ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿರುವ ಅವಿನಾಶ್ ಮತ್ತು ಮಾಳವಿಕಾ. ಇಬ್ಬರೂ ಹೆಚ್ಚೂ ಕಡಿಮೆ 30 ವರ್ಷ ಚಿತ್ರರಂಗದಲ್ಲಿ ಜೀವನ ಸವೆಸಿದ್ದಾರೆ. ಕರ್ನಾಟಕದ ಗಡಿಯಾಚೆಯಲ್ಲೂ ಹೆಜ್ಜೆ ಗುರುತು ಮೂರಿಸಿದ್ದಾರೆ. ಇದೀಗ ಅವಿನಾಶ್ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಆಗ ಬೆಳಕಿಗೆ ಬಂದಿದ್ದೇ ಅವಿನಾಶ್ ಮತ್ತು ಮಾಳವಿಕಾ ಅವಿನಾಶ್ ಅವರ ವಿಷ್ಣುವರ್ಧನ್ ಅಭಿಮಾನ. ಡಾ.ರಾಜ್ ಕುಮಾರ್ ಪ್ರೇಮ.
ಅಚ್ಚರಿಯೆನಿಸಬಹುದು, ಅವಿನಾಶ್ ಅವರ ಮನೆಯ ದೇವರ ಕೋಣೆಯಲ್ಲಿ ವಿಷ್ಣುವರ್ಧನ್ ಫೋಟೋ ಇದೆ. ಏಕೆ ಎಂದರೆ ಅವರು ಹೃದಯದಲ್ಲಿದ್ದಾರೆ. ದೇವರ ಮನೆಯಲ್ಲಿರೋದು ಸಹಜ ಎಂದಿದ್ದಾರೆ ಮಾಳವಿಕಾ ಅವಿನಾಶ್. ಮಾಳವಿಕಾರ ಪ್ರತಿ ಹೆಜ್ಜೆಯಲ್ಲೂ ಫೋನ್ ಮಾಡಿ, ಮಾರ್ಗದರ್ಶನ ನೀಡುತ್ತಿದ್ದರಂತೆ. ನನಗೆ ಅವರು ತಂದೆಯ ಸ್ವರೂಪ. ಅವರ ನೆರಳು ನಮ್ಮೊಂದಿಗೆ ಶಾಶ್ವತ ಎಂದಿದ್ದರೆ ಮಾಳವಿಕ. ಆಪ್ತರಕ್ಷಕ ಎನ್ನುವುದು ಅವರ ಚಿತ್ರದ ಹೆಸರಲ್ಲ, ಅವರ ಸ್ವಭಾವ ಎಂದು ಹೇಳಿದ್ದಾರೆ ನಟ ರಮೇಶ್ ಅರವಿಂದ್.
