ಪ್ರೀತಿಗಾಗಿ ಹಲವರು ಹಲವು ತ್ಯಾಗ ಮಾಡುತ್ತಾರೆ. ಧರ್ಮವನ್ನೂ ತೊರೆಯುತ್ತಾರೆ. ಆದರೆ ಧರ್ಮವನ್ನೂ ತೊರೆದು ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯೂ ಆದವರು ಬೀದಿಗೆ ಬಿದ್ದ ಕಥೆಯಿದು. ಬೀದಿಗೆ ತಳ್ಳಿದ ವ್ಯಕ್ತಿಯೂ ಸಾಮಾನ್ಯನಲ್ಲ. ಬಾಲಿವುಡ್ ಸ್ಟಾರ್ ನಟ. ಅಂತಾರಾಷ್ಟ್ರೀಯ ಖ್ಯಾತಿ, ಮನ್ನಣೆ ಪಡೆದ ನಟ. ಆತನ ನಟನೆಯಂತೂ ಅದ್ಭುತ. ಆದರೆ ವೈಯಕ್ತಿಕ ಜೀವನ ಹಾಗಿಲ್ಲ. ತೆರೆ ಮೇಲೆ ಯಾವುದೇ ಪಾತ್ರವಿರಲಿ.. ಲೀಲಾಜಾಲವಾಗಿ ನಟಿಸುವ ಕಲಾವಿದ. ಆಕೆಗೋ.. ಒಮ್ಮೆ ಕೈತಪ್ಪಿ ಹೋಗಿದ್ದ ಪ್ರೀತಿಯನ್ನು 10 ವರ್ಷಗಳ ನಂತರ ಮರಳಿ ಪಡೆದು ಜೀವನ ಸುಖಾಂತ್ಯವಾಯಿತು ಎನ್ನುವಾಗ ನೋವು, ಸಂಕಟ, ದ್ರೋಹ ಅಟ್ಟಿಸಿಕೊಂಡು ಬರುತ್ತಿದೆ. ಒಬ್ಬ ಮಗಳನ್ನು ಒಪ್ಪಿಕೊಳ್ಳುವ ಸ್ಟಾರ್ ನಟ, ಇನ್ನೊಬ್ಬ ಮಗಳನ್ನು ದೂರ ಸರಿಸುತ್ತಿರುವುದೇಕೆ..?
ನವಾಜುದ್ದೀನ್ ಸಿದ್ಧಿಕಿ. ಹಿಂದಿಯಲ್ಲಿ ಖ್ಯಾತ ನಟ. ಹಲವು ಪ್ರಶಸ್ತಿ ಗಳಿಸಿರೋ ನವಾಜುದ್ದೀನ್ ಸಿದ್ಧಿಕಿ ವೈಯಕ್ತಿಕ ಜೀವನ ಮಾತ್ರ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತದೆ. ಇದೀಗ ಆತನ ಪತ್ನಿ ಅಲಿಯಾ ಸಿದ್ಧಿಕಿ, ಪತಿ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಆಕ್ರೋಶಗೊಂಡಿದ್ದಾಳೆ. ನವಾಜುದ್ದೀನ್ ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎನ್ನುವುದು ಆಲಿಯಾ ಸಿದ್ದಿಕಿ ಆರೋಪ.
ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಆಲಿಯಾ ಸಿದ್ದಿಕಿ ತನ್ನನ್ನೂ ಹಾಗೂ ತನ್ನ ಮಕ್ಕಳನ್ನು ನವಾಜುದ್ದೀನ್ ಸಿದ್ಧಿಕಿ ಮಧ್ಯರಾತ್ರಿ ಹೊರಹಾಕಿದ್ದಾನೆ ಎಂದು ವಿಡಿಯೋ ಬಿಟ್ಟಿದ್ದಾರೆ.
ಮಧ್ಯರಾತ್ರಿಯಲ್ಲೇ ಹೆಂಡ್ತಿ, ಮಕ್ಕಳನ್ನು ಹೊರಹಾಕಿದ ನವಾಜುದ್ದೀನ್ ಸಿದ್ದಿಕಿ: ವಿಡಿಯೋ ಹಂಚಿಕೊಂಡ ಆಲಿಯಾ 40 ದಿನ ಮನೆಯಲ್ಲೇ ಇದ್ದೆ. ಪೊಲೀಸರು ವಿಚಾರಣೆಗೆ ಕರೆದರು. ಹೋದೆ. ಆದರೆ ವಾಪಸ್ ಬಂದಾಗ ಮನೆಯ ಒಳಗೆ ಹೋಗದಂತೆ ನವಾಜುದ್ದೀನ್ ಸಿದ್ಧಿಕಿ ಸೆಕ್ಯುರಿಟಿ ನಿಯೋಜಿಸಿದ್ದ. ನನ್ನ ಮನೆಗೆ ನಾನೇ ಹೋಗಲು ಸಾಧ್ಯವಾಗದಂತೆ ಮಾಡಿ ಬೀದಿಗೆ ತಳ್ಳಿದ್ದ ಎಂದು ಹೇಳಿದ್ದಾರೆ. ಹೀಗಾಗಿ ಆಲಿಯಾ ತನ್ನ ಇಬ್ಬರು ಮಕ್ಕಳಾದ ಶೋರಾ ಮತ್ತು ಯಾನಿ ಅವರೊಂದಿಗೆ ಬೀದಿಯಲ್ಲಿ ರಾತ್ರಿ ಕಳೆದಿದ್ದಾರೆ. ಕೊನೆಗೆ ವಿಷಯ ತಳಿದ ಆಲಿಯಾ ಸಹೋದರಿ ಶಿವಾನಿ ಮನೆಯಲ್ಲಿ ರಾತ್ರಿ ಕಳೆದಿದ್ದಾರೆ.
