ಸಲಗ ಚಿತ್ರದ ಮೂಲಕ ಸೆನ್ಸೇಷನ್ ಸೃಷ್ಟಿಸಿದ ದುನಿಯಾ ವಿಜಯ್ ಮೊದಲ ನಿರ್ದೇಶನದಲ್ಲೇ ಸೂಪರ್ ಸಕ್ಸಸ್ ಕಂಡವರು. ಅತ್ತ ತೆಲುಗಿನಲ್ಲೂ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಅಬ್ಬರಿಸಿ ಬೊಬ್ಬಿರಿದು ಉಘೇ ಉಘೇ ಎನ್ನಿಸಿಕೊಂಡೇ ಬಂದಿರೋ ವಿಜಯ್ ಕುಮಾರ್, ಮತ್ತೊಮ್ಮೆ ಭೀಮ ಚಿತ್ರದದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು 6 ತಿಂಗಳ ಹಿಂದೆಯೇ ಫೈನಲ್ ಮಾಡಿದ್ದ, ಚಿತ್ರೀಕರಣವನ್ನೂ ಮಾಡಿರುವ ಚಿತ್ರದ ಹೀರೋಯಿನ್ ಇವರೇ ಎಂದು ಪ್ರೇಮಿಗಳ ದಿನದಂದು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಭೀಮನ ಜೊತೆಯಾಗಿರುವ ಈಕೆ ಹಿಡಿಂಬಿಯಲ್ಲದೇ ಹೋದರು ಕಂಪ್ಲೀಟ್ ನಾಟಿ.




ನನ್ನನ್ನು ಒಂದು ಬುಕ್ ಶೋನಲ್ಲಿ ನೋಡಿದರು. ಭೀಮ ಚಿತ್ರದಲ್ಲಿ ಒಂದು ಪಾತ್ರ ಇದೆ, ಮಾಡ್ತೀರಾ ಎಂದು ಕೇಳಿದರು. ನಾನು ಯೆಸ್ ಎಂದಿದ್ದರೆ. ಅದಾದ ನಂತರ ನಾನು ಮರೆತೂಬಿಟ್ಟಿದ್ದೆ. ಅವರು ಮರೆತಿರಲಿಲ್ಲ. 6 ತಿಂಗಳ ಹಿಂದೆ ಕರೆ ಬಂತು. ಆಗಲೇ ನನಗೆ ಗೊತ್ತಾಗಿದ್ದು, ನನ್ನದು ಹೀರೋಯಿನ್ ಪಾತ್ರ ಅಂತ ಎಂದು ಹೇಳುತ್ತಾರೆ ಅಶ್ವಿನಿ.
ಹೊಸ ಮುಖ ಹುಡುಕುತ್ತಾ ಹೊರಟಾಗ ಸಿಕ್ಕ ಪ್ರತಿಭೆ ಅಶ್ವಿನಿ. ರಂಗಭೂಮಿಯಲ್ಲಿನ ಅವರ ನಟನೆ ನೋಡಿ ಆಯ್ಕೆ ಮಾಡಿದೆ ಎನ್ನುತ್ತಾರೆ ಡೈರೆಕ್ಟರ್ ವಿಜಯ್ ಕುಮಾರ್. ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣದ ಚಿತ್ರ ಭೀಮ.



