ಒಂದಲ್ಲ..ಎರಡಲ್ಲ.. ಅವರಿಬ್ಬರೂ ಒಟ್ಟಿಗೇ ನಟಿಸಿದ್ದ ಚಿತ್ರಗಳ ಸಂಖ್ಯೆ ಬರೋಬ್ಬರಿ 21. ಆ 21 ಚಿತ್ರಗಳಲ್ಲ ಅಪೂರ್ವ ರಾಗಂಗಳ್, ಮೂಂಡ್ರು ಮುಡಿಚ್ಚು, ತಪ್ಪು ತಾಲಂಗಲ್ (ಇದು ಕನ್ನಡದಲ್ಲಿಯೂ ಬಂದಿದೆ), ತಿಳ್ಳು ಮುಳ್ಳು, ಪಥಿನಾರು ವಯತಿನಿಲೆ, ನಿನ್ನೈತಲೆ ಇನಿಕ್ಕುಮ್, ನಚ್ಚತೀರಂ.. ಅಂತಹ ಕ್ಲಾಸ್ ಮತ್ತು ಮಾಸ್ ಹಿಟ್ ಚಿತ್ರಗಳೂ ಇವೆ. ರಜನಿ ಚಿತ್ರಗಳಲ್ಲಿ ಕಮಲ್ ಹಾಸನ್, ಕಮಲ್ ಹಾಸನ್ ಚಿತ್ರಗಳಲ್ಲಿ ರಜನಿ ಅತಿಥಿ ನಟರಾಗಿ ನಟಿಸಿದ್ದನ್ನು ಭಾರತೀಯ ಚಿತ್ರರಂಗ ಕಣ್ತುಂಬಿಕೊಂಡಿದೆ. ಗೆಸ್ಟ್ ರೋಲ್ ಹೊರತುಪಡಿಸಿದರೆ ಇಬ್ಬರೂ ನಟಿಸಿದ್ದ ಚಿತ್ರಗಳು 16.
ಒಂದು ಹಂತದಲ್ಲಿ ಕಮಲ್ ಹಾಸನ್ ಅವರೇ ರಜನಿಕಾಂತ್ ಅವರಿಗೆ ಹೇಳಿ, ಸೋಲೋ ಹೀರೋ ಮಾಡಿಸಿದ್ರಂತೆ. ಅದನ್ನು ಸ್ವತಃ ರಜನಿಕಾಂತ್ ಅವರೇ ಹೇಳಿಕೊಂಡಿದ್ದಾರೆ. ಇಲ್ಲದಿದ್ದರೆ ನಾನು ಸೆಕೆಂಡ್ ಹೀರೋ ಆಗಿಯೇ ಇರುತ್ತಿದ್ದೆ. ನಾನು ಸೋಲೋ ಹೀರೋ ಆಗಿದ್ದೇ ಕಮಲ್ ಹಾಸನ್ ಅವರಿಂದ ಎಂದಿದ್ದರು ರಜನಿ. ಅಷ್ಟೇ ಅಲ್ಲ, ಆರಂಭದ ದಿನಗಳಲ್ಲಿ ರಜನಿಯನ್ನು ವಿದೇಶಗಳಲ್ಲಿ ಸುತ್ತಿಸಿದ್ದವರು ಕಮಲ್ ಹಾಸನ್. ಫ್ರೆಂಡ್ ಶಿಪ್ ಇವತ್ತಿಗೂ ಹಾಗೆಯೇ ಇದೆ.
