ಕಾಯೋರು ಕಾಯ್ದಿದ್ರೆ ಏನಾತ್ತಣ್ಣ..
ನಮ್ಮ ಪಾಲಿನ ಊಟ ಕಾಯುತ್ತಣ್ಣ..
ಮನಸ್ಸು ಒಂಚೂರು ನನ್ನನ್ನ ಸಹಿಸು..
ಹಿಗ್ಗಿಸಬೇಡ.. ಏನಾದರೂ ಸೋಲನ್ನ ಒಪ್ಪಿಕೊಳ್ಳಬೇಡ..
ಮನಸ್ಸು ಮನಸ್ಸು.. ತಿಳಿಬೇಕಣ್ಣ..
ತಪ್ಪಿಂದ ಮನಸ್ಸಿನ್ನೂ ಬೆಳೀಬೇಕಣ್ಣ..
ಅರ್ಥಮಾಡಿಕೋ ಅರ್ಥಮಾಡಿಕೋ..
ಹೀಗೊಂದು ಹಾಡು ಹಾಡುತ್ತಲೇ ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ ಅವರಿಂದ ರೂಪೇಶ್ ಶೆಟ್ಟಿ ದೂರವಾಗೋಕೆ ಶುರು ಮಾಡಿದ್ದಾರೆ. ಜೊತೆಯಲ್ಲಿ ಊಟವನ್ನೂ ಮಾಡಿಲ್ಲ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಎಷ್ಟು ಕ್ಲೋಸ್ ಎಂದರೆ ಒಟ್ಟಿಗೇ ಊಟ ಮಾಡುತ್ತಾರೆ. ಬಿಟ್ಟು ಊಟ ಮಾಡೋದಿಲ್ಲ. ಆದರೆ ಮೊನ್ನೆಯ ಕಿಚ್ಚನ ಎಪಿಸೋಡ್ ಬಳಿಕ ರೂಪೇಶ್ ಶೆಟ್ಟಿ ಊಟಕ್ಕೇ ಹೋಗಲಿಲ್ಲ. ಇದರಿಂದ ಸಖತ್ ಬೇಜಾರು ಮಾಡಿಕೊಂಡ ಸಾನ್ಯ ಅಯ್ಯರ್ ಕಣ್ಣಿರು ಹಾಕಿದ ಪ್ರಸಂಗ ಬಿಗ್ ಬಾಸ್ ಮನೆಯಲ್ಲಿ ನಡೀತು. ಇಬ್ಬರ ನಡುವೆ ಮಾತುಕತೆಯೂ ನಡೀತು. ಮದ್ಯದಲ್ಲಿ ಆರ್ಯವರ್ದನ್ ಗುರೂಜಿ ಕೂಡಾ ಇದ್ದು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದರು.
ಸಾನ್ಯ ಅಯ್ಯರ್ – ಹೊಟ್ಟೆ ಹಸಿವಾಗುತ್ತಿದೆ ಅಂತ ನಾನು ಯಾವಾಗ ನಿನಗೆ ಹೇಳಿದ್ದು..
ರೂಪೇಶ್ ಶೆಟ್ಟಿ – ಅಯ್ಯೋ.. ಸಾರಿ. ನಾನು ನಿನ್ನೆಯಿಂದ ಅಪ್ಸೆಟ್ ಆಗಿದ್ದೀನಿ
ಆರ್ಯವರ್ದನ್ – ಅವಳು ಅವಾಗ್ಲಿಂದ ಕಾಯುತ್ತಿದ್ದಳು. ನಿನ್ನದೇ ತಪ್ಪು
ಸಾನ್ಯ – ನನಗೆ ಹೊಟ್ಟೆ ಹಸಿಯುತ್ತಿದೆ. ತಡೆಯೋಕೆ ಆಗ್ತಿಲ್ಲ. ನೀನು ಬರಬೇಕು ತಾನೆ.
ರೂಪೇಶ್ – ನನಗೆ ಅಪ್ಸೆಟ್ ಆಗಿದೆ. ಅದಕ್ಕೆ ನಾನು ನನ್ನ ಪಾಡಿಗೆ ಇದ್ದೇನೆ.
ಸಾನ್ಯ – ಅಪ್ಸೆಟ್ ಆಗಿದೆ ತಾನೆ. ಅದಕ್ಕೆ ನಾನು ನಿನ್ನ ಜೊತೆ ಇರಬೇಕು. ಒಟ್ಟಿಗೆ ಊಟ ಮಾಡಬೇಕು. ಕಾಯಬೇಕು ನಿನಗೋಸ್ಕರ. ನಿನ್ನ ಬಿಟ್ಟು ಊಟ ಮಾಡಿದರೆ, ಅದಕ್ಕೆ ಅರ್ಥ ಏನು ಇರುತ್ತೆ?
ರೂಪೇಶ್ – ಕಣ್ಣೀರು ಹಾಕಿದರೆ ಬೇಜಾರಾಗುತ್ತೆ. ನಿನ್ನೆ ಅಷ್ಟೆಲ್ಲ ಆದ್ಮೇಲೆ ನೀನು ಕಾಯಲ್ಲ ಅಂದುಕೊಂಡೆ.
ನನ್ನ ಜೊತೆ ಹೇಗೆ ಮಾತನಾಡುತ್ತಿದ್ದೀಯಾ ಅನ್ನೋದೇ ಚೇಂಜ್ ಆಗಿದೆ ಎಂದು ಸಾನ್ಯ ಅಯ್ಯರ್ ಬೇಸರದಿಂದ ಹೇಳಿದರು. ಆದಕ್ಕೆ, ‘’ನಿನ್ನ ಮೇಲಿನ ಕಾಳಜಿ ಬದಲಾಗಿಲ್ಲ’’ ಎಂದಿದ್ದಾರೆ ರೂಪೇಶ್ ಶೆಟ್ಟಿ. ಒಟ್ಟಿನಲ್ಲಿ ರೊಮ್ಯಾನ್ಸ್ ವಾರ್ನಿಂಗ್ ನಂತರ ರೂಪೇಶ್ ಶೆಟ್ಟಿ ಬದಲಾಗಿದ್ದಾರೆ.



