ಕನ್ನಡ ಚಿತ್ರರಂಗಕ್ಕೆ ಪರಭಾಷೆ ಚಿತ್ರಗಳ ಹಾವಳಿ ಹೊಸದೇನಲ್ಲ. ಇದು ಆರಂಭವೂ ಅಲ್ಲ. ಅಂತ್ಯವಂತೂ ಅಲ್ಲವೇ ಅಲ್ಲ. ಈ ಹಿಂದೆಲ್ಲ ಕನ್ನಡ ಚಿತ್ರಗಳ ಮೇಲೆ ಬೇರೆ ಭಾಷೆಯ ಚಿತ್ರಗಳ ದರ್ಬಾರ್ ನಡೆಯುತ್ತಲೇ ಇದೆ. ಕಾನೂನು ಪ್ರಕಾರ ಯಾರು ಬೇಕಾದರೂ ಚಿತ್ರಗಳನ್ನು ಎಲ್ಲಿ ಬೇಕಾದರೂ ರಿಲೀಸ್ ಮಾಡಬಹುದು. ಸರಿಯೇ. ಆದರೆ ಆ ನೆಲದ ಭಾಷೆಗೇ ಹೊಡೆತ ಕೊಡುವಷ್ಟು ದೊಡ್ಡ ಮಟ್ಟದಲ್ಲಿ ಆಗಬಾರದು. ಈ ಬಾರಿ ಅದೇ ರಿಪೀಟ್ ಆಗಿದೆ. ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳೇ ಚಿತ್ರಮಂದಿರ ಸಿಗದೆ ಒದ್ದಾಡುತ್ತಿವೆ.
ಈ ಸಂಕ್ರಾಂತಿಗೆ ಕನ್ನಡದಲ್ಲಷ್ಟೇ ದೊಡ್ಡ ಸ್ಟಾರ್ ಚಿತ್ರ ಇಲ್ಲ. ಆದರೆ ಬೇರೆ ಬೇರೆ ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ದಾಂಗುಡಿಯಿಟ್ಟಿವೆ. ತಮಿಳಿನಲ್ಲಿ ವಿಜಯ್, ಅಜಿತ್, ತೆಲುಗಿನಲ್ಲಿ ಚಿರಂಜೀವಿ, ಬಾಲಕೃಷ್ಣ ಚಿತ್ರಗಳು ಥಿಯೇಟರಿಗೆ ನುಗ್ಗುತ್ತಿವೆ.
ಬೇರೆ ಬೇರೆ ಭಾಷೆಗಳ ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ಬಂದಾಗ ಮೊದಲಿಗೆ ಪೆಟ್ಟು ತಿನ್ನುವುದೇ ಕನ್ನಡದ ಚಿತ್ರಗಳು. ಈ ಬಾರಿಯೂ ಹಾಗೆಯೇ ಆಗುತ್ತಿದೆ. ಈ ಸಂಕ್ರಾಂತಿಗೆ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳ ಶೋಗಳನ್ನು ಮುಲಾಜಿಲ್ಲದೆ ಕಿತ್ತು ಹಾಕಲಾಗಿದೆ. ಇದ್ದುದರಲ್ಲಿ ಫೈಟ್ ಕೊಡುತ್ತಿರುವ ಏಕೈಕ ಸಿನಿಮಾ ವೇದ.
ತಮಿಳಿನ ವಾರಿಸು ಚಿತ್ರಕ್ಕೆ 760 ಶೋ ಸಿಕ್ಕಿದೆ. ಇದು ವಿಜಯ್-ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ. ಇನ್ನು ಅದೇ ತಮಿಳಿನ ವಿಜಯ್ ಅಭಿನಯದ ತುನಿವು ಚಿತ್ರಕ್ಕೆ 525 ಶೋ ಕೊಟ್ಟಿದ್ದಾರೆ ಚಿತ್ರ ಪ್ರದರ್ಶಕರು. ಟಾಕೀಸುಗಳೂ ಅಷ್ಟೆ, ವಿಜಯ್ ಮತ್ತು ಅಜಿತ್ ಚಿತ್ರಗಳು 100ರಿಂದ 150 ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ.
ಇನ್ನು ತೆಲುಗಿನ ಕಥೆ. ಚಿರಂಜೀವಿ ಮತ್ತು ಬಾಲಕೃಷ್ಣ ಚಿತ್ರಗಳದ್ದೂ ಇದೇ ಕಥೆ. ಚಿರಂಜೀವಿ ಮತ್ತು ರವಿತೇಜ ಕಾಂಬಿನೇಷನ್ನಿನ ವಾಲ್ತೇರು ವೀರಯ್ಯ ಹಾಗೂ ಬಾಲಕೃಷ್ಣ, ದುನಿಯಾ ವಿಜಯ್ ಅಭಿನಯದ ವೀರಸಿಂಹರೆಡ್ಡಿ ಚಿತ್ರಗಳೆರಡೂ ತಲಾ 150+ ಟಾಕೀಸುಗಳಲ್ಲಿ ರಿಲೀಸ್ ಆಗುತ್ತಿವೆ.
