Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಶರಣ್ ಹುಟ್ಟುಹಬ್ಬ ಸ್ಪೆಷಲ್ : ಹೊಸ ಚಿತ್ರ ಕರೆಂಟ್ ಶಾಕ್. ಹೊಸ ಟೀಸರ್ ಡೈನಮೋ ಶಾಕ್

SpeciallU by SpeciallU
February 7, 2023
in Cinema
Reading Time: 1 min read
0 0
0
ಶರಣ್ ಹುಟ್ಟುಹಬ್ಬ ಸ್ಪೆಷಲ್ : ಹೊಸ ಚಿತ್ರ ಕರೆಂಟ್ ಶಾಕ್. ಹೊಸ ಟೀಸರ್ ಡೈನಮೋ ಶಾಕ್

ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆಯಾಗುವುದು, ಈಗಾಗಲೇ ಚಾಲ್ತಿಯಲ್ಲಿರುವ ಸಿನಿಮಾಗಳ ಟೀಸರ್, ಟ್ರೇಲರ್ ಅಥವಾ ಪೋಸ್ಟರ್ ರಿಲೀಸ್ ಆಗುವುದು, ಒಪ್ಪಿಕೊಳ್ಳಲು ಕ್ಯೂನಲ್ಲಿರುವವರು ಜಾಹೀರಾತು ನೀಡುವುದು ಚಿತ್ರರಂಗದಲ್ಲಿ ಮಾಮೂಲಿ. ಕಾಮಿಡಿ ಕಿಂಗ್ ಶರಣ್ ಕೂಡಾ ಅದಕ್ಕೆ ಹೊರತಲ್ಲ. ಶರಣ್ ಹುಟ್ಟುಹಬ್ಬಕ್ಕೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಇದ್ಯಾಕೆ ಶಾಕ್ ಎನ್ನಬೇಡಿ. ಕಾಮಿಡಿ ಶಾಕ್ ಕೊಡುತ್ತಿದ್ದ ಶರಣ್, ಇದೀಗ ಎಲೆಕ್ಟ್ರಿಕ್ ಶಾಕ್ ಕೊಡೋಕೆ ಬರ್ತಿದ್ದಾರೆ. ಯೆಸ್, ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್ ಅವರ ಹೊಸ ಸಿನಿಮಾಗೆ ಶರಣ್ ಹೀರೋ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಶರಣ್ ಎಲೆಕ್ಟ್ರಿಷಿಯನ್ ಪಾತ್ರ ಮಾಡುತ್ತಿದ್ದಾರೆ. ಸಿಂಪಲ್ ಸುನಿ ಜೊತೆಯಲ್ಲಿ ಡಾರ್ಕ್ ಹಾರರ್ ಕಾಮಿಡಿ ಮೂಲಕ ಅವತಾರ ಪುರುಷನಾಗಿ ಗೆದ್ದಿದ್ದ ಶರಣ್, ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದಾರೆ.

ಶರಣ್ ಅಭಿನಯದಲ್ಲಿ ಒಂದು ಹ್ಯೂಮರ್ ಟಚ್ ಇರುತ್ತದೆ. ಚಿತ್ರದಲ್ಲಿ ಹೀರೋ ಆದ್ರೂ, ಹಾಸ್ಯಕ್ಕೆ ಕೊರತೆ ಇರೋದಿಲ್ಲ.ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರಲಿದ್ದು, ಬಾಗಲಕೋಟೆಯ ಕಥೆ ಇದೆ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ. ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಇನ್ನೂ ಹೆಸರಿಡದ ಈ ಚಿತ್ರ ನೈಜ ಘಟನೆಯ ಸುತ್ತ ಸುತ್ತುತ್ತದೆ. ಇದು ರಾಜಕೀಯ ವಿಡಂಬನೆಯಾಗಿದ್ದು, ಉತ್ತರ ಕರ್ನಾಟಕದ ಬಾಗಲಕೋಟೆಯ ಭೌಗೋಳಿಕತೆಯನ್ನು ಆಧರಿಸಿದ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದೆ. ಚಿತ್ರದ ಕಥಾವಸ್ತುವು ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಣಾಮವಾಗಿ ಸುಮಾರು 20 ಹಳ್ಳಿಗಳು ಮುಳುಗಡೆ ಪ್ರದೇಶಕ್ಕೆ ಬಂದವು ಮತ್ತು ಕೃಷಿ ಭೂಮಿಯನ್ನು ಹೊಂದಿದ್ದ ಜನರ ಮೇಲೆ ಅದರ ಪ್ರಭಾವದ ಕುರಿತಾಗಿದೆ. ಇದು ನಮ್ಮ ಕಥಾಹಂದರದ ಕಾಲ್ಪನಿಕ ಹಿನ್ನೆಲೆಯಾಯಿತು ಎಂದು ಅರವಿಂದ್ ಹೇಳುತ್ತಾರೆ.

ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಆಯ್ಕೆಯಾಗಿದ್ದು, ಪತ್ರಕರ್ತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತು ರಾಜು ತಾಳಿಕೋಟೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಇದೇ ತಿಂಗಳ 20 ರಂದು ಚಿತ್ರೀಕರಣ ಆರಂಭಗೊಳ್ಳುತ್ತಿದೆ.

ಅಷ್ಟೇ ಅಲ್ಲ, ಛೂಮಂತರ್ ಚಿತ್ರದ ಟೀಸರ್ ಕೂಡಾ ಹೊರಬಂದಿದೆ. ಕರ್ವ ಖ್ಯಾತಿಯ ನವನೀತ್ ನಿರ್ದೇಶನದ ಛೂಮಂತರ್ ಚಿತ್ರದಲ್ಲಿ ಶರಣ್ ಡೈನಮೋ ಆಗಿದ್ದಾರೆ. ಅದೂ ಕೂಡಾ ಡಾರ್ಕ್ ಹಾರರ್ ಸಿನಿಮಾನೇ. ತರುಣ್ ಶಿವಪ್ಪ ನಿರ್ಮಾಣದ ಛೂಮಂತರ್ ಚಿತ್ರದಲ್ಲಿ ಮೇಘನಾ, ಆದಿತಿ ಪ್ರಭುದೇವ, ರಂಜನಿ ರಾಘವನ್, ಚಿಕ್ಕಣ್ಣ ಸೇರಿದಂತೆ ಘಟಾನುಘಟಿಗಳೇ ಇದ್ದಾರೆ.

Tags: #ಶರಣ್ #ಹುಟ್ಟುಹಬ್ಬ #ಘೋಷಣೆ #ಅಮೃತಾಅಯ್ಯಂಗಾರ್ #ಹೊಸಚಿತ್ರ #ಛೂಮಂತರ್ #sharan #birthday #announcement #amritaayyengar #newfilm #chhoomantar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.