ಕನ್ನಡದ ಕುಳ್ಳ ಎಂದರೆ ದ್ವಾರಕೀಶ್ ನೆನಪಾಗುತ್ತಾರೆ ಹಾಗೆಯೇ ಕಿರುತೆರೆಯ ಕುಳ್ಳ ಎಂದರೆ ಆಗ ಸಂಜು ಬಸಯ್ಯ ನೆನಪಾಗ್ತಾರೆ, ಸಂಜು ಬಸಯ್ಯ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದ ನಟ. ಉತ್ತರ ಕರ್ನಾಟಕದಲ್ಲಿ ಬಸಯ್ಯ ಫೇಮಸ್. ಅವರ ನಾಟಕಗಳೆಂದರೆ ಜನ ಮುಗಿಬಿದ್ದು ನೋಡ್ತಾರೆ. ಎತ್ತರ ಕಾರಣಕ್ಕಾಗಿಯೇ ವಿಶೇಷವಾಗಿ ಕಾಣಿಸುವ ಬಸಯ್ಯ ಅವರ ಮದುವೆ ಕಳೆದ ಕೆಲದಿನಗಳಿಂದ ಭರ್ಜರಿ ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಪಲ್ಲವಿ ಎಂಬುವವರನ್ನು ಸಂಜು ಬಸಯ್ಯ ಅವರು ಪ್ರೀತಿ ಮಾಡುತ್ತಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರ ನಡುವೆ ನಂತರ ಆತ್ಮೀಯತೆ ಬೆಳೆದು, ಆ ಬಳಿಕ ಅದು ಪ್ರೀತಿಯಾಗಿ ಬದಲಾಗಿತ್ತು. ಇದೀಗ ರಿಜಿಸ್ಟರ್ ಮದುವೆ ಮಾಡಿಕೊಂಡಿರುವ ಇವರು, ನಂತರ ಪೋಷಕರನ್ನು ಒಪ್ಪಿಸಿ, ಸಪ್ತಪದಿ ತುಳಿಯುವುದಾಗಿ ಹೇಳಿಕೊಂಡಿದ್ದಾರೆ.
ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು.. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೇವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು.. ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ಧವಾಗಿ, ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಕಂಪೆನಿ ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಕುಬ್ಜ ದೇಹಿ ಸಂಜು ಬಸಯ್ಯ. ತಮ್ಮ ಕುಬ್ಜ ದೇಹಾಕಾರವನ್ನು ಹಾಸ್ಯ ಹೊಮ್ಮಿಸಲು ಬಳಸಿ ಜನಪ್ರಿಯತೆ ಗಳಿಸಿದ್ದರು. ಬಳಿಕ ಕಾಮಿಡಿ ಕಿಲಾಡಿಗಳು ಶೋಗೆ ಆಗಮಿಸಿದ ಸಂಜು ಬಸಯ್ಯ ಅಲ್ಲಿಯೂ ತಮ್ಮ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ. ಸಂಜು ವಿವಾಹವಾಗಿರುವ ಪಲ್ಲವಿ ಬಳ್ಳಾರಿ ಸಹ ಕಲಾವಿದೆಯಾಗಿದ್ದಾರೆ. ಪಲ್ಲವಿ ಈಗಾಗಲೇ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರೂ ಸಹ ಹಲವು ವರ್ಷಗಳಿಂದ ಪರಿಚಿತರೇ ಆಗಿದ್ದು, ತಮ್ಮ ಪ್ರೇಮವನ್ನು ಇದೀಗ ಮದುವೆಯಾಗಿ ಬದಲಾಯಿಸಿಕೊಂಡಿದ್ದಾರೆ. ಆದರೆ ಇವರ ಮದುವೆಗೆ ಕುಟುಂಬದವರ ಒಪ್ಪಿಗೆ ಇಲ್ಲವಂತೆ.
ಅಂದಹಾಗೆ ಪಲ್ಲವಿ ಮತ್ತು ಬಸಯ್ಯ ಅವರದ್ದು 6 ವರ್ಷದ ಪ್ರೀತಿಯಂತೆ. ರಿಜಿಸ್ಟರ್ ಮ್ಯಾರೇಜ್ ಆಗಿರುವ ಇಬ್ಬರೂ ಬೇಗನೆ ಬಂಧು ಬಾಂಧವರ ಎದುರು ಸಪ್ತಪದಿ ತುಳಿಯುವಂತಾಗಲಿ.