ಈ ವಾರ ರಿಲೀಸ್ ಆದ ಶ್ರೀ ಬಾಲಾಜಿ ಸ್ಟುಡಿಯೋ, ಸ್ಪೂಕಿ ಕಾಲೇಜ್ ಚಿತ್ರಗಳು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡವು. ಆದರೆ ಅದನ್ನು ತಿಳಿದುಕೊಂಡು ಪ್ರೇಕ್ಷಕರು ಬರುವುದಕ್ಕೆ ಶುರು ಮಾಡುವ ಹೊತ್ತಿಗೆ ಮಲ್ಟಿಪ್ಲೆಕ್ಸುಗಳಲ್ಲಿ, ಥಿಯೇಟರುಗಳಲ್ಲಿ ಚಿತ್ರವೇ ಇಲ್ಲ. ಮಿ.ಬ್ಯಾಚುಲರ್ (ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್), ಪದವಿಪೂರ್ವ (ಯೋಗರಾಜ್ ಭಟ್ ಪ್ರೊಡಕ್ಷನ್ಸ್), ಮಿಸ್ ನಂದಿನಿ (ಪ್ರಿಯಾಂಕಾ ಉಪೇಂದ್ರ) ನಾನು ಅದು ಮತ್ತು ಸರೋಜ (ಲೂಸ್ ಮಾದ ಯೋಗಿ), ಮರೆಯದೆ ಕ್ಷಮಿಸು, ಮೇಡ್ ಇನ್ ಬೆಂಗಳೂರು, ಮೆಜೆಸ್ಟಿಕ್, ಕಾಕ್‍ಟೇಲ್, ಥಗ್ಸ್ ಆಫ್ ರಾಮಘಡ, ವೈಶಂಪಾಯನ ಚಿತ್ರಗಳ ಶೋ ಸಂಖ್ಯೆ ಎರಡಂಕಿ ತಲುಪಿಲ್ಲ. 1..2..5..7..ಶೋಗಳಿಗಷ್ಟೇ ಸೀಮಿತವಾಗಿವೆ.
ಇವುಗಳ ಮಧ್ಯೆ ಗಟ್ಟಿಯಾಗಿ ನಿಂತಿರುವುದು ವೇದ ಮಾತ್ರ. 3ನೇ ವಾರ ಭರ್ಜರಿ ಪ್ರದರ್ಶನ ಕಾಣುತ್ತಿರುವ ವೇದ ದಿನದಿನಕ್ಕೂ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ತೆಲುಗು, ತಮಿಳುಗಳ ಅಬ್ಬರದ ಮಧ್ಯೆಯೇ ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಸ್ಕ್ರೀನ್ ಪಡೆದುಕೊಂಡಿದೆ. ಲೆಕ್ಕಕ್ಕೆ ಹೋಲಿಸಿದರೆ ಕಡಿಮೆಯೇ. ಆದರೆ ಎಲ್ಲವೂ.. ಎಲ್ಲರೂ.. ಸೋತು ನೆಲಕಚ್ಚಿದಾಗ ಒಬ್ಬರಾದರೂ ಎದ್ದು ನಿಂತರಲ್ಲ.. ಅದೇ ಸಮಾಧಾನ. ಶಿವಣ್ಣ ತಮ್ಮ 125ನೇ ಚಿತ್ರದಲ್ಲಿ ತಮ್ಮದೇ ಬ್ಯಾನರಿನ ಚಿತ್ರದಲ್ಲಿ ಭರಪೂರ ಮಿಂಚಿದ್ದಾರೆ. ಗಾನವಿ ಲಕ್ಷ್ಮಣ್, ಆದಿತಿ ಸಾಗರ್, ವೀಣಾ ಪೊನ್ನಪ್ಪ ಮೊದಲಾದವರಿಗೆ ಹೆಚ್ಚು ಸ್ಪೇಸ್ ಕೊಟ್ಟು ಹೆಣ್ಣು ಮಕ್ಕಳ ರಕ್ಷಣೆ, ಸ್ವಾತಂತ್ರ್ಯದ ಬಗ್ಗೆ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಚಿತ್ರವೂ ಗೆದ್ದಿದೆ. ಸದ್ಯಕ್ಕೆ ಈ ಸಮಸ್ಯೆಗೆ ಶಿವಣ್ಣ ಒಬ್ಬರೇ ಪರಿಹಾರ.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.