ಕೆಜಿಎಫ್ ನನ್ನ ಆಯ್ಕೆಯ ಸಿನಿಮಾ ಅಲ್ಲ. ಅದೊಂದು ಮೈಂಡ್‍ಲೆಸ್ ಸಿನಿಮಾ. ನಾನಂತೂ ಕೆಜಿಎಫ್ ನೋಡಿಲ್ಲ. ನಟ ಕಿಶೋರ್ ಕೆಜಿಎಫ್ ಕುರಿತು ನೀಡಿದ್ದ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬಿರುಗಾಳಿಯೆಬ್ಬಿಸಿತ್ತು. ಈ ಎಲ್ಲ ವಿವಾದಕ್ಕೂ ನಟ ಕಿಶೋರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮೈಂಡ್ ಲೆಸ್ ನನ್ನ ಪದವೇ ಅಲ್ಲ :
ಮೈಂಡ್‍ಲೆಸ್ ನನ್ನ ಪದ ಅಲ್ಲ. ಇಡೀ ಸಂದರ್ಶನದಲ್ಲಿ ನಾನು ಆ ಪದವನ್ನು ಹೇಳಿಲ್ಲ. ಅದು ಹೇಗೆ ವಿವಾದವಾಯಿತೋ ಗೊತ್ತಿಲ್ಲ
ಇದೊಂದು ಹಳೆಯ ಸಂದರ್ಶನ. ಹುಡುಕಿ ವಿವಾದ ಸೃಷ್ಟಿಸಿದ್ದಾರೆ.
ವಿವಾದ ಹುಟ್ಟಿದ್ದೆಲ್ಲಿ?

ಹಾಗಾದರೆ ಕಿಶೋರ್ ಕೆಜಿಎಫ್ ಬಗ್ಗೆ ಕಿಶೋರ್ ಅವರಿಗೆ ಹೆಮ್ಮೆ ಇಲ್ಲವಾ?
ಖಂಡಿತಾ ಹೆಮ್ಮೆಯಿದೆ. ಒಬ್ಬ ತಂತ್ರಜ್ಞನಾಗಿ ಆ ಚಿತ್ರ ಇಂಡಿಸ್ಟ್ರಿಯನ್ನು ಬೇರೆಯದೇ ಹಂತಕ್ಕೆ ಕೊಂಡೊಯ್ದಿದೆ. ಅದರ ಬಗ್ಗೆ ಸಂಭ್ರಮವೂ ಇದೆ. ಆದರೆ ವೈಯಕ್ತಿಕವಾಗಿ ಸಿನಿಮಾ ನೋಡಬೇಕು ಎಂದಾಗ ಕೆಜಿಎಫ್ ನನ್ನ ಆಯ್ಕೆಯ ಸಿನಿಮಾ ಅಲ್ಲ. ನನಗೆ ಸಣ್ಣ ಸಣ್ಣ ಗಂಭೀರ ವಿಚಾರಗಳಿರುವ ಸಿನಿಮಾಗಳು ಇಷ್ಟ.


ನಾನು ಕೂಡಾ ಹಣಕ್ಕಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದ್ದೇನೆ. ನಿಮಗೆ ತಮಿಳಿನ ವಿಸಾರಣೈ ಗೊತ್ತಿರಬಹುದು. ನಾನೂ ನಟಿಸಿದ್ದೇನೆ. ಒಳ್ಳೆಯ ಚಿತ್ರವೇ. ಆದರೆ ಆ ಚಿತ್ರವನ್ನು ನಾನು ನೋಡಲಿಲ್ಲ. ಹಿಂಸೆಯನ್ನು ಸಹಿಸಿಕೊಳ್ಳುವುದು ನನಗೆ ಆಗಲಿಲ್ಲ. ನನ್ನ ಅನೇಕ ಚಿತ್ರಗಳನ್ನು ನಾನು ನೋಡಿಲ್ಲ. ಪ್ರತಿಯೊಬ್ಬರಿಗೂ ಬೇರೆ ಬೇರೆ ಅಭಿರುಚಿ, ಆಯ್ಕೆಗಳಿರುತ್ತವೆ.
ನಿಮ್ಮ ಸಿದ್ಧಾಂತಕ್ಕೆ ಒಪ್ಪುವ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೀರಾ?
ಐಡಿಯಾಲಜಿಯೇ ಬೇರೆ. ನಟನೆಯೇ ಬೇರೆ. ನಾನು ನಂಬಿರುವ ಸಿದ್ಧಾಂತ ನನ್ನ ಕೆರಿಯರ್ ಮತ್ತು ನಟನೆಯ ಮೇಲೆ ಸವಾರಿ ಮಾಡಲು ಬಿಟ್ಟಿಲ್ಲ. ನನ್ನ ಅದೃಷ್ಟಕ್ಕೆ ಒಳ್ಳೊಳ್ಳೆಯ ನಿರ್ದೇಶಕರು ನನಗೆ ಸಿಕ್ಕಿದ್ದಾರೆ.
ಪ್ರೇಕ್ಷಕರಿಗೆ ಹೇಳುವ ಮಾತು..
ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರನ್ನು ಥಿಯೇಟರಿನ ಒಳಗೆ ತಳ್ಳೋಕೆ ಆಗಲ್ಲ. ಹೊರಗೆ ತಳ್ಳೋಕೂ ಆಗಲ್ಲ. ನನ್ನ ಸಿನಿಮಾಮಾದರೂ ಸರಿ, ಬೇರೆಯವರ ಸಿನಿಮಾ ಆದರೂ ಸರಿ. ಸಿನಿಮಾ ನೋಡೋದು ನನ್ನ ಆಯ್ಕೆ ಎಂದಿದ್ದಾರೆ ಕಿಶೋರ್.
ಬೆಂಗಳೂರು ಟೈಮ್ಸ್`ಗೆ ನೀಡಿದ ಸಂದರ್ಶನದಲ್ಲಿ ಈ ಉತ್ತರ ಕೊಟ್ಟಿದ್ದಾರೆ ನಟ ಕಿಶೋರ್.



