ಶಿವಾಜಿ ಸುರತ್ಕಲ್ ಚಿತ್ರವನ್ನ ಅಭಿಮಾನಿಗಳು ಪ್ರೀತಿಯಿಂದ ಅಪ್ಪಿದ್ದಾರೆ. ರಮೇಶ್ ಅರವಿಂದ್ ನಟನೆಯ ‘ಶಿವರಾಜಿ ಸುರತ್ಕಲ್ 2’ ಚಿತ್ರ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನಗಳ ಸಂಭ್ರಮ ಆಚರಿಸುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರದ ವಿಶೇಷವೆಂದರೆ ರಮೇಶ್ ಅರವಿಂದ್ ಕೈಲಿ ಗನ್ನು, ಪಿಸ್ತೂಲ್ ಇದ್ದದ್ದು ಮತ್ತು ಗೆದ್ದದ್ದು.
ರಮೇಶ್ ಅರವಿಂದ್ ಎಂದರೆ ಥಟ್ಟನೆ ಕಣ್ಣ ಮುಂದೆ ಬರೋದು ಪ್ರೀತಿ, ಪ್ರೇಮ, ಗುಲಾಬಿ, ತ್ಯಾಗ, ಭಾವನೆ, ಫ್ಯಾಮಿಲಿ.. ಇವೇ.. ಇದನ್ನೆಲ್ಲದರ ಜೊತೆಯಲ್ಲಿ ಥ್ರಿಲ್ ಕೊಟ್ಟ ಆಕಾಶ್ ಶ್ರೀವತ್ಸ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕಂಟೆಂಟ್ ಮೂಲಕವೇ ಎಳೆದು ತಂದಿದ್ದಾರೆ.
ಕೈಯಲ್ಲಿ ಗುಲಾಬಿ ಹಿಡಿದು ನಾಯಕಿಯರ ಜತೆಗೆ ತೆರೆ ಮೇಲೆ ಮುದ್ದಾಡಿಕೊಂಡು ಇದ್ದವನ ಕೈಗೆ ಪಿಸ್ತೂಲು, ಚಾಕು ಕೊಟ್ಟು ಮರ್ಡಮಿಸ್ಟ್ರಿ ಸಿನಿಮಾ ಮಾಡಿಸಿದ್ದಾರೆ. ನನ್ನ ಚಿತ್ರಗಳಲ್ಲಿ ರಕ್ತನೇ ಕಾಣುತ್ತಿಲ್ಲ. ಈಗ ನಾನೇ ಕೊಲೆಗಾರನಾಗಿದ್ದೇನೆ. ಗಡ್ಡನೇ ಇಲ್ಲದೆ ನೂರು ಸಿನಿಮಾಗಳನ್ನು ಮಾಡಿಬಿಟ್ಟೆ. ನಾನೂ ಚಿತ್ರವನ್ನು ನೋಡಲು ಥಿಯೇಟರ್ಗೆ ಹೋಗಿದ್ದೆ. ಅಲ್ಲಿ ಬಂದಿದ್ದ ಪ್ರೇಕ್ಷಕರನ್ನು ನೋಡಿ ನಿಜವಾದ ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದಾರೆ. ಯಾವುದೋ ಕಾರಣಕ್ಕೆ ಚಿತ್ರಮಂದಿರಗಳಿಂದ ದೂರವೇ ಉಳಿದ್ದ ಪ್ರೇಕ್ಷಕ ವರ್ಗ ಮತ್ತೆ ಚಿತ್ರಮಂದಿರಕ್ಕೆ ಬಂದ ಖುಷಿ ಸಿಕ್ಕಿತು ಎಂದಿದ್ದಾರೆ ರಮೇಶ್ ಅರವಿಂದ್.
ಈ ಚಿತ್ರದ ನಂತರ ರಮೇಶ್ ಅರವಿಂದ್ ಹೊಸ ಚಿತ್ರಕ್ಕೆ ಪ್ಲಾನ್ ಮಾಡಿದ್ದಾರೆ. ಫೊರೆನ್ಸಿಕ್ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿರುವ ಕಥೆಯಂತೆ. ಫೊರೆನ್ಸಿಕ್ ನಾಲೆಡ್ಜ್ ಇಟ್ಟುಕೊಂಡಿರುವ ಕೊಲೆಗಾರನ ಕಥೆ ಅದು. ಒಟ್ಟಿನಲ್ಲಿ ಶಿವಾಜಿ ಸುರತ್ಕಲ್, ರಮೇಶ್ ಅರವಿಂದ್ ಎಂಬ ಪ್ರೇಮಿಯನ್ನು, ತ್ಯಾಗರಾಜನನ್ನು ಕೊಲೆ, ಥ್ರಿಲ್ಲರ್, ಸಸ್ಪೆನ್ಸ್ ಎಂದು ಅಪರಾಧ ಲೋಕದ ಬಗ್ಗೆಯೇ ಯೋಚಿಸುವ ಹಾಗೆ ಮಾಡಿದೆ.