ಆಲಿಯಾ ಪ್ರಕಾರ ಅದು ಆಕೆಯ ಮನೆ. ನವಾಜುದ್ದೀನ್ ಸಿದ್ದಿಕಿ ಕುಟುಂಬದವರ ಪ್ರಕಾರ ಅದು ಅವರ ಮನೆ. ಇಬ್ಬರೂ ಸಹ ಒಂದೇ ಮನೆಯ ಕುರಿತು ತಮ್ಮ ತಮ್ಮ ಹೆಸರಿನಲ್ಲಿ ದಾಖಲೆ ಹೊಂದಿದ್ದಾರೆ. ವಿಚಿತ್ರವೆಂದರೆ ಮಗಳು ಶೋರಾ ತಂದೆ ನವಾಜುದ್ದೀನ್ ಸಿದ್ದಿಕಿಗೆ ಕರೆ ಮಾಡಿದಾಗ ಮಗಳಿಗೆ ನೀನು ಮಾತ್ರ ಮನೆಗೆ ಬಾ. ನೀನೊಬ್ಬಳೇ ಎಂದು ಹೇಳಿದ್ದಾರಂತೆ ನವಾಜುದ್ದೀನ್ ಸಿದ್ದಿಕಿ. ಪತ್ನಿ ಹಾಗೂ ಇನ್ನೊಬ್ಬ ಮಗಳಿಗೂ ಮನೆಗೆ ಬರಕೂಡದು ಎಂದು ಹೇಳಿದ್ದಾರಂತೆ ಸಿದ್ದಿಕಿ.
ನವಾಜುದ್ದೀನ್ ಸಿದ್ಧಿಕಿ ಬಗ್ಗೆ ಇಷ್ಟೆಲ್ಲ ಆರೋಪ ಮಾಡುತ್ತಿರುವ ಆಲಿಯಾ ಸಿದ್ದಿಕಿ ಮೂಲತಃ ಹಿಂದೂ. ಮೂಲ ಹೆಸರು ಅಂಜನಾ ಕಿಶೋರ್ ಪಾಂಡೆ. ಸಿದ್ದಿಕಿ ಜೊತೆ ಲಿವ್ ಇನ್ ಟುಗೆದರ್ ಇದ್ದವರು. ಮೊದಲ ಪ್ರೇಮಿ. ಆದರೆ ಮದುವೆಯಾಗಲಿಲ್ಲ. ನಂತರ ಸಿದ್ದಿಕಿ ಶೀಬಾ ಎಂಬುವವರ ಜೊತೆ ಮದುವೆಯಾದರು. ಆ ಮದುವೆ ಎರಡೇ ವರ್ಷಕ್ಕೆ ಮುರಿದುಬಿತ್ತು. ಬಳಿಕ ಸಿದ್ದಿಕಿ ಹೆಸರು ಹಲವು ನಟಿಯರ ಜೊತೆ ಕೇಳಿಬಂತು. ಇದೆಲ್ಲದರ ಮಧ್ಯೆ ಮತ್ತೆ ಸಂಪರ್ಕಕ್ಕೆ ಬಂದ ಅಂಜನಾ ಕಿಶೋರ್ ಪಾಂಡೆಯನ್ನೇ ಸಿದ್ಧಿಕಿ ಮದುವೆಯಾದರು. ಈ ಬಾರಿ ಅಂಜನಾ, ಇಸ್ಲಾಂಗೆ ಮತಾಂತರಗೊಂಡು ಆಲಿಯಾ ಸಿದ್ದಿಕಿಯಾಗಿದ್ದರು. ಇಬ್ಬರು ಮಕ್ಕಳಾದರು. ಈ ಮದುವೆಯೂ ಕೂಡಾ ಈಗ ಮುರಿದು ಬಿದ್ದಿದೆ.
ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಅಂಜನಾ ಪಾಂಡೆ ಅಲಿಯಾಸ್ ಆಲಿಯಾ ಸಿದ್ದಿಕಿ ಕಾಲೇಜು ದಿನಗಳಲ್ಲಿ ಒಮ್ಮೆ ಪ್ರೀತಿಸಿ ದೂರವಾಗಿದ್ದರು. ನಂತರ 10 ವರ್ಷಗಳ ನಂತರ ಮತ್ತೊಮ್ಮೆ ಪ್ರೀತಿಗೆ ಬಿದ್ದರು. ಆತ ನನ್ನನ್ನು ಹಿಂಸಿಸುತ್ತಾನೆ, ಹೊಟ್ಟೆಗೇ ಒದೆಯುತ್ತಾನೆ, ಇಷ್ಟವಿಲ್ಲದಿದ್ದಾಗಲೂ ಬಲಾತ್ಕರಿಸುತ್ತಾನೆ. ರೇಪ್ ಮಾಡಿದ್ದಾನೆ ಎಂದೆಲ್ಲ ಆರೋಪಿಸಿದ್ದ ಅಂಜನಾ ಅಲಿಯಾಸ್ ಆಲಿಯಾ ಈಗ ಮನೆ ಕಳೆದುಕೊಂಡು ಮಕ್ಕಳೊಂದಿಗೆ ಬೀದಿಗೆ ಬಿದ್ದಿದ್ದಾರೆ. ಆತ.. ???