ಅಷ್ಟೇ ಅಲ್ಲ, ಅವರ ಮನೆಯಲ್ಲಿರುವ ಡಾ.ರಾಜ್ ಕುಮಾರ್ ಭಕ್ತಿಯ ಕಥೆಯೂ ಇದೆ. ಇವರಿಗೆ ಒಬ್ಬ ವಿಶಿಷ್ಟ ಮಗನಿದ್ದಾನೆ. ಮಾತು ಬರುವುದಿಲ್ಲ. ನಡೆಯಲು ಆಗುವುದಿಲ್ಲ. ಜಗತ್ತಿನಲ್ಲಿ ಕೇವಲ 2 ಸಾವಿರ ಮಕ್ಕಳು ಮಾತ್ರ ಈ ರೀತಿ ಇರುತ್ತಾರಂತೆ. ಬೇರೆಯವರಿಗೆ ನೋಡುವುದಕ್ಕೆ ಕಷ್ಟವಾಗಬಹುದೇನೋ.. ಆದರೆ ತಾಯಿಗೆ.. ತಂದೆಗೆ.. ವೀಕೆಂಡ್ ವಿತ್ ರಮೇಶ್`ನಲ್ಲಿ ಅವಿನಾಶ್ ಅವರು ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾಳವಿಕಾ ಮತ್ತು ಅವಿನಾಶ್ ತಮ್ಮ ಮಗನ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಮಗುವಿನ ಕಾರಣಕ್ಕೆ ಯಾವುದೇ ಕಾರ್ಯಕ್ರಮಗಳಿಗೆ ಮಾಳವಿಕಾ ಹೋಗುವುದಿಲ್ಲ. ಸೋಷಿಯಲ್ ಗ್ಯಾದರಿಂಗ್ಗಳಿಗೆ ಹೋಗೋದೇ ಇಲ್ಲ ನಾವು. ನಾವು ಎನು ಮಾತನಾಡಲಿ? ಅವಿನಾಶ್ ಮಗ ಕಣೋ ಇವರು…ಅಲ್ಲೊಂದು ದೇವಸ್ಥಾನವಿದೆ ಅಲ್ಲಿ ಹೋಗಿ ತಾಯಿತ ಕಟ್ಟಿಸಿ ಅಂತಾರೆ. ಅತ್ತ ಅವಿನಾಶ್ ಈಗ ದೇವರೇ ನನ್ನ ಮಗನ ಜೊತೆ ಇದ್ದಾನೆ ಅಂತಾರೆ.
‘ಎಲ್ಲಾ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟ ಬೇಕು ಅಂತ ಯಾವ ಮಗುನೂ ಹುಟ್ಟುವುದಿಲ್ಲ. ಇಂಥದೇ ಮನೆಯಲ್ಲಿ ಹುಟ್ಟಬೇಕು ಅಂತ ಹುಟ್ಟುವುದಿಲ್ಲ. ಇದೆಲ್ಲಾ ದೇವರ ಪ್ರಸಾದ ಅಂತ ಸ್ವೀಕಾರ ಮಾಡ್ತೀವಿ. ವಿಶೇಷ ಏನಪ್ಪ ಅಂದ್ರೆ ಭಗವಂತ ಯಾವುದನ್ನೋ ಕಿತ್ಕೊಂಡು ಇನ್ನೇನೋ ಕೊಡ್ತಾನೆ. ಇತ್ತೀಚೆಗಷ್ಟೇ ಟಿವಿ ಶೋವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಮಾಳವಿಕಾ ಈ ಮಗನಿಂದಾಗಿ ನಮ್ಮ ಮನೆಯಲ್ಲಿ ಅಪ್ಪಾಜಿ ಪ್ರತಿನಿತ್ಯ ಪ್ರತ್ಯಕ್ಷ ಆಗ್ತಾರೆ. ಅವನಿಗೆ ಸಂಗೀತವೆಂದರೆ ಇಷ್ಟ. ಹಾಡಿನಲ್ಲಿ ಭಕ್ತಿ ಇರಬೇಕು. ನಾಲ್ಕೈದು ಗೆಜೆಟ್`ನಲ್ಲಿ ಅಪ್ಪಾಜಿಯವರ ಅಂದರೆ ಡಾ.ರಾಜ್ ಅವರ ಹಾಡುಗಳಿರುತ್ತವೆ. ನನಗೆ ಅರ್ಜುನ್ ಜನ್ಯ ಪರಿಚಯವಾಗಿದ್ದೇ ಇವನಿಂದ.. ಎಂದು ಹೇಳಿಕೊಳ್ತಾರೆ ಮಾಳವಿಕ.
ಒಟ್ಟಿನಲ್ಲಿ ದೇವರ ಮನೆಯಲ್ಲಿ ವಿಷ್ಣುವರ್ಧನ್ ಇದ್ದರೆ, ಭಕ್ತಿಗೀತೆಗಳಲ್ಲಿ ಡಾ.ರಾಜ್ ಅವರ ಮನೆಯಲ್ಲೇ ಇದ್ದಾರೆ.



