ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಟ್ರೇಲರ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಶಿವಾಜಿ ಸುರತ್ಕಲ್ : ದಿ ಕೇಸ್ ಆಫ್ ರಣಗಿರಿ ರಹಸ್ಯ ಸಿನಿಮಾ ಭಾರೀ ಮೆಚ್ಚುಗೆ ಪಡೆದಿತ್ತು. ರಮೇಶ್ ಅರವಿಂದ್ ಅವರು ಡಿಟೆಕ್ಟಿವ್ ಆಗಿ ನಟನೆಯಲ್ಲಿ ದೊಡ್ಡ ಮಾರ್ಕ್ಸ್ ಗಳಿಸಿದ್ದರು. ಆರೋಹಿ ನಾರಾಯಣ್, ಅವಿನಾಶ್, ರಾಘು ರಾಮನಕೊಪ್ಪ, ವಿನಯ್ ಗೌಡ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ಪಾರ್ಟ್ 2 ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.
ಮಾಯಾವಿಯ ಹುಡುಕಾಟಕ್ಕೆ ಹೊರಡುವ ಶಿವಾಜಿ ಸುರತ್ಕಲ್, ಮಗಳ ಜೊತೆ ತುಂಟಾಟವಾಡುವ ಶಿವಾಜಿ, ಮೇಘನಾ ಗಾಂವ್ಕರ್ ಪಾತ್ರದ ಜೊತೆ ಸಂಥಿಂಗ್ ಈಸ್ ಸಸ್ಪೆನ್ಸ್.. ಟೋಟಲ್ಲಿ ಆಕಾಶ್ ಶ್ರೀವತ್ಸ ಬೇರೆಯದೇ ಕಥೆ ಹೇಳೋಕೆ ಹೊರಟಿದ್ದಾರೆ. ಮಾಯಾವಿ ಯಾರು..? ಅದು ರಮೇಶ್ ಅರವಿಂದ್ ಅವರೇನಾ..? ಡಬಲ್ ಆಕ್ಟಿಂಗ್ ಮಾಡಿದ್ದಾರಾ..? ಟ್ರೇಲರ್ ಹುಟ್ಟಿಸಿರುವ ಕುತೂಹಲ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರುವಂತಿದೆ. ದಟ್ಸ್ ಇಟ್.



