ಕನ್ನಡದಲ್ಲಿ ಬೋಲ್ಡ್ ಆಗಿ ನಟಿಸುವ ಹುಡುಗಿಯರ ಕೊರತೆ ಇದೆ. ಹೀಗಾಗಿಯೇ ಮುಂಬೈ ಹುಡುಗಿಯರಿಗೆ ಡಿಮ್ಯಾಂಡ್ ಇದೆ. ಬೋಲ್ಡ್ ಆಗಿ ನಟಿಸುತ್ತಾರೆ ಎಂದರೆ ಅವರು ಎಲ್ಲದಕ್ಕೂ ಸಿದ್ಧರಿರುತ್ತಾರೆ ಅನ್ನೋ ಭಾವನೆ ಒಂದು ಕಾಲದಲ್ಲಿ ಇತ್ತು. ಅದು ಇವತ್ತಿಗೂ ಹೋಗಿಲ್ಲ. ಕನ್ನಡದಲ್ಲಿ ಮೊದಲ ಬಾರಿ ಸ್ವಿಮ್ ಸೂಟ್ ಹಾಕಿದ್ದ ಜಯಂತಿವರಿಂದ ಹಿಡಿದು, ಇತ್ತೀಚಿನ ಹಲವು ನಟಿಯರವರೆಗೆ ಇಂತಹ ಪ್ರಾಬ್ಲಂ ಫೇಸ್ ಮಾಡಿದ್ದವರೇ. ಅದಾದ ಮೇಲೆ ವನಿತಾ ವಾಸು, ಅಂಜಲಿ, ಅಂಜನಾ, ಸಂಜನಾ ಗಲ್ರಾನಿ.. ಎಲ್ಲರೂ ಬೋಲ್ಡ್ ಆಗಿ ನಟಿಸಿದ್ದವರೇ. ಇತ್ತೀಚೆಗೆ ರಚಿತಾ ರಾಮ್ ಕೂಡಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದರು. ಆದರೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ ಮಾತ್ರಕ್ಕೆ ಅವರು ಎಲ್ಲದಕ್ಕೂ ಸಿದ್ಧ ಎಂದು ಏಕೆ ಅಂದುಕೊಳ್ತಾರೋ..
ಡಬಲ್ ಮೀನಿಂಗ್ ಡೈಲಾಗ್ ಹೊಡೆಯೋವ್ರನ್ನ ಹಾಗೂ ಚಿತ್ರದಲ್ಲಿ ಕಿಸ್ಸಿಂಗ್, ಬೆಡ್ ರೂಂ ಸೀನುಗಳಲ್ಲಿ ನಟಿಸುವವರನ್ನ ಕೆಲವರು ನೋಡುವ ದೃಷ್ಟಿಯೇ ಬೇರೆ. ಈ ಅನುಭವ ಪೆಂಟಗನ್ ಚಿತ್ರದ ತನಿಷಾ ಕುಪ್ಪಂಡ ಅವರಿಗೂ ಆಗಿದೆ.
ಏಪ್ರಿಲ್ 7ರಂದು ರಿಲೀಸ್ ಆಗುತ್ತಿರುವ ಪೆಂಟಗನ್ ಚಿತ್ರದಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹನಿ ಟ್ರ್ಯಾಪ್ ಕಥೆಯಲ್ಲಿ ಬರುವ ಸೀನ್‍ಗಳಲ್ಲಿ ಕಿಸ್ಸಿಂಗ್ ಸೀನ್ ಇದೆ. ಬೆಡ್ ರೂಂ ದೃಶ್ಯಗಳಿವೆ. ಜೊತೆಗೆ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ಹತ್ತಿರವಾಗಿರೋ ಕಾರಣ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ. ಈ ವೇಳೆ ತನಿಷಾ ಕುಪ್ಪಂಡ ಅವರಿಗೆ ಯೂಟ್ಯೂಬರ್ ಒಬ್ಬ ಪ್ರಶ್ನೆ ಕೇಳಿದ್ದಾನೆ. ನೀವು ಬ್ಲೂಫಿಲ್ಮ್`ನಲ್ಲಿ ನಟಿಸೋಕೆ ಸಿದ್ಧರಿದ್ದೀರಾ ಎನ್ನುವುದು ಈತನ ಪ್ರಶ್ನೆ. ತನಿಷಾ ಕೆಂಡಾಮಂಡಲವಾಗಿ ಹೋಗಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಆಗುವ ಮೋಸ, ಅಪರಾಧ, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಸಿನಿಮಾ ಪೆಂಟಗನ್. ಈ ಚಿತ್ರದಲ್ಲಿ ಕಾಮನಬಿಲ್ಲು.. ಹಾಡಿನಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಕಥೆಯಲ್ಲಿ ತನಿಷಾ ಕುಪ್ಪಂಡ ನಟಿಸಿದ್ದಾರೆ.



