ಅವನು ಸಿಂಗಲ್ ಸುಂದರ.. ವಯಸ್ಸಾಗಿದೆ. ಮದುವೆಯಾಗಿಲ್ಲ. ಹೆಣ್ಣು ಸಿಗ್ತಿಲ್ಲ. ಅಥವಾ ಇವನೇ ಒಪ್ತಿಲ್ವೋ.. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋ ಹಾಗೆ ಮದುವೆಯಾಗದ ಹುಡುಗರೆಲ್ಲ ಮದುವೆಯೇ ವೇಸ್ಟು, ಬ್ರಹ್ಮಚರ್ಯವೇ ಬೂಸ್ಟು ಅಂತಾ ಹೇಳ್ಕೊಂಡ್ ಓಡಾಡ್ತಾರೆ. ಸ್ವಲ್ಪ ಸೈಡಿಗೆ ಕರೆದುಕೊಂಡು ಹೋಗಿ ಕೇಳಿದ್ರೆ ಆಗ ಅವರಿಗೆ ಗೊತ್ತಾಗುತ್ತೆ.. ಕಷ್ಟ ಏನು ಅನ್ನೋದು..
ಮದುವೆ ಆಗಿರುವವರಿಗೆ ಸಿಂಗಲ್ ಆಗಿದ್ರೆ ಚೆನ್ನಾಗಿರ್ತಿತ್ತು ಅಂತಾ ಅನ್ಸುತ್ತೆ..
ಸಿಂಗಲ್ ಆಗಿರುವವರಿಗೆ ಮದುವೆ ಆಗಿದ್ರೆ ಚೆನ್ನಾಗಿರ್ತಿತ್ತು ಅಂತಾ ಅನ್ಸುತ್ತೆ..
ಅಂತಾದ್ದೊಂದು ಹಾಡನ್ನಿಟ್ಟುಕೊಂಡು ಜನರಿಗೆ ತೋರಿಸೋಕೆ ಕಾಯ್ತಿದ್ದಾರೆ ಸಂತೋಷ್ ಆನಂದರಾಮ್. ಎರಡೂ ಆಂಗಲ್‍ನಲ್ಲಿ ಸಾಂಗ್ ಬರೆದಿದ್ದಾರಂತೆ. ಆ ಹಾಡನ್ನು ಡಾಲಿ ಧನಂಜಯ ರಿಲೀಸ್ ಮಾಡ್ತಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲಿ ಹಾಡು ಪ್ರಮೋಟ್ ಮಾಡೋ ಹೊಣೆಯನ್ನ ರಕ್ಷಿತ್ ಶೆಟ್ಟಿ ಹೊತ್ಕೊಂಡಿದ್ದಾರಂತೆ. ಅಜನೀಶ್ ಲೋಕನಾಥ್ ಮ್ಯೂಸಿಕ್ಕು. ಅಂದಹಾಗೆ ಇವರೆಲ್ಲರ ಒಂದು ಸಿಂಗಲ್ ಕ್ವಾಲಿಫಿಕೇಷನ್ ಏನ್ ಗೊತ್ತಾ..? ಇವರೆಲ್ಲ ಸಿಂಗಲ್ ಸುಂದರರೇ. ಇವರೆಲ್ಲ ಸೇರಿ ಸಿಂಗಲ್ ಸುಂದರ ಅನ್ನೋ ರಾಘವೇಂದ್ರ ಸ್ಟೋರ್ಸ್ ಚಿತ್ರದ ಹಾಡನ್ನ ರಿಲೀಸ್ ಮಾಡ್ತಿದ್ದಾರೆ.
ನಂಗೇನ್ ಜಗ್ಗಣ್ಣನಷ್ಟ ವಯಸ್ಸಾಗಿದ್ಯಾ ಅನ್ನೋ ಡಾಲಿ, ನಂಗೂ ಆವಾಗವಾಗ ಮದ್ವೆ ಆಗ್ಬೇಕು ಅನ್ಸುತ್ತೆ ಅಂತಾರೆ. 12ನೇ ತಾರೀಕು ಸಂಜೆ 5 ಗಂಟೆಗೆ ಸಿಂಗಲ್ ಸುಂದರನ ಹಾಡು ರಿಲೀಸ್ ಆಗುತ್ತೆ.
ರಾಘವೇಂದ್ರ ಸ್ಟೋರ್ಸ್ ಚಿತ್ರ ಜಗ್ಗೇಶ್ ಮತ್ತು ಶ್ವೇತಾ ಶ್ರೀವಾತ್ಸವ್ ಒಟ್ಟಿಗೇ ನಟಿಸಿರುವ ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾ. ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರ. ಕಥೆ ಮತ್ತು ಚಿತ್ರಕಥೆಯೂ ಸಂತೋಷ್ ಅವರದ್ದೇ. ಅಂದಹಾಗೆ ಸಿನಿಮಾ ಏಪ್ರಿಲ್ 28ಕ್ಕೆ ರಿಲೀಸ್ ಆಗುತ್ತಿದೆ.



