ಸ್ಟಾರ್ ಸಿನಿಮಾ ಎಂದಾಗ ಕಟೌಟ್ ಹಾಕುವುದು ಕಾಮನ್. ಮಲ್ಟಿಸ್ಟಾರ್ ಇದ್ದಾಗ ಅದರ ಹವಾ ಇನ್ನೂ ಜೋರಿರುತ್ತೆ. ಇದೀಗ ಕಬ್ಜದ ಕ್ರೇಜ್. ಇಡೀ ದೇಶದಲ್ಲಿ ಕಬ್ಜ ಕಿಕ್ ಏರುತ್ತಿದೆ. ಯಶಸ್ಸಿಗೆ ಸಾವಿರ ಸರದಾರರು.. ಸೋಲಿಗೆ ಯಾರೂ ಇಲ್ಲ ಎಂಬುದು ಗಾದೆಯೂ ಹೌದು..ನಾಣ್ಣುಡಿಯೂ ಹೌದು. ಈಗ ಕಬ್ಜ ರಿಲೀಸ್ ಹೊತ್ತಿನಲ್ಲಿ ಕೂಡಾ ಅದು ಚರ್ಚೆಗೆ ಬಂದಿದೆ. ಕಬ್ಜ ಈಗಾಗಲೇ ಒಂದು ಮಟ್ಟಕ್ಕೆ ಗೆದ್ದಾಗಿದೆ. ರಿಲೀಸ್ ಆಗುವುದಕ್ಕೂ ಮೊದಲೇ 100 ಕೋಟಿ ಕ್ಲಬ್ ಸೇರಿರುವ ಕಬ್ಜ ಚಿತ್ರ ಥಿಯೇಟರ್ ಓಪನಿಂಗ್ಸ್ ಎದುರು ನೋಡುತ್ತಿದೆ. 4000+ ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಲಿರೋ ಕಬ್ಜ ಚಿತ್ರದ ರೂವಾರಿ ಆರ್.ಚಂದ್ರು.
ಕಬ್ಜ ಚಿತ್ರಕ್ಕೆ ನಿರ್ದೇಶಕರೂ ಅವರೇ..ನಿರ್ಮಾಪಕರೂ ಅವರೇ. ಪ್ರೊಡಕ್ಷನ್ ಹೆಡ್ ಯಮುನಾ ಚಂದ್ರಶೇಖರ್. ಸ್ಟಾರ್ ಗಿರಿಯೋ.. ಅಬ್ಬಬ್ಬಾ ಎನ್ನುವಂತಿದೆ. ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೇಯಾ.. ಹೀಗೆ ಸ್ಟಾರ್‍ಗಳೇ ತುಂಬಿರುವ ಚಿತ್ರದಲ್ಲಿ ಪೋಷಕ ಕಲಾವಿದರೂ ಸ್ಟಾರ್ ನಟರೇ. ಮುರಳಿ ಕೃಷ್ಣ, ಪೋಸಾನಿ ಕೃಷ್ಣ ಮುರಳಿ, ಅನೂಪ್ ರೇವಣ್ಣ, ಕಬೀರ್ ದುಲ್ಹಾನ್ ಸಿಂಗ್, ದೇವ್‍ಗಿಲ್, ಕಾಮರಾಜನ್, ನವಾಬ್ ಷಾ, ಜಾನ್ ಕೊಕೆನ್, ಡ್ಯಾನಿಷ್ ಅಖ್ತರ್.. ಹೀಗೆ.. ಹೀಗಾಗಿಯೇ ಚಿತ್ರದ ಬಗ್ಗೆ ಮಾತನಾಡಿದ ಎಲ್ಲರೂ ಕ್ರೆಡಿಟ್ ಸಲ್ಲಿಸಿದ್ದು ಆರ್.ಚಂದ್ರು ಅವರಿಗೆ.
ಈ ಚಿತ್ರಕ್ಕೆ ನಾನು ಓಕೆ ಎಂದಿದ್ದು ಚಿತ್ರದ ಮೇಕಿಂಗ್ ನೋಡಿ ಅಲ್ಲ. ಆರ್.ಚಂದ್ರು ಅವರನ್ನು ನೋಡಿ. ಚಂದ್ರು ಅವರ ಡೆಡಿಕೇಷನ್ ಅದ್ಭುತ. ಇದು ಅವರ ಸ್ನೇಹಕ್ಕಾಗಿ ಮಾಡಿದ ಸಿನಿಮಾ ಎಂದ ಸುದೀಪ್ ಉಪ್ಪಿ ಸರ್ ಸಿನಿಮಾದಲ್ಲಿ ನಾನಿದ್ದೇನೆ ಎನ್ನುವುದೇ ಖುಷಿ. ಈ ಸಿನಿಮಾ ಚಂದ್ರುಗೋಸ್ಕರ ಗೆಲ್ಲಬೇಕು ಎಂದರು.




ನಿರ್ದೇಶಕ ಆರ್ ಚಂದ್ರು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. ಇದೂವರೆಗೂ ರೊಮ್ಯಾಂಟಿಕ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರು, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ‘ಕಬ್ಜ’ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ? ಅನ್ನೋ ಕುತೂಹಲವಿದೆ.