ಹೀಗಾಗಿಯೇ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಲಿಸ್ಟಿನಲ್ಲಿ ಯಾರು ನಂ.1 ಎಂದರೆ ಕಟ್ಟಾ ಅಭಿಮಾನಿಗಳೂ ರಜನಿಕಾಂತ್ ಅವರಾ.. ಕಮಲ್ ಹಾಸನ್ ಅವರಾ ಎಂದು ಕನ್`ಫ್ಯೂಸ್ ಆಗ್ತಾರೆ. ವಿಶೇಷವೆಂದರೆ ಈ ಇಬ್ಬರೂ ಗೆಳೆಯರು. ಜೀವಕ್ಕೆ ಜೀವ ಕೊಡುವ ಗೆಳೆಯರು. ಒಂದು ಕಾಲದಲ್ಲಿ ರಜನಿಕಾಂತ್ ಅವರಿಗೆ ಅವಕಾಶ ಇಲ್ಲದಿದ್ದಾಗ ಸಹಾಯ ಮಾಡಿದ್ದವರು ಕಮಲ್ ಹಾಸನ್. ಕಮಲ್ ಹಾಸನ್ ರಾಜಕೀಯ ವಿರೋಧಿಗಳ ಆಟಕ್ಕೆ ಗುರಿಯಾಗುತ್ತಿದ್ದಾಗ ರಜನಿಕಾಂತ್ ಅವರ ಒಂದು ಹೇಳಿಕೆ, ವಿರೋಧಿಗಳು ಬಾಲಮುದುರಿಕೊಳ್ಳೋ ಹಾಗೆ ಮಾಡಿತ್ತು. ರಜನಿಕಾಂತ್ ನಾನು ಬೀದಿಗಿಳಿಯಬೇಕಾಗುತ್ತದೆ ಹುಷಾರ್ ಎನ್ನುವವರೆಗೂ ಆಗ ಸಿಎಂ ಆಗಿದ್ದ ಜಯಲಲಿತಾ, ಕಮಲ್ ಹಾಸನ್ ಅವರ ವಿಶ್ವರೂಪಂ ಬಿಡುಗಡೆಗೆ ಅವಕಾಶ ಕೊಟ್ಟಿರಲಿಲ್ಲ. ಇದಷ್ಟೇ ಅಲ್ಲ, ವೇದಿಕೆಗಳಲ್ಲಿ ರಜನಿಯನ್ನು ಕಮಲ್, ಕಮಲ್ ಅವರನ್ನು ರಜನಿ ಹೊಗಳೋದು ಕಾಮನ್. ಆದರೆ.. ಇವರಿಬ್ಬರೂ ಒಟ್ಟಿಗೇ ನಟಿಸುವ ಆಸೆ ಹಾಗೆಯೇ ಉಳಿದುಕೊಂಡಿದೆ.
ಒಂದು ಕಾಲದಲ್ಲಿ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದವರು ಎನ್ನುವುದನ್ನೂ ಮರೆಯುವಂತಿಲ್ಲ. ಇದೀಗ ರಜನಿ-ಕಮಲ್ ಇಬ್ಬರೂ ಮತ್ತೊಮ್ಮೆ ಒಟ್ಟಿಗೇ ನಟಿಸುವ ಕಾಲ ಕೂಡಿ ಬಂದಂತೆ ಕಾಣ್ತಿದೆ. ಆದರೆ.. ಒಂದು ಸಣ್ಣ ಟ್ವಿಸ್ಟ್ ಇದೆ. ರಜನಿ ನಟಿಸ್ತಾರೆ. ಕಮಲ್ ನಟಿಸಲ್ಲ. ಹೀಗೇಕೆ ಎನ್ನಬೇಡಿ. ಇರೋದೇ ಹಾಗೆ.
ಈ ಬಗ್ಗೆ ಕಮಲ್ ಹಾಸನ್ ಅವರೇ ರಜನಿಯ ಒಂದು ಸಿನಿಮಾ ನಿರ್ಮಾಣ ಮಾಡಬೇಕಿದೆ. ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದಾರೆ. ಡೈರೆಕ್ಟರ್ ಯಾರು? ಕಥೆ ಎಂಥದ್ದು ಎಲ್ಲವನ್ನ ಸೈಡಿಗಿಡಿ, ಪಕ್ಕಾ ಎಂದು ಹೇಳಿಬಿಡಿ ಸಾಕು ಎನ್ನುತಿದ್ದಾರೆ ಫ್ಯಾನ್ಸ್.
ಸದ್ಯಕ್ಕೆ ರಜನಿಕಾಂತ್ ಜೈಲರ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಆ ಜೈಲರ್ ಚಿತ್ರದಲ್ಲಿ ಶಿವಣ್ಣ ಕೂಡಾ ಇದ್ದಾರೆ ಅನ್ನೋದು ಸ್ಪೆಷಲ್. ಈ ನಡುವೆಯೇ ಈ ಸಿನಿಮಾ ಸೆನ್ಸೇಷನ್ ಸೃಷ್ಟಿಯಾಗಿದೆ.



