ನಂಬರ್ ಅಂದ್ರೆ ನಾನು.. ನಾನು ಅಂದ್ರೆ ನಂಬರ್ ಫೇಮಸ್ ಖ್ಯಾತಿಯ ಜ್ಯೋತಿಷಿ ಆರ್ಯವರ್ಧನ್ ಈಗ ಬಿಗ್‍ಬಾಸ್‍ನಲ್ಲಿದ್ದಾರೆ. ಸಾನ್ಯಾ ಅಯ್ಯರ್ ತುಟಿ ನೋಡಿ ಭವಿಷ್ಯ ಹೇಳಿದ್ದು ಇವರ ಇತ್ತೀಚಿನ ಸಾಧನೆ. ದೇಹದ ಯಾವುದೇ ಭಾಗಗಳನ್ನೂ ನೋಡಿದರೂ ಇವರಿಗೆ ನಂಬರ್ ಮತ್ತು ಅವರ ಜ್ಯೋತಿಷ್ಯ ಕಾಣುತ್ತದೆ ಎನ್ನುವುದು ವಿಶೇಷ. ಇಂತಹ ಆರ್ಯವರ್ಧನ್ ಮೇಲೆ ಕಿಚ್ಚ ಸುದೀಪ್ ಗರಂ ಆದ ಸ್ಟೋರಿ ಇದು.
ಆರ್ಯವರ್ಧನ್ ಅವರು ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್‍ನವರಿಗೂ ಅನುಪಮಾ ಅಂದ್ರೆ ಇಷ್ಟ. ಅವರು ಬಿಗ್ ಬಾಸ್ ಮನೆಯಲ್ಲಿರಬೇಕು ಎಂದು ಅವರೂ ಬಯಸುತ್ತಾರೆ ಎಂದು ಮಾತನಾಡಿದ್ದರು. ಇದು ಮ್ಯಾಚ್ ಫಿಕ್ಸಿಂಗ್ ಎಂಬರ್ಥದಲ್ಲಿ ಗಂಭೀರ ಆರೋಪವನ್ನೇ ಮಾಡಿದ್ದರು. ಸೂಪರ್ ಸಂಡೇ ವಿತ್ ಸುದೀಪ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ ಎಂದಿನಂತೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಟಾಪ್ 2 ಯಾರು ಆಗ್ತಾರೆ ಎಂದು ಕೇಳಿದರು. ಸ್ಪರ್ಧಿಗಳು ಒಬ್ಬರ ಹೆಸರನ್ನು ಹೇಳುತ್ತಿದ್ದರು. ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್ಗೂ ಅನುಪಮಾ ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದು ಹೇಳಿದರು. ಬಂಗಾರದ ಟಾಸ್ಕ್ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ ಎಂದು ಗಂಭೀರ ಆರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲಾ ಎಂದರು.

ಗುರೂಜಿ ಮಾತಿನ ವರಸೆಗೆ ಕೆಂಡವಾದ ಸುದೀಪ್ ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದರು. ಆದರೂ ಸಹ ಗುರೂಜಿ ಯೋಚನೆ ಮಾಡಿ ಹೇಳಬೇಕಲ್ಲ ಹಾಗಾಗಿ ಹೇಳುತ್ತಿದ್ದೀನಿ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡರು. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಯಾರಿಗೂ ಯೋಗ್ಯತೆ ಇಲ್ವಾ, ಮೋಸ ಮಾಡಿ ಗೆಲ್ತಾ ಇದ್ದಾರಾ ಎಂದು ಸುದೀಪ್ ಖಡಕ್ ಆಗಿ, ಕೇಳಿದ್ದರು. ಸಹಜವಾಗಿ ನಾನು ಹೇಳಿದ್ದು ಎಂದು ಆರ್ಯವರ್ದನ್ ಮತ್ತೆ ಮಧ್ಯೆ ಮಾತಾಡಿದರು.

ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ. ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ ಎಂದು ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇತ್ತೀಚೆಗೆ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ರಾಜಣ್ಣ ಅವರ ಮಿತಿಮೀರಿದ ವರ್ತನೆಗೂ ಕಿಡಿ ಕಾರಿದ್ದ ಸುದೀಪ್, ಈಗ ಆರ್ಯವರ್ಧನ್ ಅವರ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.



