ಅದು ಜಗ್ಗೇಶ್ ಹೀರೋ ಆಗಿರುವ ಸಿನಿಮಾ. ರಾಘವೇಂದ್ರ ಸ್ಟೋರ್ಸ್. ಜಗ್ಗೇಶ್ ಅವರಿಗೆ ಇದೇ ಮೊದಲ ಬಾರಿಗೆ ಸಿಂಪಲ್ ಸುಂದರಿ ಶ್ವೇತಾ ಶ್ರೀವಾಸ್ತವ್ ಹೀರೋಯಿನ್. ನಿರ್ಮಾಪಕರು ಹೊಂಬಾಳೆ ವಿಜಯ್ ಕಿರಗಂದೂರು. ಏಪ್ರಿಲ್ 28ಕ್ಕೆ ರಿಲೀಸ್ ಆಗ್ತಿರೋ ಚಿತ್ರದ ಪ್ರಮೋಷನ್ ಜೋರಾಗಿ ನಡೆಯುತ್ತಿದೆ. ಆ ಪ್ರಚಾರದ ಭಾಗವಾಗಿ ರಿಲೀಸ್ ಆದ ಹಾಡು ಸಿಂಗಲ್ ಸುಂದರ..
ಹಾಡು ರಿಲೀಸ್ ಮಾಡೋಕೆ ವೆಲ್`ಕಂ ಮಾಡಿದ್ದು ಡಾಲಿ ಧನಂಜಯ. ಸಿಂಗಲ್ ಸುಂದರ.
ಹಾಡನ್ನು ಬಿಡುಗಡೆ ಮಾಡಿದ್ದು ರಕ್ಷಿತ್ ಶೆಟ್ಟಿ. ಸಿಂಗಲ್ ಸುಂದರ.
ಮ್ಯೂಸಿಕ್ ಮಾಡಿದ್ದು ಅಜನೀಶ್ ಲೋಕನಾಥ್. ಅವರೂ ಸಿಂಗಲ್ ಸುಂದರರೇ..
ಹಾಡನ್ನು ಹಾಡಿರುವ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ನವೀನ್ ಸಜ್ಜು ಕೂಡಾ ಸಿಂಗಲ್ ಸುಂದರ..
ನಿರ್ದೇಶಕ ಸಂತೋಷ್ ಆನಂದರಾಮ್, ಹಾಡಿದವರಲ್ಲಿ ಒಬ್ಬರಾದ ವಿಜಯ್ ಪ್ರಕಾಶ್, ಸಾಹಿತ್ಯಕ್ಕೆ ಕೈಜೋಡಿಸಿದ ನಾಗರಾಜ್ ವರ್ಮಾ ಮಾತ್ರ ಸಿಂಗಲ್ ಅಲ್ಲ. ಹೀಗಾಗಿಯೇ ಸಿಂಗಲ್ ಆಗಿರೋವ್ರನ್ನೆಲ್ಲ ಮಿಂಗಲ್ ಮಾಡಿಸೋ ಪವಿತ್ರ ಕೆಲಸಕ್ಕೆ ಕೈಹಾಕಿದ್ದಾರೆ.


ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಈ ಹಾಡನ್ನು ರಿಲೀಸ್ ಮಾಡುವುದಕ್ಕೆ ಖುಷಿಯಾಗುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಎಂದಿನಂತೆ ತುಂಬ ಚೆನ್ನಾಗಿದೆ. ಜಗ್ಗೇಶ್ ಅಣ್ಣ ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್, ಹೊಂಬಾಳೆ ಫಿಲ್ಮ್ಸ್ಗೆ ಆಲ್ ದಿ ಬೆಸ್ಟ್.. ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ ಬೆನ್ನಲ್ಲೇ..
