Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಪ್ರಿಂಟಿಂಗ್ ಪ್ರೆಸ್ಸು.. ಡ್ರೈವರ್.. ಓನರ್.. ವಿಆರ್‍ಎಲ್ ಸಂಕೇಶ್ವರರ ಸಿನಿಮಾ

SpeciallU by SpeciallU
December 7, 2022
in Cinema
Reading Time: 1 min read
0 0
0
ಪ್ರಿಂಟಿಂಗ್ ಪ್ರೆಸ್ಸು.. ಡ್ರೈವರ್.. ಓನರ್.. ವಿಆರ್‍ಎಲ್ ಸಂಕೇಶ್ವರರ ಸಿನಿಮಾ

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ವಿಜಯ ಸಂಕೇಶ್ವರ ಬಡತನವನ್ನೇ ಹಾಸು ಹೊದ್ದಿದ್ದವರೇನಲ್ಲ. ಅಪ್ಪನಿಗೆ ಪ್ರಿಂಟಿಂಗ್ ಪ್ರೆಸ್ ಇತ್ತು. ಹಾಗಂತ ಲಕ್ಷ ಲಕ್ಷ ಇದ್ದ ಕುಬೇರರೂ ಅಲ್ಲ. ಐವರು ಮಕ್ಕಳಲ್ಲಿ ಚೆನ್ನಾಗಿ ಓದಿದ್ದ ಕಾರಣಕ್ಕೆ ಅಪ್ಪನ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಪ್ರೂಫ್ ರೀಡಿಂಗ್ ಮಾಡುತ್ತಿದ್ದ ವಿಜಯ ಸಂಕೇಶ್ವರರು ಹೊಸದೇನನ್ನೋ ಮಾಡಬೇಕು ಎಂದು ಕನಸು ಕಂಡರು. ಲೋನ್‍ನಲ್ಲಿ ಒಂದು ಲಾರಿ ಖರೀದಿ ಮಾಡಿದರು. ಆಗ ಅವರಿಗೆ 26 ವರ್ಷ. ಒಂದು ನಾಲ್ಕಾಯಿತು. ನಾಲ್ಕು ಹತ್ತಾಯಿತು. ಹತ್ತು ನೂರಾಯಿತು.. ಕೊನೆಗೆ ವಿಆರ್‍ಎಲ್ ಎಂಬ ಸಂಸ್ಥೆ ಹುಟ್ಟಿತು. ಸಾವಿರಾರು ಲಾರಿ, ನೂರಾರು ಬಸ್ಸುಗಳ ಮಾಲೀಕರಾಗಿರುವ ವಿಜಯ ಸಂಕೇಶ್ವರರ ಕನಸು ಅಲ್ಲಿಗೇ ಮುಗಿಯುವುದಿಲ್ಲ. 1983ರಲ್ಲಿ ವಿಆರೆಲ್ ಸಂಸ್ಥೆಯನ್ನು ಕಟ್ಟಿದ ವಿಜಯ ಸಂಕೇಶ್ವರರ ಈಗ ಕೇವಲ ಟ್ರಾನ್ಸ್‍ಪೋರ್ಟಿಂಗ್ ಸಂಸ್ಥೆಯಷ್ಟೇ ಅಲ್ಲ, ಇನ್ನೂ ವಿಸ್ತಾರವಾಗಿದೆ.
ಇದರ ನಡುವೆ ಸಂಯುಕ್ತ ಕರ್ನಾಟಕದಲ್ಲಾದ ಕೆಟ್ಟ ಅನುಭವ ವಿಜಯ ಕರ್ನಾಟಕ ಪತ್ರಿಕೆ ಆರಂಭಿಸುವುದಕ್ಕೆ ಪ್ರೇರಣೆ ನೀಡಿತು. ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನೂ, ಉಷಾಕಿರಣ ಎಂಬ ಮತ್ತೊಂದು ಕನ್ನಡ ಪತ್ರಿಕೆಗೂ ಆರಂಭ ನೀಡಿದರು. ನಂತರ ವಿಜಯ ಕರ್ನಾಟಕ ಪತ್ರಿಕೆ ಸೇರಿದಂತೆ ಎಲ್ಲವುಗಳನ್ನೂ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‍ಗೆ ಮಾರಾಟ ಮಾಡಿದರು. ಉದ್ಯಮದಲ್ಲೇ ಮುಳುಗಿ ಹೋದರು. ಅದಾದ ಕೆಲ ವರ್ಷಗಳ ನಂತರ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಎಂಬ ಟಿವಿ ಚಾನೆಲ್ ಆರಂಭಿಸಿದ ಸಂಕೇಶ್ವರರು ರಾಜಕೀಯಕ್ಕೂ ಹೋಗಿ ಬಂದಿದ್ದಾರೆ.
ಬಿಜೆಪಿಯಲ್ಲಿದ್ದು ನಂತರ ಹೊರಬಂದು ತಮ್ಮದೇ ಪಕ್ಷ ಕಟ್ಟಿದ ಸಂಕೇಶ್ವರ, ಸೋತಿದ್ದು ರಾಜಕೀಯದಲ್ಲಿ ಮಾತ್ರ. ಈಗ ಅವರ ಮಗ ಆನಂದ ಸಂಕೇಶ್ವರ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆ ಸಂಸ್ಥೆಯ ಮೊದಲ ಸಿನಿಮಾವೇ ವಿಜಯಾನಂದ. ಚಿತ್ರದಲ್ಲಿ ವಿಜಯ ಸಂಕೇಶ್ವರ.. ಹುಬ್ಬಳ್ಳಿಯ ಹುಡುಗ ವಿಆರ್‍ಎಲ್ ಎಂಬ ಸಂಸ್ಥೆ ಕಟ್ಟಿದ್ದು, ವಿಜಯ ಕರ್ನಾಟಕ, ವಿಜಯವಾಣಿ, ವಿಜಯ ಟೈಮ್ಸ್, ದಿಗ್ವಿಜಯ ಟಿವಿ ಎಂಬ ಸುದ್ದಿ ಸಂಸ್ಥೆ ಕಟ್ಟಿದ್ದು.. ಪ್ರತಿಯೊಂದು ಹೆಜ್ಜೆಯೂ ಸ್ಫೂರ್ತಿದಾಯಕವೇ. ಈ ಸ್ಫೂರ್ತಿದಾಯಕ ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲ, ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.
ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ನಟಿಸಿರುವ ಚಿತ್ರದಲ್ಲಿ ನಿಹಾಲ್ ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ಅನಂತನಾಗ್ ಸಂಕೇಶ್ವರರ ತಂದೆಯಾಗಿ ನಟಿಸಿದ್ದರೆ, ಸಿರಿ ಪ್ರಹ್ಲಾದ್ ಸಂಕೇಶ್ವರರ ಪತ್ನಿ ಲಲಿತಾ ಪಾತ್ರದಲ್ಲಿದ್ದಾರೆ. ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಮೊದಲಾದವರು ನಟಿಸಿರುವ ಚಿತ್ರಕ್ಕೆ ರಿಷಿಕಾ ಶರ್ಮಾ ನಿರ್ದೇಶಕಿ.
ಅಂದಹಾಗೆ ಕನ್ನಡದ..ಕರ್ನಾಟಕದ ಸಾಧಕರ ಕಥೆಗಳನ್ನು ಬೇರೆ ಭಾಷೆಯವರು ಸಿನಿಮಾ ಮಾಡುತ್ತಿದ್ದಾರೆ. ಗೆಲ್ಲುತ್ತಿದ್ದಾರೆ. ವಿಮಾನಯಾನ ಕ್ಷೇತ್ರದ ಕ್ಯಾ.ಗೋಪಿನಾಥ್ ಜೀವನ ಚರಿತ್ರೆ ಸೂರರೈಪೋಟ್ರು ಹೆಸರಿನಲ್ಲಿ ತಮಿಳಿನಲ್ಲಿ ಸಿನಿಮಾ ಆಗಿತ್ತು. ಈಗ ಹಿಂದಿಯಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿದ್ದ, ಎಷ್ಟೇ ಅಂಕಿ ಸಂಖ್ಯೆ ಲೆಕ್ಕಗಳನ್ನೂ ಕ್ಷಣಮಾತ್ರದಲ್ಲಿ ಬಿಡಿಸಿ ಉತ್ತರ ಹೇಳುತ್ತಿದ್ದ, ಜ್ಯೋತಿಷ್ಯದಲ್ಲೂ ಪಾರಂಗತೆಯಾಗಿದ್ದ ಶಕುಂತಲಾದೇವಿಯರ ಕಥೆ ಸಿನಿಮಾ ಆಗಿದ್ದು ಹಿಂದಿಯಲ್ಲಿ. ಮುಂಬೈ ಅಟ್ಯಾಕ್ ದಾಳಿಯಲ್ಲಿ ಪಾಕ್ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಯೋಧ ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ ಮಾಡಿದ್ದು ತೆಲುಗಿನಲ್ಲಿ. ಕನ್ನಡದಲ್ಲಿ ಅಲ್ಲ. ಬೆಂಗಳೂರಿನ ಇಸ್ರೋದಲ್ಲೇ ಸೃಷ್ಟಿಯಾದ, ಜಗತ್ತನ್ನೇ ನಿಬ್ಬೆರಗಾಗಿಸಿದ ಮಂಗಳಯಾನದ ಯಶಸ್ಸಿನ ಅದ್ಭುತ ಕಥೆ ಕೂಡಾ ಸಿನಿಮಾ ಆಗಿದ್ದು ಹಿಂದಿಯಲ್ಲಿಯೇ.. ಕನ್ನಡದಲ್ಲಿ ಅಲ್ಲ.
ಈಗ ವಿಜಯ ಸಂಕೇಶ್ವರರ ಬಯೋಪಿಕ್ ಕನ್ನಡದಲ್ಲಿ ಸಿನಿಮಾ ಆಗಿದೆ. ಅವರ ಜೀವನದ ಇಡೀ ಚರಿತ್ರೆಯನ್ನು ಹೇಳಲಾಗದಿದ್ದರೂ ಪ್ರಮುಖ ಘಟನೆಗಳನ್ನಂತೂ ನೋಡಬಹುದು. ಒಬ್ಬ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಮಗ ಇಂಡಿಯಾದ ಟಾಪ್ ಇಂಡಸ್ಟ್ರಿಯೊಂದರ ಮಾಲೀಕನಾಗಿದ್ದು, ಸಂಸದನಾಗಿದ್ದು, ಪತ್ರಕರ್ತನೂ ಆಗಿದ್ದು ಹೇಗೆ ಎಂಬುದೇ ಸ್ಫೂರ್ತಿದಾಯಕ ಕಥೆ.

Tags: #Vijayasankeshwar #Digvijaya #VRL #Vijayananda #Vijaykarnataka #Vijayavani #AnandSankeshwar #ವಿಜಯಸಂಕೇಶ್ವರ #ವಿಆರ್‍ಎಲ್ #ದಿಗ್ವಿಜಯ #ವಿಜಯಾನಂದ #ವಿಜಯಕರ್ನಾಟಕ #ವಿಜಯವಾಣಿ #ಆನಂದಸಂಕೇಶ್ವರ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.