ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರ್ತಾರೆ. ಸಿನಿಮಾಗಳ ವಿಷಯದಲ್ಲಿ, ಕಾಂಟ್ರೊವರ್ಸಿಗಳಲ್ಲಿ, ಜಾಹೀರಾತುಗಳಲ್ಲಿ.. ಹೀಗೆ ಯಾವುದಾದರೊಂದು ರೀತಿಯಲ್ಲಿ ರಶ್ಮಿಕಾ ಸುದ್ದಿಯಾಗ್ತಾನೆ ಇರ್ತಾರೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಕನ್ನಡದ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿಲ್ಲ. ಅಫ್‍ಕೋರ್ಸ್, ರಶ್ಮಿಕಾಗೆ ಹೊಂದುವಂತ, ಇಷ್ಟವಾಗುವಂತಹ ಕಥೆಯೂ ಸಿಕ್ಕಿಲ್ಲ, ಅದು ಬೇರೆ ಮಾತು. ಹಲವು ಭಾಷೆಯ ಸಿನಿಮಾಗಳು, ಜಾಹೀರಾತುಗಳು, ಈವೆಂಟ್`ಗಳು.. ಹೀಗೆ ಕಂಪ್ಲೀಟ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣಗೆ ಒಬ್ಬ ಮ್ಯಾನೇಜರ್ ಇದ್ದ. ಆತನೇ ಎಲ್ಲ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದ.
ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನದ ಆರಂಭದಿಂದಲೇ ಈ ವ್ಯಕ್ತಿಯು ಮ್ಯಾನೇಜರ್ ಆಗಿ ನೇಮಕಗೊಂಡಿದ್ದ ಆ ವ್ಯಕ್ತಿ, ಎಲ್ಲ ಹಣಕಾಸಿನ ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದ. ಆದರೆ ರಶ್ಮಿಕಾಗೇ ಗೊತ್ತಿಲ್ಲದಂತೆ ಸುಮಾರು 80 ಲಕ್ಷ ರೂಪಾಯಿಗಳಷ್ಟು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನಂತೆ.
ಸದ್ದು ಮಾಡದೆ, ಸುದ್ದಿ ಮಾಡದೆ, ಕಾಂಟ್ರವರ್ಸಿ ಮಾಡಿಕೊಳ್ಳದೆ ಮ್ಯಾನೇಜರ್‍ಗೆ ಗೇಟ್ ಪಾಸ್ ಕೊಟ್ಟಿದ್ದಾರಂತೆ ರಶ್ಮಿಕಾ. ಆ ಮ್ಯಾನೇಜರ್ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.
ಇಡೀ ಪ್ರಕರಣವನ್ನು ಸೈಲೆಂಟ್ ಆಗಿ ಹ್ಯಾಂಡಲ್ ಮಾಡಿದ್ದಾರೆ. ಯಾವುದೇ ಸೀನ್ ಕ್ರಿಯೆಟ್ ಮಾಡದೇ, ಮ್ಯಾನೇಜರ್ ಹುದ್ದೆಯಿಂದ ಆತನನ್ನು ಕಿತ್ತೆಸೆದಿದ್ದಾರೆ. ಮೋಸ ಮಾಡಿದ್ದ ಹಣವನ್ನು ವಾಪಸ್ ತೆಗೆದುಕೊಂಡರಾ ಎಂದರೆ ಅದಕ್ಕೂ ನೋ ರಿಯಾಕ್ಷನ್.
ಸದ್ಯಕ್ಕೆ ಹಿಂದಿಯಲ್ಲಿ ಅನಿಮಲ್, ತೆಲುಗಿನಲ್ಲಿ ಪುಷ್ಪ ಸೇರಿಂದಂತೆ ಮೂರ್ನಾಲ್ಕು ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 10ಕ್ಕೂ ಹೆಚ್ಚು ಬ್ರಾಂಡ್`ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಒಂದೊಂದು ಸಿನಿಮಾಗಳ ಸಂಭಾವನೆ ಕೋಟಿಗಳ ಲೆಕ್ಕದಲ್ಲಿದೆಯಂತೆ. ಇದು ಗಾಸಿಪ್.



