ಕನ್ನಡದ ಸೆಂಚುರಿ ಸ್ಟಾರ್ ಮತ್ತು ದ.ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇಬ್ಬರೂ ಒಟ್ಟಿಗೇ ಜೈಲರ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವಂಥದ್ದೇ. ಆ ಮೂಲಕ ತಮಿಳಿಗೆ ಎಂಟ್ರಿ ಕೊಡುತ್ತಿರುವ ಶಿವಣ್ಣ, ರಜನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. 

ಖಳನಾಯಕರಾಗಿದ್ದಾರಾ ಶಿವಣ್ಣ?
ಜೈಲರ್ ಚಿತ್ರದಲ್ಲಿ ಶಿವಣ್ಣ ಮತ್ತು ರಜನಿಕಾಂತ್ ಪಾತ್ರವೇನು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಚಿಕ್ಕ ಪಾತ್ರವಾದರೂ ಪ್ರಮುಖ ಪಾತ್ರ ಎಂದಷ್ಟೇ ಶಿವಣ್ಣ ಹೇಳಿದ್ದಾರೆ. ಆದರೆ ಗಾಂಧಿನಗರದ ಮೂಲಗಳು ಶಿವಣ್ಣ ವಿಲನ್ ಆಗಿದ್ದಾರೆ ಎನ್ನುತ್ತಿವೆ. ಇದೇ ಮೊದಲ ಬಾರಿ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದು, ಶಿವಣ್ಣ ವಿಲನ್ ಆಗಲು ಒಪ್ಪಿಕೊಂಡಿದ್ದಾರೆಯೇ ಎಂಬ ಕುತೂಹಲವಿದೆ. ಮುತ್ತಣ್ಣ ಚಿತ್ರದ ಒಂದು ಪಾತ್ರ, ಓಂನ ಸತ್ಯ… 

ಮತ್ತೆ ಕನ್ನಡಕ್ಕೆ ರಜನಿ : ಅಷ್ಟೇ ಅಲ್ಲ, ಈ ನಡುವೆ ರಜನಿಕಾಂತ್ ಕನ್ನಡ ಚಿತ್ರದಲ್ಲಿ ನಟಿಸುವ ಬಗ್ಗೆಯೂ ಸುದ್ದಿಯಾಗಿದೆ. ಕಥಾಸಂಗಮ, ಸಹೋದರರ ಸವಾಲ್, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ತಪ್ಪಿದ ತಾಳ, ಗಲಾಟೆ ಸಂಸಾರ, ಒಂದು ಪ್ರೇಮದ ಕಥೆ, ಕುಂಕುಮ ರಕ್ಷೆ, ಬಾಳು ಜೇನು ಚಿತ್ರಗಳಲ್ಲಿ ನಟಿಸಿದ್ದಾರೆ. 1981ರಲ್ಲಿ ರಜನಿಕಾಂತ್ ಗರ್ಜನೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಕನ್ನಡದ ಸಿನಿಮಾಗಳಲ್ಲಿ ರಜನಿ ನಟಿಸಿಯೇ ಇಲ್ಲ. ಇದೀಗ ಹೊಂಬಾಳೆಯವರ ಜೊತೆ ರಜನಿಕಾಂತ್ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ರಜನಿಕಾಂತ್ ರಾಜ್ಯಕ್ಕೆ ಬಂದಿರುವ ಸಮಯದಲ್ಲಿಯೇ ಈ ಮಾತುಕತೆಯೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.



