ಕಾಂತಾರ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಸಚಿನ್ ತೆಂಡೂಲ್ಕರ್ ದಾಖಲೆಗಳ ಹಾಗೆ. ಒಂದು ಮೈಲ್ ಸ್ಟೇಜ್ ದಾಟಿದ ಮೇಲೆ ಮಾಡಿದ್ದೆಲ್ಲ ದಾಖಲೆಯೇ.. ಹಾಗೆಯೇ ಇದೂ ಕೂಡಾ. ಈಗ ಕಾಂತಾರ ಮುಟ್ಟಿದ್ದೆಲ್ಲ ದಾಖಲೆ. ಅಂದಹಾಗೆ ದೀಪಾವಳಿ ಸಂಭ್ರಮ ಮುಗಿಯುವ ಹೊತ್ತಿಗೆ ಕಾಂತಾರ 200 ಕೋಟಿ ಕ್ಲಬ್ ಸೇರೋದು ಪಕ್ಕಾ.
ಅಮೆರಿಕ ಮಾರುಕಟ್ಟೆ ದಾಖಲೆ : ಅಮೆರಿಕ ಹಾಗೂ ಕೆನಡಾದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳ ಎದುರು ಇಂಡಿಯಾದಲ್ಲಿ ನಡೆಯೋ ಹಾಗೆ ಬೀದಿಗಳಲ್ಲಿ ಕ್ಯೂ ನಿಂತು ಚಿತ್ರ ನೋಡುತ್ತಿರುವುದು ವಿಶೇಷ. ಯುಎಸ್‍ನಲ್ಲಿ ಚಿತ್ರದ ಕಲೆಕ್ಷನ್ 10 ಕೋಟಿ ದಾಟಿದೆ. 1.23 ಮಿಲಿಯನ್ ಡಾಲರ್. ಇದರಲ್ಲಿ ಕನ್ನಡದ ವರ್ಷನ್ 917 ಸಾವಿರ ಡಾಲರ್. ತೆಲುಗು ವರ್ಷನ್ 307 ಸಾವಿರ ಡಾಲರ್.


ಹಿಂದಿ ಕ್ರೇಜ್ : ಫಸ್ಟ್ ಡೇ ಕ್ರೇಜ್ ಇರುತ್ತೆ. 2ನೇ ದಿನವೂ ಕ್ರೇಜ್ ಇರುತ್ತೆ. ಆದರೆ.. ವಾರದ ನಂತರ ಚಿತ್ರ ನೋಡಿದವರ ಬಾಯಿ ಪ್ರಚಾರದಿಂದಲೇ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುವ ಸಿನಿಮಾ ಕಾಂತಾರ. . ಮೊದಲ ದಿನಕ್ಕಿಂತ 2ನೇ ದಿನ, 2ನೇ ದಿನಕ್ಕೆ 3ನೇ ದಿನ, 3ನೇ ದಿನಕ್ಕಿಂತ 4ನೇ ದಿನ.. ಹೀಗೆ ಕಲೆಕ್ಷನ್ ಏರುಗತಿಯಲ್ಲೇ ಇದೆ. 8ನೇ ದಿನಕ್ಕೆ 20 ಕೋಟಿ ಕ್ಲಬ್ ಸೇರಿದ್ದು ಹಿಂದಿಯೊಂದರಲ್ಲಿಯೇ 50 ಕೋಟಿ ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ.


ಕನ್ನಡಕ್ಕಿಂತ.. : ಇದೂ ಒಂದು ಹೆಮ್ಮೆಯೇ. ಇಡೀ ಇಂಡಿಯಾದಲ್ಲಿ ಅತೀ ಹೆಚ್ಚು ಸಿನಿಮಾ ನೋಡುವವರು ತೆಲುಗರು. ಅಲ್ಲಿ ಕನ್ನಡಕ್ಕಿಂತ ಹೆಚ್ಚು ಶೋಗಳಿವೆ. ಆಂಧ್ರ ಮತ್ತು ತೆಲಂಗಾಣದಲ್ಲಿ 600ಕ್ಕೂ ಶೋಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಮಹಾರಾಷ್ಟ್ರದಲ್ಲಿ ಹಿಂದಿಯಲ್ಲಿ 530ಕ್ಕೂ ಹೆಚ್ಚು ಶೋಗಳಿವೆ. 3ನೇ ಸ್ಥಾನ ಕರ್ನಾಟಕದ್ದು. 480 ಶೋಗಳಿವೆ. ಶೋಗಳ ನಂಬರ್ ಲೆಕ್ಕದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ. ಅಫ್‍ಕೋರ್ಸ್.. 25 ದಿನಗಳ ನಂತರದ್ದು. ಗುಜರಾತ್‍ನಲ್ಲಿ 420ಕ್ಕೂ ಹೆಚ್ಚು ಹಾಗೂ ಕೇರಳದಲ್ಲಿ 150ಕ್ಕೂ ಹೆಚ್ಚು ಶೋಗಳಿವೆ.


ಬೇರೆ ಬಾಷೆಗಳಲ್ಲಿ : ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಹಿಂದಿಯಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದು. ಹಿಂದಿಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ತೆಲುಗಿನಲ್ಲಿ 25 ಕೋಟಿ ಕಲೆಕ್ಷನ್ ದಾಟಿ ಮುನ್ನಡೆದಿದ್ದರೆ ತಮಿಳಿನಲ್ಲಿ ಹಿಟ್ ಎನಿಸಿಕೊಂಡಿದೆ. ಕಲೆಕ್ಷನ್ ಲೆಕ್ಕ ಸಿಕ್ಕಿಲ್ಲ. ಮಲಯಾಳಂನಲ್ಲಿ ಸೂಪರ್ ಹಿಟ್ ಎನಿಸಿಕೊಳ್ಳುವ ಹಾದಿಯಲ್ಲಿದೆ.



