ಕಿಚ್ಚ ಸುದೀಪ್. ವಾಯ್ಸು ಗ್ರೇಟು.. ಹೈಟು ಮೌಂಟ್ ಎವರೆಸ್ಟು. ಮಾತಿನಲ್ಲೇ ಕೊಡ್ತಾರೆ ಬೂಸ್ಟು.. ಕಾಲೆಳೆಯೋಕೆ ಬಂದವ್ರನ್ನ ಮಾತಿನಲ್ಲೇ ಮಾಡ್ತಾರೆ ರೋಸ್ಟು.. ಹ್ಯಾಂಡ್`ಸಮ್ ಲುಕ್ಕು.. ಕಣ್ಣಲ್ಲೇ ಕೊಡ್ತಾರೆ ಕಿಕ್ಕು.. ಅರೆರೇ.. ಇದೇನು ಅನುಶ್ರೀ ನಿರೂಪಣೆ ಸ್ಟೈಲಲ್ಲಿ ಎಂದು ತಲೆಕೆರೆದುಕೊಳ್ಳಬೇಡಿ. ಇದು ಹಾಗಲ್ಲ. ಸುದೀಪ್ ಅವರು ನಟರಷ್ಟೇ ಅಲ್ಲ, ಹಾಡುಗಾರ.. ಮಾತುಗಾರ.. ಕೂಡಾ. ಅವರ ಮಾತಿನಲ್ಲಿ ನಗು ಅರಳುತ್ತಲೇ ಇರುತ್ತೆ. ಕಣ್ಣಿನಲ್ಲೂ ಮಾತನಾಡುವ ಸುದೀಪ್ ಇತ್ತೀಚೆಗೆ ಮಾಧ್ಯಮಗಳಿಗೆ ಮಾತನಾಡುವಾಗ ಹೇಳಿರುವ ಮಾತುಗಳನ್ನು ನೋಡಿದರೆ ನಗು ಬರುತ್ತೆ. ಜೊತೆಯಲ್ಲೇ ಕನ್ನಡತನ ಅಥವಾ ಸ್ವಂತಿಕೆ ಬಿಟ್ಟುಕೊಡದ ಸುದೀಪ್ ಬೇರೆಯದೇ ರೀತಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಹಾಗಂತ ಅದು ಹೆಬ್ಬುಲಿಯ ಆರ್ಭಟವಲ್ಲ. ಪೈಲ್ವಾನನ ಪರಾಕ್ರಮವೂ ಅಲ್ಲ. ಕಿಚ್ಚ ಸುದೀಪ್ ನಟರಷ್ಟೇ ಅಲ್ಲ, ಮಾತುಗಾರರೂ ಕೂಡಾ. ಅವರು ಆಡಿದ ಮಾತುಗಳು ಕೆಲವೊಮ್ಮೆ ವಿವಾದವೂ ಆಗುತ್ತವೆ. ಆದರೆ ಅವುಗಳನ್ನು ಬ್ಯಾಲೆನ್ಸ್ ಮಾಡುವುದೂ ಗೊತ್ತು. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ನಡೆದ ಲಾಂಗ್ವೇಜ್ ವಾರ್ ನೆನಪಿದೆ ತಾನೇ.. ಅದನ್ನು ನೆನಪಿಟ್ಟುಕೊಂಡೇ ಇತ್ತೀಚೆಗೆ ಮೀಡಿಯಾದಲ್ಲಿ ಒಂದು ಪ್ರಶ್ನೆ ಎದುರಾಯಿತು. ಹಿಂದಿ ರಾಷ್ಟ್ರೀಯ ಭಾಷೆ ಎಂದು ಅಜಯ್ ದೇವಗನ್ ಮಾಡಿದ್ದ ಟ್ವೀಟ್ ಸೃಷ್ಟಿಸಿದ್ದ ರಂಪ ರಗಳೆಯನ್ನು ಜನ ಮರೆತಿಲ್ಲ. ಹೀಗಾಗಿಯೇ ಕೆಲವು ಪ್ರಶ್ನೆಗಳು ಸುದೀಪ್ ಅವರಿಗೆ ಎದುರಾದವು.
