ಅಂದು ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ.. ನಾ ಹೇಳೋ ಕಥೆಯನ್ನ..
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ..
ಎಂದು ಹಾಡಿದ್ದರು ಕುಮಾರ್ ಬಂಗಾರಪ್ಪ. ಚಿ.ಉದಯಶಂಕರ್ ಒಂದು ಹಾಡಿನಲ್ಲಿ ಹೊಯ್ಸಳ ಸಾಮ್ರಾಜ್ಯ ಹುಟ್ಟಿದ ಕಥೆ ಹೇಳಿದ್ದರು. ಹಾಗೆ ನೋಡಿದರೆ ಬೇಲೂರು, ಹಳೇಬೀಡು, ಸೋಮನಾಥಪುರ, ಶ್ರವಣ ಬೆಳಗೊಳಗಳಂತಹ ಸಾಂಸ್ಕøತಿಕ ಹಿರಿಮೆ ನೀಡಿದ ಹೊಯ್ಸಳರ ಬಗ್ಗೆ ಸಿನಿಮಾ ಆಗಿಯೇ ಇಲ್ಲ. ಹೊಯ್ಸಳರ ಪ್ರಮುಖ ಚಕ್ರವರ್ತಿ ವಿಷ್ಣುವರ್ಧನ. ನಾಟ್ಯರಾಣಿ ಶಾಕುಂತಲೆ. ಆದರೂ ಅದೇಕೋ ಏನೋ..


ಮಿಕ್ಕಿದ್ದೆಲ್ಲ ಢಂಢಂಢಂ..ರಕ್ತಪಾತ..ಕತ್ತರಿಸಿ..ಕೊಚ್ಚುವ ದೃಶ್ಯಗಳೇ. ಹಾಡನ್ನು ಗುರುದೇವ್ ಎಂಬ ಅಧಿಕಾರಿಯ ಆಟಿಟ್ಯೂಡ್ ಮತ್ತು ವ್ಯಕ್ತಿತ್ವ ತೋರಿಸುವುದಕ್ಕೇ ಮೀಸಲಿಟ್ಟು ರೂಪಿಸಲಾಗಿದೆ. ಸಲಗದ ನಂತರ ಮತ್ತೊಮ್ಮೆ ಖಾಕಿ ತೊಟ್ಟಿರುವ ಡಾಲಿ ಧನಂಜಯ ವ್ಹಾವ್ ಎನ್ನಿಸುತ್ತಾರೆ. ಹಾಡಿಗೆ ಸಾಹಿತ್ಯ ನೀಡಿರುವುದು ಸಂತೋಷ್ ಆನಂದರಾಮ್. ಅಜನೀಶ್ ಲೋಕನಾಥ್ ಸಂಗೀತವಿದ್ದು, ನಕಾಶ್ ಅಜೀಜ್ ಧ್ವನಿಯಲ್ಲಿ ಒಂದು ಖಡಕ್‍ತನವಿದೆ.
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಯೋಗಿ ಬಿ.ರಾಜ್, ಈ ಹಾಡಿನ ರ್ಯಾಪ್ ಸಾಹಿತ್ಯವನ್ನು ಬರೆದಿರುವುದಷ್ಟೇ ಅಲ್ಲ, ಹಾಡನ್ನೂ ಹಾಡಿದ್ದಾರೆ. ಕಾರ್ತಿಕ್ ಗೌಡ ಹಾಗೂ ಯೋಗಿ ಬಿ.ರಾಜ್ ಒಟ್ಟಾಗಿ ನಿರ್ಮಿಸುತ್ತಿರುವ ಚಿತ್ರ ರಿಲೀಸ್ ಆಗುವುದು ಮಾರ್ಚ್ 30ಕ್ಕೆ. ಒಂದು ತಿಂಗಳು ಮೊದಲೇ ಚಿತ್ರದ ಪ್ರಮೋಶನ್ ಶುರುವಾಗಿದೆ.
ಡಾಲಿಗೆ ಅಮೃತಾ ಅಯ್ಯಂಗಾರ್ ಈ ಚಿತ್ರದಲ್ಲಿ ಮತ್ತೊಮ್ಮೆ ಹೀರೋಯಿನ್. ಅಚ್ಯುತ್ ಕುಮಾರ್, ಮಯೂರಿ ನಟರಾಜ್, ರಾಜೇಶ್ ನಟರಾಜ್, ನವೀನ್ ಶಂಕರ್.. ಹೀಗೆ ಚೆಂದದ ತಾರಾಗಣವಿರುವ ಚಿತ್ರ ಹೊಯ್ಸಳ.



