ಸಂಚಿತ್ ಸಂಜೀವ್. ಕಿಚ್ಚ ಸುದೀಪ ಅವರಿಗೆ ಸೋದರಳಿಯನಾಗಬೇಕು. ಆದರೆ ಚಿತ್ರರಂಗಕ್ಕೆ ಸುಲಭವಾಗಿಯೇನೂ ಬಂದವರಲ್ಲ. ಈಗಾಗಲೇ ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಸಂಚಿತ್ ಕೆಲಸ ಮಾಡಿದ್ದರು. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಸೋದರಳಿಯ ಎಂಬುದನ್ನೂ ನೋಡದೆ ಮುಲಾಜಿಲ್ಲದೆ ಬೆಂಡೆತ್ತಿದ್ದರು ಸುದೀಪ್. ಅಷ್ಟೇ ಅಲ್ಲ, ಮುಂಬೈನಲ್ಲಿ ನಟನೆಯ ತರಬೇತಿಯನ್ನೂ ಪಡೆದು ಬಂದಿದ್ದರು. ಇದೀಗ ಹೀರೋ ಆಗುತ್ತಿದ್ದಾರೆ. ಡೈರೆಕ್ಟರ್ ಕೂಡಾ ಆಗುತ್ತಿದ್ದಾರೆ. ಚಿತ್ರದ ಟೈಟಲ್ ಜಿಮ್ಮಿ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತವಾಗಿದೆ. ಸೋದರಳಿಯನ ಮೊದಲ ಹೆಜ್ಜೆಗೆ ಸುದೀಪ್ ಕೂಡ ಸಾಥ್ ನೀಡಿದ್ದಾರೆ. ಇದೊಂದು ಕ್ರೈಂ-ಡ್ರಾಮಾ ಸಿನಿಮಾ ಆಗಿದ್ದು, ತಂದೆ- ಮಗನ ಬಾಂಧವ್ಯ ಸಾರುವ ಕಥೆಯಾಗಿದೆ.
ಮೊದಲ ಚಿತ್ರಕ್ಕೆ ತಾವೇ ಹೀರೋ ಆಗಿ, ತಾವೇ ಡೈರೆಕ್ಟರ್ ಆಗಿರೋಕೆ ಕಾರಣ ಕಿಚ್ಚ ಸುದೀಪ್. ಅವರ ಸಲಹೆಯ ಮೇಲೆ ಇಂತಾ ಸಾಹಸಕ್ಕೆ ಕೈಹಾಕಿದ್ದಾರೆ ಸಂಚಿತ್. ಅಂದಹಾಗೆ ಸಂಚಿತ್, ಸುದೀಪ್ ಅವರ ಅಕ್ಕ ಸುಜಾತಾ ಅವರ ಮಗ. ಹೈಟು ಸುದೀಪ್ ಅವರಂತೆಯೇ ಇದೆ. ನೋಡೋಕೆ ಸ್ಮಾರ್ಟ್ ಆಗಿದ್ದಾರೆ. ಸೋದರಮಾವನಂತೆಯೇ ಹ್ಯಾಂಡ್ಸಮ್. ಸೋದರಮಾವನನ್ನೂ ಮೀರಿಸಿದ ಯಶಸ್ಸು ಸಿಗುತ್ತಾ..



