ಪ್ರಮೋದ್. ನಿರ್ದೇಶಕರ ಪ್ರಕಾರ ಪ್ರಮೋದ್ ಅವರನ್ನು ತೆಲುಗಿನ ಮಾಸ್ ಮಹಾರಾಜರಿಗೆ ಹೋಲಿಸಬಹುದು. ಅಷ್ಟು ಎನರ್ಜಿ ಮತ್ತು ಫೋರ್ಸ್ ಇರುವ ನಟ. ಅಂದಹಾಗೆ ಬಾಂಡ್ ರವಿ ಚಿತ್ರದ ಟ್ರೇಲರ್ ನೋಡಿದಾಗ ಕಾಣಿಸುವುದು ಪ್ರಮೋದ್ ಅವರ ಬೇಸ್ ವಾಯ್ಸ್ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳು. ಚಿತ್ರದಲ್ಲಿ ಪುನೀತ್ ಅಭಿಮಾನಿಯಾಗಿ ಕಾಣಿಸಿಕೊಂಡಿರೋ ಪ್ರಮೋದ್ ಪವರ್ ಸ್ಟಾರ್ ಫ್ಯಾನ್ಸು ಪವರ್ ಹೌಸ್ ಇದ್ದಂಗೆ ಎಂಬ ಡೈಲಾಗ್ ಜೊತೆಯಲ್ಲೇ ತೆರೆಗೆ ಎಂಟ್ರಿ ಕೊಡುತ್ತಾರೆ.

ಮಾಸ್..ಕ್ಲಾಸ್..ಹದವಾಗಿ ಬೆರೆತ ಬಾಂಡ್ ರವಿ ಟ್ರೇಲರ್‍ನ ಎಂಡ್ ಪೀಸ್ ಇವನು ಒಳ್ಳೆಯವನ ತರಾ ಇರೋ ಕೆಟ್ಟವನೋ.. ಕೆಟ್ಟವನ ತರಾ ಇರೋ ಒಳ್ಳೆಯವನೋ.. ಡೈಲಾಗ್, ಟ್ರೇಲರ್ ನೋಡಿದವರಿಗೂ ಕಥೆಯ ಬಗ್ಗೆ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದ್ದಾರೆ ನಿರ್ದೇಶಕ ಪ್ರಜ್ವಲ್. ಡಿ.9ಕ್ಕೆ ಬಿಡುಗಡೆಯಾಗುತ್ತಿರೋ ಬಾಂಡ್ ರವಿ ಚಿತ್ರಕ್ಕೆ ನರಸಿಂಹ ಮೂರ್ತಿ ನಿರ್ಮಾಪಕರು.
ಜೈಲಿನಲ್ಲಿ ಖೈದಿ, ಬೀದಿಯಲ್ಲಿ ರೌಡಿ, ರಾಜಕಾರಣಿಗಳು ಆಫೀಸರುಗಳಿಗೂ ಭಯ ಹುಟ್ಟಿಸುವ ಬಾಂಡ್ ರವಿ, ಜೈಲಿನಲ್ಲಿ ಭೂಗತ ಲೋಕದ ದಂಧೆಗೆ ಬಾಸು. ಪ್ರೀತಿಸಿದವಳ ಮಡಿಲಲ್ಲಿ ಮಗುವಾಗುವ ಹುಡುಗ, ಕುತಂತ್ರಕ್ಕೂ ಎತ್ತಿದ ಕೈ.

ರತ್ನನ್ ಪ್ರಪಂಚ ನಂತರ ಪ್ರಮೋದ್ ಸೋಲೋ ಆ್ಯಕ್ಷನ್ ಹೀರೋ ಆಗಿ ನಟಿಸಿರೋ ಸಿನಿಮಾ ಬಾಂಡ್ ರವಿ. ಪ್ರಮೋದ್ ಎದುರು ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಪ್ರೇಮಕಥೆ, ಕೌಟುಂಬಿಕ ಸ್ಟೋರಿಗಳಿಗೆ ಮನಮುಟ್ಟುವ ಸಂಗೀತ ನೀಡಿದ್ದ ಮನೋಮೂರ್ತಿ, ರೌಡಿಸಂಕ, ಆಕ್ಷನ್ ಥ್ರಿಲ್ಲರ್ ಕಥೆಗೂ ಸಂಗೀತ ಕೊಟ್ಟಿರುವುದು ವಿಶೇಷ. ರವಿಕಾಳೆ, ಧರ್ಮ, ವಿಜಯ್ ಚೆಂಡೂರು, ಶೋಭರಾಜ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.



