ಮೊದಲ ಚಿತ್ರ ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಆನಂದ್. ಆ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಬಂದವರು ಸುಧಾರಾಣಿ. ಜಯಂತಿ-ರಾಜೇಶ್ ಜೋಡಿ, ಬಾಲರಾಜ್, ಗುರುದತ್ ಎಲ್ಲರೂ ಇದ್ದ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಶಿವಣ್ಣ, ಚಿತ್ರರಂಗದಲ್ಲಿಯೇ 37 ವರ್ಷ ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಶಿವಣ್ಣ ಸಂಭ್ರಮ ಹೆಚ್ಚಿಸಿರುವುದು ವೇದ.
ಗೀತಾ ಶಿವ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ವೇದ 50 ದಿನ ಪೂರೈಸಿದೆ. ವೇದ ಚಿತ್ರದ ಮೂಲಕ ಶಿವಣ್ಣ ನಿರ್ಮಾಪಕರಾಗಿದ್ದರು. ವೇದ ಅವರ 125ನೇ ಚಿತ್ರ ಕೂಡಾ ಆಗಿತ್ತು. ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂಬ ಸಂದೇಶವನ್ನಿಟ್ಟುಕೊಂಡು ಬಂದಿದ್ದ ಚಿತ್ರ ವಿಶೇಷವಾಗಿ ಹೆಣ್ಣು ಮಕ್ಕಳ ಮನ ಗೆದ್ದಿತ್ತು. ಚಿತ್ರದಲ್ಲಿ ಕೂಡಾ ಶಿವಣ್ಣ ಅವರಿಗಿಂತ ಆದಿತಿ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಉಮಾಶ್ರೀ.. ಹೀಗೆ ಮಹಿಳಾ ಪಾತ್ರಧಾರಿಗಳೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಹರ್ಷ ಜೊತೆ ಇದು 4ನೇ ಸಿನಿಮಾ. ಮೊದಲಿನ ಚಿತ್ರಗಳಿಗಿಂತ ಹೆಚ್ಚು ವೈಬ್ರೇಟ್ ಆಗಿದ್ದ ವೇದ, 50 ದಿನ ಪೂರೈಸಿದ ಸಂಭ್ರಮವನ್ನು ಗೀತಾ ಶಿವ ರಾಜ್ ಕುಮಾರ್ ಹಾಗೂ ಶಿವಣ್ಣ ಇಡೀ ಚಿತ್ರತಂಡದೊಂದಿಗೆ ಹಂಚಿಕೊಂಡರು.


ನಾನು ಹೋದಲ್ಲೆಲ್ಲಾ ಸಿನಿಮಾನ ನೋಡಿ ಮೆಚ್ಚಿಕೊಂಡಿದ್ದಾರೆ. ನನ್ನ ತಂದೆ ತಾಯಿಗೆ ನಮ್ಮ ವೇದ ಸಿನಿಮಾ ತಂಡಕ್ಕೆ ನನ್ನ ಧನ್ಯವಾದ. ವೇದ ಸಿನಿಮಾದ ಪುಷ್ಪ ಕ್ಯಾರೆಕ್ಟರ್ ತುಂಬಾ ಇಷ್ಟ ಆಯ್ತು. ನನಗೆ ಆ ಪಾತ್ರ ಮಾಡ್ತೀನಾ ಅನ್ನೋ ಡೌಟ್ ಇತ್ತು. ಗೀತಾ ಶಿವರಾಜ್ ಕುಮಾರ್ ಸ್ವೀಟ್ ಆ್ಯಂಡ್ ಲವ್ಲಿ ಹಾರ್ಟ್ ಇರೋರು. ಶಿವಣ್ಣ ಎನರ್ಜಿಟಿಕ್ ಅಂತ ನಮ್ಗೆಲ್ಲಾ ಗೊತ್ತು. ಆದ್ರೆ ಗೀತಾ ಶಿವರಾಜ್ ಕುಮಾರ್ ಶಿವಣ್ಣನಿಗಿಂತ ಎನರ್ಜಿಟಿಕ್ ಎಂದರು ನಾಯಕಿ ಗಾನವಿ ಲಕ್ಷ್ಮಣ್.
ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುತ್ತಲೇ ಮಾತನಾಡಿದ ಶಿವಣ್ಣ, ಈ 37 ವರ್ಷದ ಜರ್ನಿಯಲ್ಲಿ ನನಗೆ ಹಲವಾರು ಜನ ನೆರವಿಗೆ ನಿಂತಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ಅಮ್ಮ ನಿರ್ಮಾಪಕಿಯಾದರೆ, 125ನೇ ಚಿತ್ರಕ್ಕೆ ಪತ್ನಿ ನಿರ್ಮಾಪಕಿ ಎಂದು ಖುಷಿಗೊಂಡರು. ಚಿತ್ರತಂಡದ ಎಲ್ಲರಿಗೂ ಬೆಳ್ಳಿ ಪಾರಿತೋಷಕ ನೀಡಿ ಗೌರವಿಸಲಾಯಿತು.





