ವಿಕ್ರಂ ಖೈದಿ. ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಾ ಮಾಂಸ ಕಟ್ ಮಾಡುತ್ತಿರುತ್ತಾನೆ. ಆತನನ್ನು ಕೊಲ್ಲಲು ಒಂದು ತಂಡವೇ ಆಯುಧಗಳ ಸಮೇತ ಬೆನ್ನಟ್ಟಿ ಬರುತ್ತೆ. ಆಗ ಇಬ್ಬರನ್ನು ಹೊಡೆಯುವ ವಿಕ್ರಂ, ಮುಧೋಳ್ ನಾಯಿಯೊಂದಿಗೆ ಬರುತ್ತಾನೆ. ನಾಯಿಯ ಬಾಯಲ್ಲಿ ರಕ್ತಸಿಕ್ತ ಚಾಕು..ಆಮೇಲೆ.. ಎಲ್ಲರನ್ನೂ ಹೊಡೆದು ಹಾಕಿ ಕೌಂಟ್ ಡೌನ್ ಬಿಗಿನ್ಸ್ ಎನ್ನುವುದು ಟೀಸರ್‍ನ ಮೊದಲ ಡೈಲಾಗ್. ರಕ್ಷಾ ವಿಜಯ್ ಕುಮಾರ್ ಮತ್ತು ಸಿಜು ಕಣ್ಣನ್ ಅವರ ನಿರ್ಮಾಣದಲ್ಲಿ ಬರುತ್ತಿರುವ ಚಿತ್ರ ಮುಧೋಳ್. ಹೊಸ ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡುತ್ತಿದ್ದಾರೆ.
ಮುಧೋಳ್. ಈ ತಳಿಯ ನಾಯಿಗೆ ಇಡೀ ಇಂಡಿಯಾದಲ್ಲಿ ಸಖತ್ ಡಿಮ್ಯಾಂಡ್. ಸೇನೆಯಲ್ಲೂ ಡಿಮ್ಯಾಂಡ್. ಹಾಗಂತ ಮುಧೋಳ್ ನಾಯಿ ನೋಡೋಕೆ ಮುದ್ದು ಮುದ್ದಾಗಿದೆ ಎಂದರ್ಥವಲ್ಲ. ಬಡಕಲು ಬಡಕಲಾಗಿ ಕಾಣುವ, ಆದರೆ ಪವರ್ ಫುಲ್ ನಾಯಿಯದು. ಆ ಹೆಸರನ್ನೇ ತಮ್ಮ ಚಿತ್ರಕ್ಕೆ ಟೈಟಲ್ ಆಗಿಟ್ಟುಕೊಂಡಿದ್ದಾರೆ ವಿಕ್ರಂ ರವಿಚಂದ್ರನ್.


ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ.
ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ ಎಂದೆಲ್ಲ ವಿವರ ಕೊಟ್ಟರು ವಿಕ್ರಂ.
ಅಂದಹಾಗೆ ಇಲ್ಲಿ ಬರುವ ಮುಧೋಳ್ ನಾಯಿ ಟ್ರೈನ್ಡ್. ತ್ಯಾಗರಾಜ್ ಎನ್ನುವವರು ತರಬೇತಿ ನೀಡಿರುವ ನಾಯಿ. ಹೀಗೆ ಚಾಕುವನ್ನು ಬಾಯಲ್ಲಿ ಕಚ್ಚಿಕೊಂಡು ಬರುವ ಒಂದು ಸೀನ್`ಗಾಗಿ 23 ಟೇಕ್`ಗಳಾದವಂತೆ. ಈ ಎಲ್ಲ ಅನುಭವ ಬಿಚ್ಚಿಡುವ ಕಾರ್ತಿಕ್ ರಾಜನ್ ಅವರಿಗೆ ಇದು ಚೊಚ್ಚಲ ಸಿನಿಮಾ. ಹಾಗಂತ ಅನನುಭವಿಯೇನಲ್ಲ. ಈಗಾಗಲೇ ವಿಜಯ್ ಸೇತುಪತಿ, ನಾಗಾರ್ಜುನ, ಸಿಂಬು, ಸಮಂತಾ, ವಿಕ್ರಂ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹೆಡ್ ಬುಷ್ ಚಿತ್ರಕ್ಕೆ ಶೂನ್ಯ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಕಾರ್ತಿಕ್, ನಿಶಾ ಎಂಬ ವೆಬ್ ಸಿರೀಸ್`ನ್ನೂ ಕೂಡಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಲೆಕ್ಕಕ್ಕೆ ಮಾತ್ರ ಇದು ಮೊದಲ ಸಿನಿಮಾ. ಸಂಗೀತ ನಿರ್ದೇಶಕ ಯುವರಾಜ್ ಚಂದ್ರನ್ ಅವರಿಗೂ ಅಷ್ಟೇ, ಇದು ಮೊದಲ ಸಂಗೀತ ನಿರ್ದೇಶನದ ಸಿನಿಮಾ. ಇದಕ್ಕೂ ಮೊದಲು ತೆಲುಗಿನ ತಮನ್ ಬಳಿ ಅಸಿಸ್ಟೆಂಟ್ ಆಗಿದ್ದವರ ಈಗ ಸ್ವತಂತ್ರರಾಗುತ್ತಿದ್ದಾರೆ.



