ಕಳೆದ ಕೆಲ ದಿನಗಳಿಂದ ಅತೀ ಹೆಚ್ಚು ಚರ್ಚೆಯಲ್ಲಿರುವುದು ತನಿಷಾ ಕುಪ್ಪಂಡ ಎಂಬ ಹೀರೋಯಿನ್. ಪೆಂಟಗನ್ ಚಿತ್ರದ ಕಾಮನಬಿಲ್ಲು.. ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದ ಈ ಹುಡುಗಿ, ಚಿತ್ರದ ರಿಲೀಸ್ ಹೊತ್ತಿನಲ್ಲಿ ವಿವಾದಗಳಿಂದ ಸುದ್ದಿ ಮಾಡಿದರು. ತನಿಷಾ ಅವರ ಬೋಲ್ಡ್ ನಟನೆಯೇ ವಿವಾದಕ್ಕೆ ಕಾರಣವಾಗಿತ್ತು. ಇವುಗಳ ಮಧ್ಯೆ ಯೂಟ್ಯೂಬರ್ ಒಬ್ಬನ ಲೈಕ್ಸು, ಕಮೆಂಟ್ಸುಗಳ ಹುಚ್ಚು ಇನ್ನೊಂದಷ್ಟು ವಿವಾದ ಸೃಷ್ಟಿಸಿತು. ಪೊಲೀಸ್ ಫೇಲ್ಯೂರ್, ಪೆಂಟಗನ್ ಚಿತ್ರತಂಡದ ಫೇಲ್ಯೂರ್ ಕೂಡಾ ಎದ್ದು ಕಂಡಿತು. ಇದರ ಮಧ್ಯೆ ರಾಜಾಹುಲಿ ಮೂಲಕ ಖ್ಯಾತಿಗೆ ಬಂದ ಹರ್ಷ ಕೂಡಾ ವಿವಾದಕ್ಕೆ ಸಿಲುಕಿದ್ದಾರೆ. ಅದು ಶುರುವಾಗಿದ್ದು ಹೀಗೆ..
ನೀವು ಬ್ಲೂಫಿಲಂನಲ್ಲಿ ನಟಿಸ್ತೀರಾ..? ಬೆತ್ತಲೆ ಚಿತ್ರಗಳಲ್ಲಿ ಆಕ್ಟ್ ಮಾಡ್ತೀರಾ..? ಪೆಂಟಗನ್ ಚಿತ್ರದ ನಾಯಕಿ ತನಿಷಾ ಕುಪ್ಪಂಡ ಅವರಿಗೆ ಈ ಪ್ರಶ್ನೆ ಕೇಳಿ ಯೂಟ್ಯುಬರ್ ಒಬ್ಬ ಫೇಮಸ್ ಆಗಿದ್ದಾನೆ. ಆದರೆ ಆತ ಅಷ್ಟೇ ಅಲ್ಲ, ಈ ಸುದ್ದಿ ವೈರಲ್ ಆದ ನಂತರ ರಾಜಾಹುಲಿ ಖ್ಯಾತಿಯ ಹರ್ಷ ಕೂಡಾ ಇದೇ ರೀತಿ ಎಡವಟ್ಟು ಮಾಡಿದ್ದಾರೆ ಅನ್ನೋದು ತನಿಷಾ ಆರೋಪ.


ನಟಿ ತನಿಷಾ, ಪೆಂಟಗನ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಾಮನಬಿಲ್ಲು ಹೆಸರಿನ ಹಾಡೊಂದು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ಮಾಪಕರು. ರಾಜಾಹುಲಿ ಚಿತ್ರಕ್ಕೂ ಅವರೇ ಡೈರೆಕ್ಟರ್ ಆಗಿದ್ದರು. ಯಶ್ ಅವರನ್ನು ಸ್ಟಾರ್ ಪಟ್ಟಕ್ಕೇರಿದ ಚಿತ್ರ ರಾಜಾಹುಲಿ. ಆ ಚಿತ್ರದಲ್ಲಿ ನಟಿಸಿದ್ದ ಹರ್ಷ ಅವರಿಗೆ ರಾಜಾಹುಲಿ ದೊಡ್ಡ ಹೆಸರು ತಂದುಕೊಟ್ಟಿತ್ತು.


ಪೆಂಟಗನ್ ಇದೇ ಏಪ್ರಿಲ್ 7ರಂದು ರಿಲೀಸ್ ಆಗುತ್ತಿದೆ. ಪೆಂಟಗನ್ ನೀಲಿ ಚಿತ್ರವಂತೂ ಖಂಡಿತಾ ಅಲ್ಲ. ಈ ಚಿತ್ರದಲ್ಲಿ ತೋರಿಸಿದ್ದಕ್ಕಿಂತಲೂ ಬೆತ್ತಲಾಗಿ, ಅತಿ ಎನ್ನಿಸುವಂತೆ ಬೆಡ್ ರೂಂ ತೋರಿಸಿರುವ ಚಿತ್ರಗಳೂ ಇವೆ. ಆದರೆ, ಒಬ್ಬ ನಾಯಕಿಗೆ ಈ ರೀತಿಯ ಪ್ರಶ್ನೆ ಕೇಳುವ ಧೈರ್ಯವನ್ನು ಇದೂವರೆಗೆ ಯಾರೂ ಮಾಡಿರಲಿಲ್ಲ.