ಮೊದಲ ಪ್ರಶ್ನೆ : ನೀವು ಪಠಾಣ್ ಚಿತ್ರವನ್ನು ನೋಡಿದ್ದೀರಾ?
ಇಲ್ಲ, ಇನ್ನೂ ನೋಡಿಲ್ಲ. ನೋಡುತ್ತೇನೆ ಎಂದ ಸುದೀಪ್, ನಾನು ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನೋಡುವಲ್ಲೇ ಬ್ಯುಸಿಯಾಗಿದ್ದೆ ಎಂದರು. ನೋಡಬೇಕಾದ ಕನ್ನಡ ಚಿತ್ರಗಳ ಪಟ್ಟಿ ಇನ್ನೂ ದೊಡ್ಡದಿದೆ. ಅವನ್ನೆಲ್ಲ ಮುಗಿಸಿ ನೋಡುತ್ತೇನೆ ಎಂದರು.
ಎರಡನೇ ಪ್ರಶ್ನೆ : ನಿಮ್ಮ ಪ್ರಕಾರ ಬಿಗ್ಗೆಸ್ಟ್ ಸ್ಟಾರ್ ಯಾರು..?
ಸುದೀಪ್ ಕೊಟ್ಟ ಉತ್ತರ ನಾನೇ.. ಯಾರ ಹೆಸರು ಹೇಳಿದರೂ ವಾರ್ ಶುರುವಾಗುತ್ತೆ. ನನಗೆ ನಾನೇ ದೊಡ್ಡ ಸ್ಟಾರ್ ಎಂದುಕೊಳ್ಳೋದ್ರಲ್ಲಿ ತಪ್ಪೇನಿದೆ. ಹಾಗಂತ ಬೇರೆಯವರನ್ನು ಕೆಟ್ಟದಾಗಿಯೂ ಬಿಂಬಿಸಲಿಲ್ಲ. ನನ್ನ ಜೀವನಕ್ಕೆ ನಾನೇ ಸ್ಟಾರ್. ಹಾಗಂತ ಬೇರೆಯವರ ಬಗ್ಗೆ ಗೌರವ ಇದೆ ಎಂದರು ಸುದೀಪ್.


ಸುದೀಪ್ ಹೇಳಿದ ಉತ್ತರ ಕಾಜೊಲ್. ನನಗೆ ಕಾಜೊಲ್ ಎಂದರೆ ಇಷ್ಟ, ಆದರೆ ಅಜಯ್ ದೇವಗನ್ ನನ್ನನ್ನು ದ್ವೇಷ ಮಾಡಬಾರದು ಎಂದ ಸುದೀಪ್, ನಗುತ್ತಲೇ ಅಜಯ್ ದೇವಗನ್ ನನ್ನ ಫೇವರಿಟ್ ನಟ ಎಂದರು. ಅಷ್ಟೇ ಅಲ್ಲ, ಕಾಜೊಲ್ ಜೊತೆ ನಟಿಸುವಾಗ ಅಜಯ್ ದೇವಗನ್ ಕಣ್ಣು ಬೆಂಕಿಯುಗುಳುತ್ತವೆ. ಅದನ್ನು ನೋಡೋಕೆ ನನ್ನ ಕೈಲಿ ಆಗಲ್ಲ ಎನ್ನುವ ಮೂಲಕ ಅಜಯ್ ದೇವಗನ್ ಕಾಲೆಳೆದರು ಸುದೀಪ್.
ಪ್ರಶ್ನೆ : ಸೌತ್ ಸಿನಿಮಾಗಳು ಬಾಲಿವುಡ್‍ನ್ನು ಡಾಮಿನೇಟ್ ಮಾಡುತ್ತಿವೆ. ಏನ್ ಹೇಳ್ತೀರಿ?
