ಮೊದಲಿಗೇ ಹಿಸ್ಟರಿ :
ಪವಿತ್ರಾ ಲೋಕೇಶ್. ಕನ್ನಡದವರೇ. ಮೈಸೂರಿನವರು. ಹಿರಿಯ ನಟ ಮೈಸೂರು ಲೋಕೇಶ್ ಅವರ ಮಗಳು. ಕನ್ನಡದಲ್ಲಿ ನಾಯಕಿಯಾಗಿಲ್ಲದೇ ಇದ್ದರೂ ಪೋಷಕ ನಟಿಯಾಗಿ ಗಮನ ಸೆಳೆದಿದ್ದ ನಟಿ. ಈಗ ತೆಲುಗಿನಲ್ಲಿ ಸ್ಟಾರ್ ನಟಿ. ಪೋಷಕ ಪಾತ್ರಗಳಲ್ಲೇ ಆದರೂ ಪವಿತ್ರಾ ಲೋಕೇಶ್ ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಬಹುತೇಕ ಸ್ಟಾರ್ ನಟರಿಗೆ ಪವಿತ್ರಾ ಲೋಕೇಶ್ ತಾಯಿಯಾಗಿ, ಅಕ್ಕನಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ.

ನರೇಶ್, ತೆಲುಗು ನಟ. ಉದ್ಯಮಿ. ಕೋಟಿ ಕೋಟಿಗಳ ಸಂಪತ್ತಿನ ಅಧಿಪತಿ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ವರಸೆಯಲ್ಲಿ ಅಣ್ಣನಾಗಬೇಕು. ಇವರಿಬ್ಬರ ಮಧ್ಯೆ ದಾಂಪತ್ಯ ಗೀತೆ ಶುರುವಾಗಿ ವಿವಾದ ಸೃಷ್ಟಿಸಿದೆ. ಪವಿತ್ರಾ ಲೋಕೇಶ್ ತಮ್ಮ ಸಂಗಾತಿಯಾಗಿದ್ದ ನಟ ಸುಚೇಂದ್ರ ಪ್ರಸಾದ್ ಅವರನ್ನು ಬಿಟ್ಟು ಸರಿದಿದ್ದಾರೆ. ಇವರು ಮದುವೆಯಾಗಿರಲಿಲ್ಲ. ಸಹಜೀವನಲ್ಲಿದ್ದರು.


ಒಂದು ಮುತ್ತಿನ ಕಥೆ :



ಆಗ ಎಂಟ್ರಿ ಕೊಟ್ಟವರೇ 3ನೇ ಪತ್ನಿ ರಮ್ಯಾ. ಪವಿತ್ರಾ ಮತ್ತು ನರೇಶ್ ನಡುವಿನ ಬಾಂಧವ್ಯ ಬೀದಿಗೆ ಬಂದಿದ್ದು ಕಳೆದ ವರ್ಷದ ಜುಲೈನಲ್ಲಿ ಮೈಸೂರಿನ ಹೋಟೆಲ್ಲೊಂದರಲ್ಲಿ ಒಟ್ಟಿಗೇ ರೂಮ್ ಮಾಡಿದ್ದ ಪವಿತ್ರಾ ಮತ್ತು ನರೇಶ್ ಅವರನ್ನು ಮೀಡಿಯಾಗಳ ಮುಂದೆ ಬೆತ್ತಲು ಮಾಡಿದ್ದರು ನರೇಶ್ ಅವರ ಪತಿ ರಮ್ಯಾ. ಇಬ್ಬರ ಮಧ್ಯೆ ಅನೈತಿಕ ಸಂಬಂಧವಿದೆ. ನಮ್ಮ ಸಂಸಾರಕ್ಕೆ ಪವಿತ್ರ ಹುಳಿ ಹಿಂಡಿದ್ದಾರೆ ಎಂದು ಕೆಂಡ ಕಾರಿದ್ದರು ರಮ್ಯಾ. ನರೇಶ್ ಅವರ ಅಧಿಕೃತ ಪತ್ನಿಯ ಆರೋಪಕ್ಕೆ ಪವಿತ್ರ ಲೋಕೇಶ್ ಕೊಟ್ಟಿದ್ದ ಉತ್ತರವೇ ಬೇರೆ. ಹೌದು ಎಂದು ಕೂಡಾ ಹೇಳಿರಲಿಲ್ಲ. ಸಂಬಂಧ ಇಲ್ಲವೇ ಇಲ್ಲ ಎಂದು ನಿರಾಕರಿಸಿರಲೂ ಇಲ್ಲ. ಈಗ ಮುತ್ತಿನ ಪ್ರಕರಣ ಮತ್ತೊಮ್ಮೆ ಹಳೆದ ವಿವಾದ ನೆನಪಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ನರೇಶ್ ಪತ್ನಿ ರಮ್ಯಾ..
ರಮ್ಯಾ ಹೇಳಿದ್ದೇನು?

