ವಜ್ರಮುನಿ. ಕೆಂಡಕಾರುವ ಕಣ್ಣುಗಳು. ಯಲಾಕುನ್ನಿ.. ಎಂಬ ಡೈಲಾಗ್ ನೆನಪಾದರೆ ಸಾಕು, ಆ ಕಂಠ.. ಕಂಠದಲ್ಲಿರುವ ಬೆದರಿಸುವ ಧ್ವನಿ.. ಕರ್ಕಶತೆ ಬೆರೆತ ವಜ್ರಮುನಿ ನೆನಪಾಗುತ್ತಾರೆ. ನಟಭಯಂಕರ ವಜ್ರಮುನಿ ಪಾತ್ರಗಳಲ್ಲಿ ತುಂಬಾ ಫೇಮಸ್ ಡೈಲಾಗ್ ಇದು. ವಜ್ರಮುನಿ ಅವರನ್ನು ಮೀರಿಸಿದ ಇನ್ನೊಬ್ಬ ವಿಲನ್ ಕನ್ನಡಕ್ಕೆ ಇನ್ನೂ ಸಿಕ್ಕಿಲ್ಲ. ಹೀಗಾಗಿಯೇ ಈಗಲೂ ನಟಭಯಂಕರ ಅನ್ನೋ ಸಿನಿಮಾ ರಿಲೀಸ್ ಆಗುತ್ತೆ. ಪ್ರಥಮ್ ಅನ್ನೋ ಹೀರೋ ನಟಭಯಂಕರ ಹೆಸರಲ್ಲಿಯೇ ಸಿನಿಮಾ ಮಾಡ್ತಾರೆ. ಒಂದು ಲೆವೆಲ್ಲಿಗೆ ಗೆದ್ದೂ ಬಿಡ್ತಾರೆ. ಈಗ ಅವರ ಫೇಮಸ್ ಡೈಲಾಗ್ ಕೂಡಾ ಸಿನಿಮಾ ಆಗುತ್ತಿದೆ. ಯಲಾ ಕುನ್ನಿ. ಸಿನಿಮಾದ ಸಬ್ ಟೈಟಲ್ ಮೇರಾ ನಾಮ್ ವಜ್ರಮುನಿ.
ಸಹೋದರ ಕೋಮಲ್ ಮತ್ತೊಂದು ಹಾಸ್ಯ ಚಿತ್ರ #ಯಲಾಕುನ್ನಿ ತಿಂಗಳ ಅಂತ್ಯಕ್ಕೆ ಆರಂಭ..ಹಳ್ಳಿ ಸೊಗಡಿನ ಹಾಸ್ಯಮಯ ಚಿತ್ರ ಸಂಪೂರ್ಣ ಶ್ರೀರಂಗಪಟ್ಟಣ ಹಾಗು ಸುತ್ತಮುತ್ತ ಚಿತ್ರೀಕರಣ…
ಶುಭಹಾರೈಕೆ ಚಿತ್ರತಂಡಕ್ಕೆ
God bless 🙌 pic.twitter.com/piTUKnMVoN— ನವರಸನಾಯಕ ಜಗ್ಗೇಶ್(modi ka parivar) (@Jaggesh2) March 9, 2023
ಯಲಾ ಕುನ್ನಿ
ಸಿನಿಮಾವನ್ನು ಮಹೇಶ್ ಗೌಡ್ರು ನಿರ್ಮಿಸುತ್ತಿದ್ದು, ಎನ್. ಆರ್ ಪ್ರದೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಅವರೊಂದಿಗೆ ಕೆಲಸ ಮಾಡಿರೋ ಪ್ರದೀಪ್ ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರನ್ನು ನಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದು 1981ರ ಕಾಲಘಟ್ಟದಲ್ಲಿ ನಡೆಯೋ ಕಥೆ. ಹೀಗಾಗಿ ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತ ಹಳ್ಳಿ ಹಾಗೂ ದೇವಸ್ಥಾನದ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಪುತ್ರ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ ಹಾಗೂ ಮಹಾಂತೇಶ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
ಸಿನಿಮಾದ ಪೋಸ್ಟರ್ ವಿಭಿನ್ನಾಗಿದ್ದು, ಉದಯಿಸುತ್ತಿರುವ ಸೂರ್ಯನ ಮೇಲೆ ಮೂಡಿಸಿರುವ ವಜ್ರಮುನಿಯ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಪೋಸ್ಟರ್ನಲ್ಲಿ ಪುಣ್ಯಕೋಟಿ ಗೋವಿನ ಹಾಡಿನಲ್ಲಿ ಹುಲಿಯನ್ನು ಬಣ್ಣಿಸುವ ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಬುದಾನೆಂಬ ವ್ಯಾಘ್ರನು ಅಬ್ಬರಿಸಿ ಹಸಿ-ಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು ಎಂಬ ಸಾಲುಗಳನ್ನು ಬರೆಯಲಾಗಿದೆ.



