ರಿಷಬ್ ಶೆಟ್ಟಿ ಕನ್ನಡದ ಭರವಸೆಯ ನಟರಷ್ಟೇ ಅಲ್ಲ, ಭರವಸೆಯ ನಿರ್ದೇಶಕ, ನಿರ್ಮಾಪಕರು. ಕಾಂತಾರ, ಇತ್ತೀಚೆಗೆ ಇಡೀ ಇಂಡಿಯಾ ಗುರುತಿಸಿದ ಸಿನಿಮಾ ಅಷ್ಟೆ. ಅದಕ್ಕೂ ಮುನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ರಿಕ್ಕಿ, ಕಿರಿಕ್ ಪಾರ್ಟಿ, ಬೆಲ್`ಬಾಟಂ, ಕಥಾ ಸಂಗಮ ಚಿತ್ರಗಳ ಮೂಲಕ ಬೇರೆಯದೇ ಜಾನರ್ ಸೃಷ್ಟಿಸಿಕೊಂಡಿದ್ದ ರಿಷಬ್ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಗಣ್ಯರಲ್ಲಿ ಒಬ್ಬರು.
ಅಂತಹ ರಿಷಬ್ ಶೆಟ್ಟಿ ಅವರಿಗೆ ಭರವಸೆಯ ನಟ ಎಂದು ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಗುರುತಿಸಿ ಗೌರವಿಸಿ ಪುರಸ್ಕಾರ ನೀಡಲಾಗಿದೆ. ಈ ಪ್ರಶಸ್ತಿಯನ್ನು ಫೆಬ್ರವರಿ 20ರಂದು ಪ್ರದಾನ ಮಾಡಲಾಗುತ್ತಿದೆ. ರಿಷಬ್ ಶೆಟ್ಟಿಯವರಿಗೆ ಸಿಕ್ಕಿರುವ ಈ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿಗೆ ಕೂಡಾ ಕಾರಣ ಕಾಂತಾರ. ಚಿತ್ರರಂಗದ ಮಂದಿಯಷ್ಟೇ ಅಲ್ಲ, ಹೊರಗಿನವರು ಕೂಡಾ ರಿಷಬ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕೆಲವರು ಕೊಂಕನ್ನೂ ತೆಗೆದಿದ್ದಾರೆ.
ರಿಷಬ್ ಶೆಟ್ಟಿಯವರಿಗೆ ಈ ಪ್ರಶಸ್ತಿ ಘೋಷಣೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಭೇಟಿಯೂ ಏಕಕಾಲಕ್ಕೆ ನಡೆದಿದ್ದೇ ಇದಕ್ಕೆಲ್ಲ ಕಾರಣ. ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಗೂ ಮೋದಿ ಭೇಟಿಗೂ ತಳುಕು ಹಾಕಿ ಕೆಲವರು ಮಾತನಾಡಿದ್ದೂ ಇದೆ. ಆದರೆ ವಾಸ್ತವ ಸಂಗತಿ ಏನು ಗೊತ್ತೇ?




ಅಂದಹಾಗೆ ಟೀಕೆ ಮಾಡುತ್ತಿರುವವರಲ್ಲಿ ಕೆಲವು ಸೆಲಬ್ರಿಟಿಗಳೂ ಇದ್ದಾರೆ. ಸಿನಿಮಾ ಪತ್ರಕರ್ತರೂ ಇದ್ದಾರೆ. ಬುದ್ದಿಜೀವಿಗಳೆನ್ನಿಸಿಕೊಂಡವರೂ ಇದ್ದಾರೆ. ರಾಹುಲ್ ಗಾಂಧಿ ಬಗ್ಗೆ ನೋ ಕಮೆಂಟ್ಸ್ ಎಂದು ಹೇಳಿದಾಗಿನಿಂದ ಶುರುವಾಗಿರುವ ಹೆಚ್ಚುವರಿ ಪ್ರೀತಿಯ ಫಲಿತಾಂಶ ಇದು. ಅಷ್ಟೆ.



