ಕಾಲೇಜು ಓದುವಾಗ ನಾನು ಮೊದಲು ಇಷ್ಟ ಪಟ್ಟ ಹುಡುಗಿ ಸಮಂತಾ. ಸಮಂತಾರನ್ನು ಸ್ಕ್ರೀನ್ ಮೇಲೆ ನೋಡಿ ಆನಂದಿಸುತ್ತಿದ್ದೆ. ಇದೀಗ ಹತ್ತಿರದಲ್ಲೇ ನೋಡುತ್ತಿದ್ದೇನೆ. ಅವರು ಹೇಗೇ ಇರಲಿ.. ಏನೇ ಇರಲಿ.. ನಾನು ಇಷ್ಟ ಪಡುತ್ತಲೇ ಇರುತ್ತೇನೆ. ಹೀಗೆ ಸಮಂತಾ ಅಂದ್ರೆ ನನಗಿಷ್ಟ ಎಂದು ಬರೆದುಕೊಂಡಿದ್ದು ವಿಜಯ್ ದೇವರಕೊಂಡ. ಶಾಕ್ ಆಗಿದ್ದು ರಶ್ಮಿಕಾ ಮಂದಣ್ಣ ಫ್ಯಾನ್ಸ್.

ವಿಜಯ್ ದೇವರಕೊಂಡ ಅಂದಾಕ್ಷಣ ಥಟ್ಟನೆ ನೆನಪಾಗುವವರೇ ರಶ್ಮಿಕಾ ಮಂದಣ್ಣ. ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎನ್ನುವುದು ಚಿತ್ರರಂಗ ಬಹಿರಂಗವಾಗಿ ಮಾತನಾಡಿಕೊಳ್ಳೋ ಗುಟ್ಟು. ಮೊನ್ನೆಯಷ್ಟೇ ಈ ಜೋಡಿ ವಿದೇಶ ಪ್ರವಾಸಕ್ಕೂ ಹೋಗಿ ಬಂತು. ಈ ವರ್ಷದ ನ್ಯೂ ಇಯರ್ನ್ನು ಇಬ್ಬರೂ ಒಟ್ಟಿಗೇ ಗೋವಾದಲ್ಲಿ ಸೆಲಬ್ರೇಟ್ ಮಾಡಿದ್ದರು. ಆದರೆ ಸಂದರ್ಶನಗಳಲ್ಲಿ ಇಬ್ಬರೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಳ್ಳುತ್ತಾರೆ.
ಇಂತಹ ಹೊತ್ತಿನಲ್ಲಿ ವಿಜಯ್ ದೇವರಕೊಂಡ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಅಂದಹಾಗೆ ಸದ್ಯಕ್ಕೆ ವಿಜಯ್ ದೇವರಕೊಂಡ ಲೈಗರ್ ಚಿತ್ರದ ಸೋಲಿನ ನೋವಿನಲ್ಲಿದ್ದಾರೆ. ಲೈಗರ್ ಸೋತ ನಂತರವೇ ರಶ್ಮಿಕಾ ಜೊತೆ ಫಾರಿನ್ ಟ್ರಿಪ್ಗೆ ಹೋಗಿದ್ದ ವಿಜಯ್ ದೇವರಕೊಂಡ ಈಗ ಈ ಟ್ವೀಟ್ ಮಾಡಿದ್ದಾರೆ. ಸಮಂತಾ ಅವರ ಯಶೋಧಾ ಚಿತ್ರದ ಟ್ರೇಲರ್ ಶೇರ್ ಮಾಡಿದ್ದಾರೆ.

ಅಂದಹಾಗೆ ನಾಗಾರ್ಜುನ ಅಕ್ಕಿನೇನಿ ಅವರಿಂದ ದೂರವಾದ ಬಳಿಕ ಸಮಂತಾ ಊ ಅಂಟಾವಾ.. ಹಾಡಿನ ಮೂಲಕ ಕಿಚ್ಚು ಹಬ್ಬಿಸಿದ್ದರು. ಈಗ ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ಸಮಂತಾ, ವಿಜಯ್ ದೇವರಕೊಂಡ ಅವರ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ರಿಲೀಸ್ ಆಗುವುದು ಮುಂದಿನ ಏಪ್ರಿಲ್ಗೆ. ಆ ಚಿತ್ರದ ಚಿತ್ರೀಕರಣ ವೇಳೆ ವಿಜಯ್ ದೇವರಕೊಂಡ ಸಮಂತಾಗೆ ಸರ್ಪ್ರೈಸ್ ಬರ್ತ್ ಡೇ ವಿಷ್ ಮಾಡಿದ್ದು, ಸಮಂತಾ ಸಂತೋಷದಿಂದ ವಿಜಯ್ ಅವರನ್ನು ಬಿಗಿದಪ್ಪಿಕೊಂಡಿದ್ದ ವಿಡಿಯೋಗಳು ಆಗ ವೈರಲ್ ಆಗಿದ್ದವು.



