ಸುಮಾರು ವರ್ಷಗಳ ಹಿಂದೆ ಕಿರಾತಕ ಚಿತ್ರ ತೆರೆಗೆ ಬಂದಿತ್ತು. ಯಶ್ ಅವರಿಗೆ ಸ್ಟಾರ್ ಪಟ್ಟವನ್ನು ಪರಿಚಯಿಸಿದ ಚಿತ್ರವೆಂದರೆ ಕಿರಾತಕ. ಆ ಚಿತ್ರದ ಮೂಲಕ ಮಂಡ್ಯ ಭಾಗದಲ್ಲಿ ಸ್ಟಾರ್ ಆದ ಯಶ್, ನಂತರ ಪ್ರತಿ ಚಿತ್ರದಲ್ಲೂ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗಿದ್ದು ಇತಿಹಾಸ. ಅವರೀಗ ಇಂಡಿಯಾ ಸ್ಟಾರ್.
ಯಶ್ ಕೇವಲ ನಟರಲ್ಲ. ಸಮಾಜ ಸೇವೆಯಲ್ಲೂ ಮುಂದಿರುತ್ತಾರೆ. ಅವರ ಯಶೋಮಾರ್ಗದ ಸೇವೆಯೇ ಅದಕ್ಕೆ ಉದಾಹರಣೆ. ಯಶೋಮಾರ್ಗದ ಮೂಲಕ ಹಲವು ಕೆರೆ, ಕಲ್ಯಾಣಿಗಳ ಜೀರ್ಣೋದ್ಧಾರ ಮಾಡಿಸಿರುವ ಯಶ್, ಕೊರೊನಾ ಸಂಕಷ್ಟದಲ್ಲಿ ಚಿತ್ರರಂಗದ ಕಿರಿಯ ಕಲಾವಿದರು, ತಂತ್ರಜ್ಞರ ನೆರವಿಗೆ ಬಂದಿದ್ದರು. ಇದೀಗ ಅವರು ಮಾಡಿದ್ದ ಮತ್ತೊಂದು ದೇವರ ಕೆಲಸ ಬೆಳಕಿಗೆ ಬಂದಿದೆ.
ಡೇನಿಯಲ್ ಬಾಲಾಜಿ. ತಮಿಳು ನಟ. ವಿಲನ್ ಪಾತ್ರಗಳಲ್ಲಿ ಹೆಚ್ಚು ಫೇಮಸ್. ವಡಚೆನ್ನೈ, ಪೊಲ್ಲದವನ್ ಮತ್ತು ವಡಚೆನ್ನೈ ಮುಂತಾದ ಚಿತ್ರಗಳಲ್ಲಿನ ಬಾಲಾಜಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಜೊತೆ ಕಿರಾತಕ ಚಿತ್ರದಲ್ಲಿಯೂ ನಟಿಸಿದ್ದರು. ಹೀರೋಯಿನ್ ಅಣ್ಣನ ಪಾತ್ರದಲ್ಲಿ ನಟಿಸಿದ್ದವರೇ ಈ ಡೇನಿಯಲ್ ಬಾಲಾಜಿ.
ಕ್ರಿಶ್ಚಿಯನ್ ಆದರೂ ಡೇನಿಯಲ್ ಬಾಲಾಜಿ ಅವರ ತಾಯಿಗೆ ಅಂಗಲಾ ಪರಮೇಶ್ವರಿ ದೇವಸ್ಥಾನ ಕಟ್ಟಿಸುವ ಆಸೆಯಿತ್ತು. ಆ ದೇವಸ್ಥಾನ ಕಟ್ಟಿಸುವ ಕೆಲಸಕ್ಕಾಗಿ ಹಲವು ಸಿನಿಮಾಗಳನ್ನು ಕೈಬಿಟ್ಟು ದೇವಸ್ಥಾನ ಕಟ್ಟಿಸುವ ಕೆಲಸಕ್ಕೆ ನಿಂತಿದ್ದರು ಡೇನಿಯಲ್ ಬಾಲಾಜಿ. ಆ ಸಂದರ್ಭದಲ್ಲಿಯೇ ಬಾಲಾಜಿ ಅವರಿಗೆ ಯಶ್ ಅವರು ಫೋನ್ ಮಾಡಿದ್ದರಂತೆ.


ಯಶ್ ಅವರು ಈ ರೀತಿ ಗೊತ್ತಿಲ್ಲದೆ ಸಹಾಯ ಮಾಡುವುದು ಇದೇ ಮೊದಲೇನಲ್ಲ. ಕೆಳದಿ ಶಿವಪ್ಪನಾಯಕನ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿಸಿದಾಗ, ಕೊಪ್ಪಳದಲ್ಲಿ 40 ಕೆರೆಗಳ ಕೇಂದ್ರ ಬಿಂದು ಕೆರೆಯನ್ನು ಜೀರ್ಣೋದ್ಧಾರ ಮಾಡಿಸಿದಾಗ.. ದೊಡ್ಡ ಸುದ್ದಿಯಾಗಿತ್ತೇನೋ ಹೌದು. ಈಗ ಆ ಕೆಲಸದ ಮೂಲಕ ಸಾವಿರಾರು ಜನ ಕುಡಿಯುವ ನೀರಿಗಾಗಿ, ಬದುಕಿಗಾಗಿ ಪರದಾಡುವುದು ತಪ್ಪಿದೆ. ಅದರ ಹೊರತಾಗಿಯೂ ಹಲವು ಕೆಲಸಗಳನ್ನು ಪ್ರೀತಿ, ಸ್ನೇಹ, ವಿಶ್ವಾಸಕ್ಕಾಗಿ ಮಾಡುವುದು ಯಶ್. ಅಂದಹಾಗೆ ಈ ದೇವಸ್ಥಾನ ತಮಿಳುನಾಡಿನಲ್ಲಿದೆ.



