ಕೃಷ್ಣ, ಟ್ರಿಪ್ ಹೋಗೋಣ್ವಾ, ಟಿಕೆಟ್ ಬುಕ್ ಮಾಡ್ತೀನಿ. ಸಮ್ಮರ್ ಚೆನ್ನಾಗಿರುತ್ತೆ ಎಂದು ಮಿಲನಾ ಕೇಳ್ತಿದ್ರೆ, ಇತ್ತ ಕೃಷ್ಣ ಬೇಡ ಬೇಡ.. ಪ್ಯಾರಿಸ್ಸಿಗೆ ಬುಕ್ ಮಾಡು.. ಅಂತಾರೆ. ಸಿಡುಕು ಅಂದ್ರೆ ಸಿಡುಕು. ಸಿಡುಕೇಶ್ವರ.. ಆದರೆ ಮಿಲನ ಸಿಟ್ಟು ಮಾಡ್ಕೊಳ್ಳೋದು ಕೃಷ್ಣನ ಮೇಲಲ್ಲ. ಶಶಾಂಕ್ ಮೇಲೆ.. ಅದೇ ಡೈರೆಕ್ಟರ್ ಶಶಾಂಕ್.. ಮೊಗ್ಗಿನ ಮನಸ್ಸು ಶಶಾಂಕ್. ಅವರೇ.. ಅಂದಹಾಗೆ ಇದೂ ಸಿನಿಮಾ ಪ್ರಮೋಷನ್ನೇ. ಕೌಸಲ್ಯ ಸುಪ್ರಜಾ ರಾಮ ಅನ್ನೋ ಸಿನಿಮಾ ರೆಡಿಯಾಗಿದೆ. ಕೃಷ್ಣ ಹೀರೋ. ಬೃಂದಾ ಆಚಾರ್ಯ ಹೀರೋಯಿನ್. ಇಡೀ ಸಿನಿಮಾದಲ್ಲಿ ಪಾತ್ರದೊಳಗೆ ಕೃಷ್ಣ ಹೇಗೆ ಪರಕಾಯ ಪ್ರವೇಶ ಮಾಡಿದ್ದಾರೆ ಅನ್ನೋದನ್ನ ತೋರಿಸೋಕೆ ಈ ಟೀಸರ್ ಬಿಟ್ಟಿದ್ದಾರೆ.
ಅಂದಹಾಗೆ ಇಲ್ಲಿ ಶಿವಾನಿಯ ಕಥೆ ಹೇಳ್ಬೇಕು. ಶಿವಾನಿಯ ಕಥೆ ಯಾಕ್ ಹೇಳ್ಬೇಕಂದ್ರೆ ಈಗ ಬಂದಿರೋದು ಶಿವಾನಿಯ ಟೀಸರ್. ಆಮೇಲೆ ಬರೋದು ಹಾಡು. ಶಿವಾನಿ ಹಾಡು. ಶಶಾಂಕ್ ಚಿತ್ರಗಳಲ್ಲಿ ಹಾಡು ಅದ್ಭುತವಾಗಿರುತ್ವೆ. ಸಾಹಿತ್ಯ ಬೊಂಬಾಟ್ ಆಗಿರುತ್ತೆ. ಜೊತೆಯಾಗಿರೋದು ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ. ಅಲ್ಲಿಗೆ ಹಾಡು ಸಖತ್ತಾಗಿಯೇ ಇರುತ್ತೆ. ಟೀಸರ್`ನಲ್ಲಿ ಅದರ ಝಲಕ್ ಮಾತ್ರವೇ ಇದೆ. ಕಿವಿಗಿಂಪಾಗಿದೆ.



