ಹಿಂದಿ ಚಿತ್ರರಂಗಕ್ಕೆ ಮತ್ತೆ ಮತ್ತೆ ಶಾಕ್ ಟ್ರೀಟ್‍ಮೆಂಟ್ ಸಿಗುತ್ತಿದೆ. ಈ ಬಾರಿಯೂ ಕೂಡಾ. ಈ ವಾರ ಎರಡು ಚಿತ್ರಗಳು ರಿಲೀಸ್ ಆಗಿದ್ದವು. ಅಕ್ಷಯ್ ಕುಮಾರ್ ಅಭಿನಯದ ರಾಮ್‍ಸೇತು ಹಾಗೂ ಅಜಯ್ ದೇವಗನ್ ಅಭಿನಯದ ಥ್ಯಾಂಕ್ ಗಾಡ್. ಎರಡೂ ಚಿತ್ರಗಳಲ್ಲಿ ದೇವರು ಧರ್ಮದ ಕಥೆಯಿತ್ತು. ಆದರೆ ಎರಡೂ ಚಿತ್ರಗಳು ಫೇಲ್ ಆಗಿವೆ.


ರಾಮ್‍ಸೇತು ಕೂಡಾ ಅಷ್ಟೆ. ಚಿತ್ರದ ಕ್ಯಾನ್ವಾಸ್ ಸಖತ್ತಾಗಿಯೇ ಇತ್ತು. ರಾಮ್‍ಸೇತು ಪ್ರಕೃತಿ ನಿರ್ಮಿತವೋ.. ಮನುಷ್ಯ ನಿರ್ಮಿತವೋ.. ಎಂದು ಸಂಶೋಧಕನೊಬ್ಬ ಹುಡುಕಲು ಹೊರಡುವ ಕಥೆ. ಅಕ್ಷಯ್ ಕುಮಾರ್ ನಟನೆ, ಕಥೆ ಚೆನ್ನಾಗಿದ್ದರೂ ಅವುಗಳನ್ನು ಟೋಟಲ್ ಆಗಿ ಜೋಡಿಸುವುದರಲ್ಲಿ ನಿರ್ದೇಶಕರು ಸೋತಿದ್ದಾರೆ. ಕಾನ್ಸೆಪ್ಟ್ ಅದ್ಧೂರಿಯಾಗಿದ್ದರೂ ಚಿತ್ರವನ್ನು ಪೇಲವವಾಗಿ ಚಿತ್ರಿಸಲಾಗಿದೆ. ಬೋರ್ ಹೊಡೆಸುತ್ತಿದೆ ಎಂದು ಪ್ರೇಕ್ಷಕರು ಎದ್ದು ನಡೆದಿದ್ದಾರೆ.

ಆದರೆ ಈ ಮಧ್ಯೆ ರಾಕಿಂಗ್ ಆಗಿರುವುದು ರಾಕೆಟ್ ವೇಗದಲ್ಲಿ ಓಡುತ್ತಿರುವುದು ಕನ್ನಡದ ಕಾಂತಾರ. ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದ್ದ ಸಿನಿಮಾ ಆರಂಭದಲ್ಲಿ ಆವರೇಜ್ ಎನ್ನುವ ಓಪನಿಂಗ್ ಪಡೆದುಕೊಂಡಿತು. ಆದರೆ ಡಬ್ಬಿಂಗ್ ಚಿತ್ರಕ್ಕೆ ಅದು ಅದ್ಧೂರಿ ಓಪನಿಂಗ್ ಎನ್ನುವುದಂತೂ ಸತ್ಯ. ಈಗ 2ನೇ ವಾರಕ್ಕೆ ಕಾಲಿಟ್ಟಿದ್ದು ಚಿತ್ರದ ಕಲೆಕ್ಷನ್ 25 ಕೋಟಿ ದಾಟಿದೆ. ಟಿಕೆಟ್ ದರವೂ ಕಡಿಮೆಯಿದ್ದು ಕನ್ನಡದಲ್ಲಿ ಆದಂತೆಯೇ ಅಲ್ಲಿಯೂ ಚಿತ್ರ ನೋಡಿದವರೇ ಚಿತ್ರವನ್ನು ಪ್ರಚಾರ ಮಾಡುತ್ತಿದ್ದಾರೆ.



