ಸುದೀಪ್ ಹೀರೋ ಹೊರತಾಗಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಹಣಕ್ಕಿಂತಲೂ ಹೆಚ್ಚಿನದಾಗಿ ಪ್ರೀತಿಗಾಗಿ ನಟಿಸಿದ್ದಾರೆ. ಪುಟ್ಟ ಪುಟ್ಟ ಪಾತ್ರಗಳಲ್ಲಿ. ಕೆಲವು ಸಿನಿಮಾಗಳು ಅದನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತವೆ. ಸುದೀಪ್ ಸ್ಟಾರ್ ಗಿರಿ ಮೂಲಕ ಸಿನಿಮಾ ಗೆಲ್ಲಿಸೋ ಪ್ರಚಾರ ತಂತ್ರವೂ ಅದು ಹೌದು. ಈಗ ಮತ್ತೊಮ್ಮೆ ಅಂತಹುದೇ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರಂತೆ. ಚಿತ್ರದ ಹೆಸರು ಶ್ರೀಮಂತ.
ಮೇ 19ರಂದು ಶ್ರೀಮಂತ ಸಿನಿಮಾ ರಿಲೀಸ್ ಆಗುತ್ತಿದೆ. ನಾಳೆಯೇ. ಬಾಲಿವುಡ್ ನಟ ಸೋನುಸೂದ್ ಪ್ರಧಾನ ಪಾತ್ರದಲ್ಲಿರೋ ಶ್ರೀಮಂತ ಚಿತ್ರದಲ್ಲಿ ಸುದೀಪ್ ಕೂಡಾ ನಟಿಸಿದ್ದಾರಂತೆ.
ಸುದೀಪ್ ಅವರದ್ದು ಅತಿಥಿ ಪಾತ್ರವಲ್ಲ. ಅವರೇ ಚಿತ್ರಕ್ಕೆ ಪಿಲ್ಲರ್. ಸಿನಿಮಾ ನೋಡಿದಾಗ ನಿಮಗೆ ಈ ಕಥೆಗೆ ಸುದೀಪ್ ಪಾತ್ರ ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ರಮೇಶ್ ಹಾಸನ್. ರೈತ ಮತ್ತು ಸೈನಿಕ ಈ ದೇಶದ ನಿಜವಾದ ಶ್ರೀಮಂತರು. ಅವರ ಕಥೆಯನ್ನೇ ಚಿತ್ರದಲ್ಲಿ ಹೇಳಲಾಗಿದೆ ಎಂದಿದ್ದಾರೆ ಡೈರೆಕ್ಟರ್.
ಸೋನು ಸೂದ್ ಅವರ ಜೊತೆ ಕ್ರಾಂತಿ, ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್, ಗಿರಿ, ಕುರಿರಂಗ ಸೇರಿದಂತೆ ಹಲವರು ನಟಿಸಿದ್ದಾರೆ. ಜಿ.ನಾರಾಯಣಪ್ಪ, ಟಿ.ಕೆ.ರಮೇಶ್ ಹಾಗೂ ವಿ.ಸಂಜಯ್ ಬಾಬು ಚಿತ್ರದ ನಿರ್ಮಾಪಕರು.



