ಇಂಥಾದ್ದೊಂದು ಸುದ್ದಿ ಒಂದಷ್ಟು ವೆಬ್`ಸೈಟು, ಚಾನೆಲ್ಲುಗಳಲ್ಲಿ ಹಬ್ಬಿತ್ತು. ಒಳಗೆ ಹೋಗಿ ನೋಡಿದರೆ ಸುದ್ದಿಯೇ ಬೇರೆ. ಆದರೆ ಹೆಡ್`ಲೈನ್ ದಿಕ್ಕು ತಪ್ಪಿಸುತ್ತಿತ್ತು. ತಪ್ಪು ತಿಳಿಯುವ ಅಗತ್ಯವಿಲ್ಲ. ಯಾರೋ ಅನಾಮಿಕ, ಆಗಂತುಕ ಪೋಸ್ಟ್ ಬೆದರಿಸಿದ್ದ ವಿಡಿಯೋ ಇದಲ್ಲ. ಲೀಕ್ ಆದ ವಿಡಿಯೋ ಉಸಿರೇ ಉಸಿರೇ ಚಿತ್ರದ ಶೂಟಿಂಗ್ ವಿಡಿಯೋ.
ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರ ರಾಜೀವ್ ನಟಿಸುತ್ತಿರುವ ಸಿನಿಮಾ ಉಸಿರೇ ಉಸಿರೇ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಈಗ ಚಿತ್ರೀಕರಣ ನಡೆಯುತ್ತಿದೆ. ಆ ಚಿತ್ರದ ದೃಶ್ಯವೊಂದು ಇದ್ದಕ್ಕಿದ್ದಂತೆ ವೈರಲ್ ಆಗಿ ಹೋಗಿದೆ. ಇನ್ನೂ ಚಿತ್ರವೇ ಕಂಪ್ಲೀಟ್ ಆಗಿಲ್ಲ. ಹೀಗಿರುವಾಗಲೇ ವಿಡಿಯೋ ಲೀಕ್ ಆಗಿದ್ದು ಹೇಗೆ? ಇನ್ನು ಈ ಚಿತ್ರದಲ್ಲಿ ಸುದೀಪ್ ಹೀರೋ ಅಲ್ಲ. ಅತಿಥಿನ ನಟನಾಗಿ ನಟಿಸುತ್ತಿದ್ದಾರೆ ಅಷ್ಟೆ.
ಲೀಕ್ ಆಗಿರುವ ದೃಶ್ಯದಲ್ಲಿ ರಸ್ತೆಯಲ್ಲಿ ಅಪಘಾತವಾಗಿರುವ ಯುವಕನೊಬ್ಬನಿಗೆ ಸುದೀಪ್ ನೀರು ಕುಡಿಸಿ ಆರೈಕೆ ಮಾಡುತ್ತಾರೆ. ಅಪಘಾತಕ್ಕೆ ಒಳಗಾದವರ ಬಗ್ಗೆ ಸ್ಥಳದಲ್ಲಿದ್ದವರು ಮೊಬೈಲ್ ವಿಡಿಯೋ ಮಾಡುವುದಕ್ಕಿಂತ ಸಹಕರಿಸಿ, ನೆರವು ನೀಡುವುದು ಒಳ್ಳೆಯದು. ನೋಡಿ, ನಮ್ಮ ಸುದೀಪಣ್ಣನ್ನ ನೋಡಿ ಕಲೀರಿ ಎಂಬ ಸಂದೇಶದೊಂದಿಗೆ ವಿಡಿಯೋ ವೈರಲ್ ಆಯ್ತು. ಈಗ ಸುದೀಪ್ ಬೇರೆ ರಾಜಕಾರಣಿಯೂ ಹೌದು. ಸಿಎಂ ಬೊಮ್ಮಾಯಿಯವರಿಗೆ ಬೆಂಬಲ ಘೋಷಿಸಿ ಪರ-ವಿರೋಧ ಎರಡನ್ನೂ ಕಟ್ಟಿಕಕೊಂಡಿದ್ದಾರೆ. ಹೀಗಾಗಿ ಬೇರೆಯದೇ ವಾದವೂ ಬಂತು.


ಆದರೆ ಹೆಡ್`ಲೈನ ನೋಡಿ ಬೇಸ್ತು ಬಿದ್ದವರು, ಕೊನೆಗೆ ರಿಯಲ್ ವಿಷಯ ತಿಳಿದಾಗ ನಕ್ಕೂ ನಕ್ಕೂ ಸುಸ್ತಾದರು. ಬಿದ್ದೂ ಬಿದ್ದೂ ನಕ್ಕರು. ಅಂದಹಾಗೆ ಆ ವಿಡಿಯೋ ಬೆದರಿಕೆ ಹಿಂದೆ ಸುದೀಪ್ ಕಾರು ಚಾಲಕನ ಕೈವಾಡವಿದೆ. ಹಾಗೂ ಆ ಚಾಲಕನನ್ನು ಈ ರೀತಿ ಬೆದರಿಸಲು ಪುಸಲಾಯಿಸಿರುವುದು ಚಿತ್ರರಂಗದ ಒಬ್ಬ ಪ್ರಭಾವಿ ವ್ಯಕ್ತಿ ಎಂಬ ಸುದ್ದಿ ಇದೆ. ಸದ್ಯಕ್ಕೆ ಅಧಿಕೃತವಾಗಿ ಹೇಳೋಕಾಗಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ. ಎಲ್ಲಿ ಹೋಗ್ತಾನೆ.. ಸಿಕ್ಕಿ ಬೀಳ್ತಾನೆ.



