ಗಣೇಶ್ ಚಿತ್ರಗಳಲ್ಲಿ ಲವ್ ಇರುತ್ತದೆ ಎನ್ನುವುದು ಕಾಮನ್. ಆದರೆ ಗಣೇಶ್ ಸಿನಿಮಾಗಳಲ್ಲಿ ಒಬ್ಬರಿಗಿಂತ ಹೆಚ್ಚು ಹೀರೋಯಿನ್ಸ್ ಇರುವುದೂ ಕಾಮನ್ ಆಗುತ್ತಿದೆ. ಇತ್ತೀಚೆಗೆ ಮುಗುಳುನಗೆ ಚಿತ್ರದಲ್ಲಿ ಮೂರ್ ಮೂರು ಜನ ಹೀರೋಯಿನ್ಸ್ ಇದ್ದರು. ಆಶಿಕಾ ರಂಗನಾಥ್, ನಿಖಿತಾ ನಾರಾಯಣನ್, ಅಪೂರ್ವ ಅರೋರಾ ನಾಯಕಿಯರಾಗಿದ್ದರು. ಕೊನೆಯದಾಗಿ ಅಮೂಲ್ಯ 4ನೇ ನಾಯಕಿಯಾಗಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ಈಗ ಅದೇ ತ್ರಿಬ್ಬಲ್ ರೈಡಿಂಗ್ಲ್ಲೂ ಆಗುತ್ತಾ ಅನ್ನೋ ಕುತೂಹಲ ಹುಟ್ಟಿಸಿದ್ದಾರೆ ಡೈರೆಕ್ಟರ್ ಮಹೇಶ್ ಗೌಡ.
ಗಣೇಶ್ ಚಿತ್ರಗಳಲ್ಲಿ ಕಾಮಿಡಿ, ಲವ್ ಸ್ಟೋರಿ ಟ್ರ್ಯಾಕ್, ಚೆಂದವಾದ ಹಾಡುಗಳು, ಸುಂದರ ಹೀರೋಯಿನ್ ಇರಬೇಕು. ಎಂಬಂತೆಯೇ ತ್ರಿಬ್ಬಲ್ ರೈಡಿಂಗ್ ಸಿದ್ಧವಾಗಿದೆ. ಪ್ರೇಕ್ಷಕರ ನಿರೀಕ್ಷೆಯೂ ಅದೇ ಇರುತ್ತೆ. ತ್ರಿಬಲ್ ರೈಡಿಂಗ್ನಲ್ಲಿ ಈಗಾಗಲೇ ಒಬ್ಬರ್ಯಾಕೆ.. ಮೂರ್ ಜನ ಇದ್ದಾರೆ ಎಂದು ಹೇಳಿ ಮೂರು ಸುಂದರಿಯರ ಜೊತೆ ಲವ್ ಟ್ರ್ಯಾಕ್ ಸಿದ್ಧ ಮಾಡಿದ್ದಾರೆ ಮಹೇಶ್ ಗೌಡ. ಗಣೇಶ್ ಎದುರು ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಹೀರೋಯಿನ್ಸ್.
ಅಂದಂತೆ ಚಿತ್ರದಲ್ಲಿ ಇನ್ನೊಬ್ಬ ನಾಯಕಿ ಇದ್ದಾರಂತೆ. ಚಿತ್ರದ ಕೊನೆಯಲ್ಲಿ ನಾಯಕಿ ಬರುತ್ತಾರೆ ಎಂದಿದ್ದಾರೆ ಮಹೇಶ್ ಗೌಡ. ಆ ನಾಯಕಿ ಯಾರು ಅನ್ನೋದನ್ನು ಸಸ್ಪೆನ್ಸ್ ಆಗಿಟ್ಟಿದ್ದಾರೆ. ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರುತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು. ಅವರು ಟ್ರಿಬಲ್ ರೈಡಿಂಗ್ನಲ್ಲಿ ವೈದ್ಯರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಮಹೇಶ್ ಹೇಳುತ್ತಾರೆ. ಚಮಕ್ ನಂತರ ಮತ್ತೊಮ್ಮೆ ಡಾಕ್ಟರ್ ಆಗಿದ್ದಾರೆ ಗಣೇಶ್.
ಯೋಗರಾಜ್ ಭಟ್, ದುನಿಯಾ ಸೂರಿಯವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಹಿಂದೆ ವಿನೋದ್ ಪ್ರಭಾಕರ್ ಅವರಿಗೆ ರಗಡ್ ಚಿತ್ರವನ್ನು ನಿರ್ದೇಶಿಸಿದ್ದರು. ಆಗ ಆಕ್ಷನ್ ನೀಡಿದ್ದ ಡೈರೆಕ್ಟರ್, ಈಗ ಲವ್ ಬ್ರೇಕಪ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ಗೋಪಾಲ್ ಅವರು ಬಂಡವಾಳ ಹೂಡಿರುವ ಟ್ರಿಬಲ್ ರೈಡಿಂಗ್ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ಸಂಯೋಜಿಸಿದ್ದಾರೆ.