ಈ ಪ್ರಶ್ನೆಗೆ ಇದೊಂದು ಕೆಲವರು ಸೃಷ್ಟಿಸಿಕೊಂಡ ಕಥೆ ಎಂಬ ಅರ್ಥ ಬುರುವಂತೆ ಸುದೀರ್ಘವಾಗಿಯೇ ಮಾತನಾಡಿದರು ಸುದೀಪ್. ನಾವೇನೂ ಕತ್ತಿ ಹಿಡಿದುಕೊಂಡು ಯುದ್ಧ ಮಾಡ್ತಿಲ್ಲ. ಅವರು ಮೊದಲು ಇಡೀ ಇಂಡಿಯಾ ಸಿನಿಮಾ ರಿಲೀಸ್ ಮಾಡ್ತಿದ್ರು. ನಾವು ಕಂಪ್ಲೇಂಟ್ ಮಾಡಲಿಲ್ಲ. ನಮ್ಮ ಪಾಡಿಗೆ ಸಿನಿಮಾ ಮಾಡ್ತಾ ಎಂಜಾಯ್ ಮಾಡ್ತಿದ್ದೆವು. ದಕ್ಷಿಣ ಭಾರತದ ಯಾರೊಬ್ಬರೂ ಬೌನ್ಸ್ ಬ್ಯಾಕ್ ಮಾಡುತ್ತೇವೆ ಎಂದು ಹೇಳಿಕೆ ಕೊಡಲಿಲ್ಲ. ಈಗ ಅವರು ನಮ್ಮ ಸಿನಿಮಾ ಎಂಜಾಯ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಸ್ಟೇಟ್ ಮೆಂಟ್ ಕೊಡುತ್ತಿರುವುದು ಚಿತ್ರರಂಗದವರಲ್ಲ. ಹಿಂದಿ ಚಿತ್ರರಂಗ ಹೆದರಿಲ್ಲ. ದಕ್ಷಿಣ ಭಾರತ ಚಿತ್ರರಂಗ ಖುಷಿಯಿಂದ ಪಾರ್ಟಿ ಮಾಡ್ತಿಲ್ಲ. ಹೇಳಿಕೆ ಕೊಡ್ತಿರೋದು 3ನ# ವ್ಯಕ್ತಿಗಳು. ಅವರು ಅವರ ಪಾಡಿಗೆ, ನಾವು ನಮ್ಮ ಪಾಡಿಗೆ ಸಿನಿಮಾ ಮಾಡ್ತಿದ್ದೇವೆ ಎಂದಿದ್ದಾರೆ ಸುದೀಪ್. ಮೇಕಪ್ ತೆಗೆದು ನಿದ್ರೆ ಮಾಡುವ ನಾವು ಮಾರನೇ ದಿನ ಮತ್ತೊಂದು ಸಿನಿಮಾಗೆ ಸಿದ್ಧರಾಗಬೇಕು. ಇವನ್ನೆಲ್ಲ ಎಂಜಾಯ್ ಮಾಡೋಕೆ ಟೈಮಿಲ್ಲ.
ಪ್ರಶ್ನೆ : ಹಾಗಾದರೆ ಗೆಲುವಿನ ಸೀಕ್ರೆಟ್ ಏನು?
ಹೊಸತನದ ಕಥೆ ಅಷ್ಟೆ, ಈ ಹಿಂದೆ ಚೈನೀಸ್ ಸಿನಿಮಾಗಳು ಹಲವು ಬಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದ್ದವು. ಜನಕ್ಕೆ ಇಷ್ಟವಾಯಿತು. ಮೆಚ್ಚಿಕೊಂಡರು. ಕೊರಿಯನ್ ಸಿನಿಮಾಗಳೂ ಅಷ್ಟೆ, ಈಗ ನಮ್ಮ ಕಾಂತಾರ ತೆಗೆದುಕೊಳ್ಳಿ, ಅದು ನಮ್ಮ ನೆಲದ ಕಥೆ. ನಮ್ಮ ಮಣ್ಣಿನ ಕಥೆ. ಉತ್ತರದವರಿಗೆ ಅದು ಹೊಸದಾಗಿತ್ತು. ಇಷ್ಟವಾಯಿತು. ಜನ ಹೊಸ ಕಥೆ ಹೇಳಿದಾಗ ಖಂಡಿತಾ ಮೆಚ್ಚಿಕೊಳ್ತಾರೆ..
ಕಳೆದ ವರ್ಷ ವಿಕ್ರಾಂತ್ ರೋಣ ಹಿಂದಿಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಮುಂದಿನ ತಿಂಗಳು ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಬ್ಜ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ.



