ಕಿರುತೆರೆ ಲೋಕದ ಟಿಆರ್‍ಪಿ ರೇಸ್‍ನ ರಿಸಲ್ಟ್ ಗುರುವಾರ ಹೊರಬಿದ್ದಿದೆ. ಈ ಲೆಕ್ಕದ ಪ್ರಕಾರ ಈ ವಾರವೂ ಗಟ್ಟಿಮೇಳ ಸೀರಿಯಲ್ ನಂ.1 ಸ್ಥಾನ ಪಡೆದುಕೊಂಡಿದೆ. ಗಟ್ಟಿಮೇಳಕ್ಕೆ ಇದು ಸತತ 2ನೇ ವಾರದ ನಂ.1 ಪಟ್ಟದ ಸಂಭ್ರಮ.
ನಂ.1 ಗಟ್ಟಿಮೇಳ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೊದಲಿದೆ. ಸಾವಿರ ಎಪಿಸೋಡ್ ಮುಗಿಸಿದ ಬಳಿಕವೂ ಧಾರಾವಾಹಿಗೆ ಬೇಡಿಕೆ ಕಡಿಮೆ ಆಗಿಲ್ಲ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಕ್ಷಿತ್ ವೇದಾಂತ್ ಆಗಿ ಗಮನ ಸೆಳೆದರೆ ನಿಶಾ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಈ ವಾರದ ಟಿಆರ್ಪಿ ರೇಸ್ನಲ್ಲಿ ಮೊದಲಿದೆ.
ನಂ.2 ಪುಟ್ಟಕ್ಕನ ಮಕ್ಕಳು
ಉಮಾಶ್ರೀ ಪ್ರಧಾನ ಪಾತ್ರದಲ್ಲಿರೋ ಪುಟ್ಟಕ್ಕನ ಮಕ್ಕಳುಗೆ ಈ ವಾರವೂ ನಂ.2 ಸ್ಥಾನವೇ ಇದೆ. ಇದೂ ಕೂಡಾ ಝೀ ಕನ್ನಡದ ಸೀರಿಯಲ್.
ನಂ.3 ಭಾಗ್ಯಲಕ್ಷ್ಮಿ
3ನೇ ಸ್ಥಾನ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರಾವಾಹಿಗೆ. ಭೂಮಿಕಾ ರಮೇಶ್, ಸುಷ್ಮಾ ಕೆ. ರಾವ್, ಸುದರ್ಶನ್ ರಂಗಪ್ರಸಾದ್ ಮೊದಲಾದವರು ಈ ಧಾರಾವಾಹಿಯಲ್ಲಿದ್ದಾರೆ.
ನಂ.4 ಲಕ್ಷ್ಮೀ ಬಾರಮ್ಮ
4ನೇ ಸ್ಥಾನ ಕೂಡಾ ಕಲರ್ಸ್ ಕನ್ನಡದ್ದೇ. ಈ ಬಾರಿ ಲಕ್ಷ್ಮೀ ಬಾರಮ್ಮ ಸೀರಿಯಲ್ಲಿಗೆ 4ನೇ ಸ್ಥಾನ ಸಿಕ್ಕಿದೆ.
ನಂ.5 ಶ್ರೀರಸ್ತು ಶುಭಮಸ್ತು
ಸುಧಾರಾಣಿ ಪ್ರಮುಖ ಪಾತ್ರದಲ್ಲಿರೋ ಶ್ರೀರಸ್ತು ಶುಭಮಸ್ತು ಟಾಪ್ 5ರಲ್ಲಿದೆ. ಸುಧಾರಾಣಿ ತುಳಸಿ ಹೆಸರಿನ ಪಾತ್ರವನ್ನು ಮಾಡಿದ್ದಾರೆ. ಮಾಧವ್ ಆಗಿ ಅಜಿತ್ ಹಂದೆ ಕಾಣಿಸಿಕೊಂಡಿದ್ದಾರೆ.



