ಪುನೀತ್ ರಾಜಕುಮಾರ್ ಅಭಿಮಾನಿಗಳ ಪಾಲಿಗೆ ದೇವರಾಗಿಯೇ ಹೋಗಿದ್ದಾರೆ. ಪುನೀತ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಆರಾಧಿಸುವುದು ಬೇರೆ. ಪ್ರೀತಿಸುವುದು ಬೇರೆ. ಆದರೆ ದೇವರನ್ನಾಗಿಸಿಯೇ ಪೂಜಿಸುವುದು ಬೇರೆ. ಹೊಸಪೇಟೆಯಲ್ಲಿನ ಅಭಿಮಾನಿ ಸಂಘ ಪುನೀತ್ ಮಾಲೆಯನ್ನೇ ಶುರು ಮಾಡಿದೆ. ಅಯ್ಯಪ್ಪ ಸ್ವಾಮಿ, ದತ್ತ ಮಾಲೆ, ಹನುಮ ಮಾಲೆ.. ಮಾದರಿಯಲ್ಲಿ ಪುನೀತ ಮಾಲೆಯೂ ಶುರುವಾಗುತ್ತಿದೆ. ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಆದರೆ ಅದು ಸರಿಯೇ..? ಈ ಪ್ರಶ್ನೆಯೂ ಎದ್ದಿದೆ.


ಅಯ್ಯಪ್ಪ ಮಾಲೆ ಮಾದರಿಯಲ್ಲಿ ಪುನೀತ ಮಾಲೆ ಆರಂಭ ಮಾಡುತ್ತಿರುವುದಕ್ಕೆ ಪರ ವಿರೋಧ ಅಭಿಪ್ರಾಯಗಳೆರಡೂ ಇವೆ. ಪ್ರಥಮ್ ಅವರ ವಿರೋಧಕ್ಕೆ ಕೂಡಾ ಪರ ವಿರೋಧ ಅಭಿಪ್ರಾಯಗಳೆರಡೂ ಇವೆ.



