ಆರ್.ಚಂದ್ರು ಅವರು ಕಬ್ಜ ಚಿತ್ರವನ್ನು ಲೇಟ್ ಮಾಡುತ್ತಿದ್ದಾರೆ ಎಂದು ಶಿವಣ್ಣ ವೇದಿಕೆಯೊಂದರಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಶಿವಣ್ಣ ಅವರಿಗೆ ನನಗೆ ಬುದ್ದಿ ಹೇಳೋ ಎಲ್ಲ ಅಧಿಕಾರ ಇದೆ ಎಂದು ಉತ್ತರ ಕೊಟ್ಟಿದ್ದರು ಆರ್.ಚಂದ್ರು. ಶಿಡ್ಲಘಟ್ಟದಲ್ಲಿ ನಡೆದ ಹಾಡಿನ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದವರು ಶಿವಣ್ಣ. ಆಗ ಉಪೇಂದ್ರ ಚಿತ್ರದಲ್ಲಿ ಇನ್ನೊಬ್ಬ ಸ್ಟಾರ್ ನಟರಿದ್ದಾರೆ ಎಂದು ಸುಳಿವು ಕೊಟ್ಟಿದ್ದರು. ಈ ಹಿಂದೆ ಆರ್.ಚಂದ್ರು ಅವರ ಜೊತೆ ಮೈಲಾರಿ ಚಿತ್ರ ಮಾಡಿದ್ದರು ಚಂದ್ರು. 13 ವರ್ಷಗಳ ನಂತರ ಮತ್ತೊಮ್ಮೆ ಚಂದ್ರು ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ. ಉಪೇಂದ್ರ ಜೊತೆ ಪ್ರೀತ್ಸೆ ಮತ್ತು ಲವಕುಶ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಶಿವಣ್ಣ, ಉಪ್ಪಿ ನಿರ್ದೇಶನದ ಓಂ ಚಿತ್ರದಲ್ಲಿಯೂ ನಟಿಸಿದ್ದವರು.




‘ಕಬ್ಜ’ ಚಿತ್ರದ ಹಾಡೊಂದನ್ನು ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭಾಗವಹಿಸಿದ್ದು ವಿಶೇಷವಾಗಿತ್ತು. ಇಂದು ‘ಕಬ್ಜ’ ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ.. ಅಂದ್ರೆ ಮಾರ್ಚ್ 17 ರಂದು ‘ಕಬ್ಜ’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಪುನೀತ್ ರಾಜ್ಕುಮಾರ್ ಅವರ ಸವಿನೆನಪಿನಲ್ಲಿ ‘ಕಬ್ಜ’ ಸಿನಿಮಾ ತೆರೆಗೆ ಬರಲಿದೆ.