2022ರ ಏಪ್ರಿಲ್‍ನಲ್ಲಿ ನರೇಶ್ ಡೈವೋರ್ಸ್‍ಗೆ ಅರ್ಜಿ ಹಾಕಿಕೊಂಡಿದ್ದರು. ನನ್ನ ಗಮನಕ್ಕೇ ತಾರದೆ ಅದನ್ನು ಎಕ್ಸ್-ಪರೇಟ್ ಮೂಲಕ ಗೆಲ್ಲುವ ಸಂಚು ಹೂಡಿದ್ದರು. (ಎಕ್ಸ್-ಪರೇಟ್ ಎಂದರೆ ಕೋರ್ಟಿನಲ್ಲಿ ಪ್ರತಿವಾದಿಯ ಗಮನಕ್ಕೆ ಬಾರದಂತೆ ಕೇಸು ತಮ್ಮ ಪರ ಆಗುವಂತೆ ಮಾಡಿಕೊಳ್ಳುವುದು. ಹಾಗೆಂದು ಇದು ಕೋರ್ಟ್ ಮಾಡುವ ಪ್ರಕ್ರಿಯೆ ಅಲ್ಲ. ಪ್ರತಿವಾದಿಯ ಗಮನಕ್ಕೆ ಕೋರ್ಟ್ ಆಚರಣೆಗಳು, ನೋಟಿಸುಗಳೂ ಸೇರಿದಂತೆ ಯಾವುದೂ ತಿಳಿಯದಂತೆ ನೋಡಿಕೊಳ್ಳುವುದು. ಒಮ್ಮೆ ಆದೇಶ ಬಂದ ಮೇಲೆ ಪ್ರತಿವಾದಿ ಮೇಲ್ಮನವಿ ಅರ್ಜಿ ಹಾಕಿಕೊಳ್ಳಬಹುದೇ ಹೊರತು, ಹಳೆಯ ಆದೇಶ ಅನೂರ್ಜಿತವಾಗುವುದಿಲ್ಲ.) ಹೇಗೋ ಅದೃಷ್ಟವಶಾತ್ ಅದು ನನ್ನ ಗಮನಕ್ಕೆ ಬಂತು. ಈ ವರ್ಷದ ಮಾರ್ಚ್‍ನಲ್ಲಿ ವಿಚಾರಣೆ ಇದೆ. ಹೀಗಿರುವಾಗ ಇವರು ಈ ರೀತಿ ಮಾಡಿದ್ದಾರೆ. ನಾನು ನನ್ನ ಕುಟುಂಬ ನಿರ್ವಹಣೆಗೆ ಹಣ ಕೇಳುತ್ತಿದ್ದೇನೆ ಅಷ್ಟೆ ಎಂದಿದ್ದಾರೆ ರಮ್ಯಾ ನರೇಶ್.
ಒನ್ ನೈಟ್ ಸ್ಟಾಂಡ್ ಸ್ಟೋರಿ :

ಪ್ರಮೋಷನ್ ವಿಡಿಯೋ ಅಲ್ಲ : ಇದು ಸಿನಿಮಾ ಪ್ರಮೋಷನ್`ಗಾಗಿ ಮಾಡಿದ ವಿಡಿಯೋ ಅಲ್ಲ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂದಿರುವ ಪವಿತ್ರಾ ಲೋಕೇಶ್ ವಿವಾದ ಹೆಚ್ಚುವಂತೆ ಮಾಡಿದ್ದಾರೆ.
ಮುಂದೇನು?
ಅಧಿಕೃತವಾಗಿ ಡೈವೋರ್ಸ್ ಆಗಿಲ್ಲದ ನರೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದಿರುವುದು ಕಾನೂನು ಹೋರಾಟದಲ್ಲಿ ಯಾವ ತಿರುವು ಪಡೆಯಲಿದೆಯೋ ನೋಡಬೇಕು.



