ಇಬ್ಬರು ವ್ಯಕ್ತಿಗಳು. ಇಬ್ಬರೂ ಗುಜರಾತಿಗಳು. ಶಾರೂಕ್ ಖಾನ್‍ನ್ನು ನೋಡಬೇಕು ಅನ್ನೋ ಆಸೆ. ಗುಜರಾತಿನಿಂದ ಬಂದವರಿಗೆ ಶಾರೂಕ್ ಖಾನ್ ಮನೆಯೇನೋ ಕಣ್ಣಿಗೆ ಬಿತ್ತು. ನಂತರ ನಡೆ ಕಥೆಯೇ ಬೇರೆ. ಆ ಇಬ್ಬರಿಗೂ ಶಾರೂಕ್ ಖಾನ್ ಜೊತೆ ತುಂಬಾ ತುಂಬಾ ಹೊತ್ತು ಕಳೆಯುವ ಆಸೆ.. ಆದರೆ ರಿಯಾಲಿಟಿ ಬೇರೆಯೇ ಇತ್ತು.
ಮುಂಬೈನ ಬಾಂದ್ರಾದಲ್ಲಿದೆ ಶಾರೂಕ್ ಖಾನ್ ಮನೆ. ಈ ಮನೆಗೆ ಪ್ರತಿದಿನ ಸಾವಿರಾರು ಅಭಿಮಾನಿಗಳು ಭೇಟಿ ಕೊಡುತ್ತಲೇ ಇರುತ್ತಾರೆ. ಶಾರೂಕ್ ಮನೆಯಲ್ಲಿದ್ದರೆ ಜೊತೆಗೆ ಸಮಯವೂ ಇದ್ದರೆ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಇಲ್ಲದೆ ಹೋದರೆ ಬಾಲ್ಕನಿಯಲ್ಲಿ ಅಭಿಮಾನಿಗಳಿಗೆ ಗಾಳಿಯಲ್ಲೇ ಒಂದು ಹೂಮುತ್ತು ಚೆಲ್ಲಿ ಮಾಯವಾಗುತ್ತಾರೆ. ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಶಾರುಖ್ ಅವರನ್ನು ಪೂಜಿಸುವ ಆರಾದಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಕೆಲವೊಮ್ಮೆ ಅಭಿಮಾನಿಗಳ ಅಭಿಮಾನ ಮಿತಿ ಮೀರುತ್ತದೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಶಾರುಖ್ ನಿವಾಸ ಮನ್ನತ್ ಮುಂದೆ ಬಂದು ನಿಂತಿರುತ್ತಾರೆ.


ಮಧ್ಯರಾತ್ರಿ 3 ಗಂಟೆಗೆ ಬಂಗಲೆಯ ಕಾಂಪೌಂಡ್ ಹಾರಿ ಇಬ್ಬರು ಅಭಿಮಾನಿಗಳು ಒಳಗೆ ಬಂದಿದ್ದರು. ಅವರನ್ನು ಶಾರೂಕ್ ಖಾನ್ ನೋಡಿದ್ದು ಮರುದಿನ ಬೆಳಗ್ಗೆ 10.30ರ ಸುಮಾರಿಗೆ. ಅವರಿಬ್ಬರೂ ಶಾರೂಕ್ ಅವರ ಪರ್ಸನಲ್ ಮೇಕಪ್ ರೂಮಿನಲ್ಲಿ 8 ಗಂಟೆಗಳಷ್ಟು ಕಾಲ ಅಡಗಿ ಕುಳಿತಿದ್ದರು. . 18 ಹಾಗೂ 19 ವರ್ಷದ ಯುವಕರು ಗುಜರಾತ್ನ ಭರೂಚ್ ಗ್ರಾಮದ ಈ ಯುವಕರು ಶಾರುಖ್ ಅಭಿಮಾನಿಗಳಂತೆ. ನಟನಿಗೆ ಸರ್ಪೈಸ್ ಕೊಡಲು ಮನೆಯೊಳಗೆ ಪ್ರವೇಶಿಸಿ ಬಚ್ಚಿಟ್ಟುಕೊಂಡಿದ್ದರು ಎಂಬ ಹೇಳಿಕೆ ನೀಡಿದ್ದಾರೆ.


ಒಟ್ಟಿನಲ್ಲಿ ತಮ್ಮ ಅಭಿಮಾನದ ನಟನ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯುವ ಆಸೆ ಇಬ್ಬರೂ ಅಭಿಮಾನಿಗಳನ್ನು ಈ ರೀತಿ ವರ್ತಿಸುವಂತೆ ಮಾಡಿದೆ. ಆದರೆ ಈ ಹುಚ್ಚಾಟ ಅವರ ಜೀವಕ್ಕೆ ಸಂಚಕಾರ ತಂದಿಲ್ಲ. ಶಾರೂಕ್ ಖಾನ್ ಮನೆಗೆ ರಾತ್ರೋರಾತ್ರಿ ಇಬ್ಬರು ನುಗ್ಗುವುದು ಸರಳ ವಿಷಯ ಅಲ್ಲ.