ಒಳ್ಳೆಯವರ ಕೈನಲ್ಲಿ ಹಾಡನ್ನ ರಿಲೀಸ್ ಮಾಡ್ಸಿದ್ದೀರಿ, ಹಾಡು ಕೇಳೋಕೆ ನೋಡೋಕೆ ಬಹಳ ಚೆನ್ನಾಗಿದೆ, ಸಿಂಗಲ್ ಆಗಿರೋರು ಬೇಗ ಮಿಂಗಲ್ ಆಗೋ ಹಾಗಾಗ್ಲಿ! ಜಗ್ಗೇಶ್ ಅಣ್ಣ, ಸಂತೋಷ್ ಆನಂದ್ರಾಮ್, ಅಜನೀಶ್ ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದು ರೀಟ್ವೀಟ್ ಮಾಡಿದರು ರಿಷಬ್ ಶೆಟ್ಟಿ. ಟಾಂಟ್ ಕೊಟ್ಟಿದ್ದು ರಕ್ಷಿತ್ ಶೆಟ್ಟಿಗೆ.
ರಕ್ಷಿತ್ ಶೆಟ್ಟಿ ಇನ್ನೇನು ಮಾಡೋಕೆ ಸಾಧ್ಯ.. ಆಯ್ತಣ್ಣೋ, ಗೊತ್ತಾಯ್ತು ಬಿಡಿ..ಎಂದು ಟ್ವೀಟ್ ಮಾಡಿ ಶರಣಾಗಿದ್ದಾರೆ.
ಇದೆಲ್ಲಕ್ಕಿಂತ ಜಗ್ಗೇಶ್ ಮಾಡಿರುವ ಟ್ವೀಟ್ ಸಖತ್ತಾಗಿದೆ. ಮದುವೆಗೆ ಡಿಮ್ಯಾಂಡ್ ಇದ್ದಾಗ ಹುಡುಗರು ಏನೇನೆಲ್ಲ ಡೈಲಾಗ್ ಹೊಡೆದಿರ್ತಾರೆ.. ಅದೇ ಹುಡುಗನ ವಯಸ್ಸು 40 ದಾಟಿದ ಮೇಲೆ ಹೇಗಿರುತ್ತೆ ಅನ್ನೋದನ್ನ ಅವರದ್ದೇ ಸ್ಟೈಲಲ್ಲಿ ಹೇಳಿದ್ದಾರೆ.
ಜಗ್ಗೇಶ್ ಮಾಡಿರುವ ಟ್ವೀಟ್ ಸಖತ್ತಾಗಿದೆ.
ನಾನು ನನ್ನ ಕಾಲಮೇಲೆ ನಿಂತಮೇಲೆ!
ಗುರು ನಮ್ಮ ಬಳಿ ದುಡ್ಡಿದರೆ ಎಲ್ಲಾ ನಮ್ ಹಿಂದೆ!
ಅಕ್ಕ ಅಣ್ಣ ಆಗಲಿ ನೋಡೋಣ!
ಅಮ್ಮನಿಗೆ ನಾ ಒಬ್ಬನೆ ಬಂದೋಳು ಕೈ ಕೊಟ್ಟರೆ!
ಇಷ್ಟಪಟ್ಟ ಹುಡುಗಿ ಕೈ ಕೊಟ್ಟಳು, ಮದುವೆ ಬೇಡ!
ಗುರು ಹುಡುಗೀರು ಸರಿ ಇಲ್ಲಮ್ಮ ಈ ಕಾಲದಲ್ಲಿ!
ನಮ್ ಫ್ರೆಂಡು ಮದುವೆ ಆಗಿ ಚಿತ್ರಾನ್ನ!
ಇಂಥ ಮಾತು ಆಡಿ 40 ಆದಮೇಲೆ?
ಹೌದಲ್ಲವೇ..
ಆದರೆ ಕೇವಲ ಮದುವೆಯಾಗಿಲ್ಲ ಅನ್ನೋ ಕಾರಣಕ್ಕೆ ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ ಅವರನ್ನು ಈ ಮಟ್ಟಿಗೆ ಕಾಲೆಳೆಯೋದಾ.. ಇಷ್ಟೆಲ್ಲ ಕ್ವಾಟ್ಲೆ ಕೊಡೋದಾ..



