ಕೇರಳ ಸ್ಟೋರಿ ಸಿನಿಮಾ, ಕೇರಳದ್ದೇ ಕಥೆ. ಕಟ್ಟುಕಥೆಯೂ ಅಲ್ಲ, ಸತ್ಯ ಕಥೆ. ಕೇರಳದಲ್ಲಿ ನಡೆಯುವ ಹಿಂದೂ ಯುವತಿಯರ ಮತಾಂತರ ಮತ್ತು ಉಗ್ರರನ್ನಾಗಿಸುವ ಕಥೆ. ಅಫ್ಘಾನಿಸ್ತಾನದಲ್ಲಿ ಪತ್ತೆಯಾದ ಕೇರಳದ ಹೆಣ್ಣು ಮಕ್ಕಳು, ಮತಾಂತರವಾಗಿದ್ದು ಹೇಗೆ..? ಐಸಿಸ್ ಉಗ್ರರ ವಶಕ್ಕೆ ಹೋಗಿದ್ದು ಹೇಗೆ? ಅಲ್ಲಿ ಅವರು ಅನುಭವಿಸಿದ ಕಷ್ಟಗಳು, ಅವರನ್ನು ಹೇಗೆ ಮೋಡಿ ಮಾಡಿ ಮುಸ್ಲಿಮರನ್ನಾಗಿಸಲಾಯಿತು, ಹೇಗೆಲ್ಲ ಬಲೆ ಬೀಸಲಾಯಿತು ಎಂಬ ಕಥೆಯನ್ನು ಯಥಾವತ್ ಇಟ್ಟಿದ್ದರು ಸುದೀಪ್ತೋ ಸೇನ್.
ಈಗ ಕೇರಳ ಸ್ಟೋರಿ ಸೂಪರ್ ಹಿಟ್ ಆಗಿದೆ. ಮೊದಲ ದಿನ 8 ಕೋಟಿ ಗಳಿಸಿದ್ದ ಸಿನಿಮಾ, 2ನೇ ದಿನ 11 ಕೋಟಿ ಗಳಿಸಿತ್ತು. 3ನೇ ದಿನ 12 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಇದೀಗ ಸೂಪರ್ ಹಿಟ್ ಆಗುವ ಹಾದಿಯಲ್ಲಿದೆ. ಚಿತ್ರಕ್ಕೆ ನಿರ್ಬಂಧ ಹೇರುವ ಎಲ್ಲ ಪ್ರಯತ್ನಗಳೂ ಜರುಗಿದವು. ಚಿತ್ರಕ್ಕೆ ನಿಷೇಧ ಹೇರುವ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಕೇರಳದಲ್ಲಿ ಚಿತ್ರ ಮಂದಿರಗಳ ಮೇಲೆ ದಾಳಿ ನಡೆಯಿತು. ಚಿತ್ರ ಪ್ರದರ್ಶನ ರದ್ದಾಯಿತು. ಆದರೆ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವರ್ಷ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡಿತ್ತು. 252.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಜೆಟ್ ಕೂಡ ಕೇವಲ 15-20 ಕೋಟಿ ರೂಪಾಯಿ. ಒಟ್ಟಾರೆ ಕಲೆಕ್ಷನ್ ಸಿನಿಮಾವನ್ನು ದೊಡ್ಡ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿತ್ತು. ಆ ಸಿನಿಮಾ ಕೂಡ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ‘ದಿ ಕೇರಳ ಸ್ಟೋರಿ’ ಕೂಡ ವಿವಾದಗಳ ಜತೆಗೆ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾದ ಬಜೆಟ್ 30 ಕೋಟಿ ರೂಪಾಯಿ ಎನ್ನಲಾಗಿದೆ.
ಕೇರಳ ಸ್ಟೋರಿ ಗೆದ್ದ ನಂತರ ನಾಯಕಿ ನಟಿ ಅದಾ ಶರ್ಮಾ ಖುಷಿಯಾಗಿದ್ದಾರೆ. ಧರ್ಮ ದ್ವೇಷದ ವಾಸ್ತವ ಕಥೆಯಾದ್ದರಿಂದ ಚಿತ್ರಕ್ಕೆ ಪರ ವಿರೋಧಗಳೂ ವ್ಯಕ್ತವಾಗಿವೆ. ಕೇರಳದಲ್ಲಿ ಪ್ರದರ್ಶನ ಆಗಿಲ್ಲ. ಕಲ್ಲಿ ಹೊಡೆದು ಚಿತ್ರ ಪ್ರದರ್ಶನ ನಿಲ್ಲಿಸಿದ್ದಾರೆ.



