷ್ಟವಾಯಿತು.



