ಆಕೆ ಶಿಕಾರಿಪುರದ ಒಂದು ಹಳ್ಳಿಯ ವಿದ್ಯಾರ್ಥಿನಿ. ಪ್ರತಿಭಾವಂತೆ. ನೀಟ್ ಪರೀಕ್ಷೆ ಬರೆಯಬೇಕು. ಮೆಡಿಕಲ್ ಓದುವ ಕನಸು ಕಂಡಿದ್ದ ಆಕೆಗೆ ವಾಹನಗಳ ವ್ಯವಸ್ಥೆಯೂ ಇಲ್ಲ. ಅದು ಕೊರೊನಾ ಪೀಕ್ ಇದ್ದ ಸಮಯ. ಆ ಸಮಯದಲ್ಲಿ ಪ್ರದೀಪ್ ಈಶ್ವರ್ ಆಕೆಯ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡುತ್ತಾರೆ. ಅದನ್ನು ಖುದ್ದು ವಿಶ್ವೇಶ್ವರ್ ಭಟ್ ಗಮನಕ್ಕೆ ಬರುತ್ತದೆ. ಅದು ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರಿಗೆ ಗೊತ್ತಾಗುತ್ತದೆ. ಶಿವಮೊಗ್ಗದ ಶಿಕಾರಿಪುರದಿಂದ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಬೇಕು.











