ಕೇರಳ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಎನ್ನುವುದಕ್ಕಿಂತ ಪ್ರಬಲರಾಗಿರುವ ರಾಜ್ಯಗಳಲ್ಲಿ ಒಂದು. ಕೇರಳ ಒಂದು ರೀತಿಯಲ್ಲಿ ಕುದಿಯುವ ಅಗ್ನಿಕುಂಡ. ಅದನ್ನು ದೇವರ ನಾಡು ಎಂದೂ ಕರೆಯುತ್ತಾರೆ. ಅಯ್ಯಪ್ಪ, ಅನಂತ ಪದ್ಮನಾಭ ಸೇರಿದಂತೆ ಹಿಂದೂಗಳ ಪ್ರಸಿದ್ಧ ದೇವಸ್ಥಾನಗಳಿರುವುದು ಇದೇ ಕೇರಳದಲ್ಲಿ. ಜಗತ್ತಿನ ಎರಡನೇ ಮಸೀದಿ (ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಚೆರಾಮನ್ ಜುಮಾ ಮಸೀದಿ) ಇರುವುದು ಕೇರಳದಲ್ಲಿಯೇ. ಮಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು ಒಟ್ಟಾಗಿರುವ ಕೇರಳ ಇನ್ನೊಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡ.
ಭಾರತದಲ್ಲಿ ಐಸಿಸ್, ಅಲ್ ಕೈದಾ ಪರ ಇರುವ ಯುವಕ/ಯುವತಿಯರು ಪತ್ತೆಯಾಗಿದ್ದು ಇದೇ ಕೇರಳದಲ್ಲಿ. ಪಿಎಫ್`ಐ ಎಂಬ ಭಯೋತ್ಪಾದಕ ಸಂಘಟನೆಯ ಟ್ರೈನಿಂಗ್ ಸೆಂಟರ್ ಇರುವುದು ಇದೇ ಕೇರಳದಲ್ಲಿ. ಭಯತ್ಪಾದಕ ಸಂಘಟನೆಗಳಿಗೆ ಇಡೀ ದೇಶದಲ್ಲಿ ಹೆಚ್ಚು ಜನ ಸೇರಿದ್ದರೆ ಅದು ಕೇರಳದಿಂದಲೇ. ಇದನ್ನೇ ಕಥೆಯಾಗಿಸಿಕೊಂಡು ಒಂದು ಸಿನಿಮಾ ಬರುತ್ತಿದೆ. ಕೇರಳ ಸ್ಟೋರಿ.
ಕಳೆದ ವರ್ಷ ಕಾಶ್ಮೀರ್ ಫೈಲ್ಸ್ ಚಿತ್ರ ತೆರೆಗೆ ಬಂದಿತ್ತು. ಜಮ್ಮು ಕಾಶ್ಮೀರದಲ್ಲಿ 90ರ ದಶಕದಲ್ಲಿ ನಡೆದ ಅತ್ಯಾಚಾರ, ಹತ್ಯಾಕಾಂಡ, ಅವುಗಳನ್ನು ಹೊರಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದ್ದ ಕಥೆ, ದೊಡ್ಡವರು, ಸರ್ಕಾರಗಳು ಮೌನವಾಗಿ ನೋಡಿದ ಘಟನೆಗಳನ್ನು ಹಸಿಹಸಿಯಾಗಿ ತೋರಿಸಲಾಗಿತ್ತು. ಸಹಜವಾಗಿಯೇ ಅದು ವಿರೋಧಕ್ಕೆ ತುತ್ತಾಯಿತು. ಇದೀಗ ಮತ್ತೊಂದು ಅಂತಹುದೇ ಸಿನಿಮಾ ಬರುತ್ತಿದೆ. ಕೇರಳ ಸ್ಟೋರಿ.


ಹಿಜಾಬ್ ಧರಿಸಿದರೆ ಅತ್ಯಾಚಾರ ಆಗಲ್ಲ. ಅಲ್ಲಾನೇ ರಕ್ಷಿಸುತ್ತಾನೆ.
ಹೆಂಡತಿಗಾಗಿ ಕಣ್ಣೀರು ಹಾಕುವ ಶಿವನನ್ನು ದೇವರು ಎಂದು ಹೇಗೆ ನಂಬುತ್ತೀರಿ. ಅಲ್ಲಾ ಒಬ್ಬನೇ ದೇವರು. ಎಂಬಂತಹ ಡೈಲಾಗ್`ಗಳಿವೆ. ಅಂತಹ ಯುವತಿಯರನ್ನು ಬ್ರೇನ್ ವಾಷ್ ಮಾಡಿ ಐಸಿಸ್`ಗೆ ಸೇರಿಸುವ ದೊಡ್ಡ ಜಾಲವೇ ಕೇರಳದಲ್ಲಿ ಸಕ್ರಿಯವಾಗಿದೆ ಎನ್ನುವುದು ಬಹಿರಂಗವಾಗಿತ್ತು. ಅಂತಹ ಯುವತಿ/ಯುವಕರನ್ನು ರಕ್ಷಿಸಲಾಗಿತ್ತು. ಇನ್ನೂ ಕೆಲವರು ಕೇರಳದವರೇ ಐಸಿಸ್`ನಲ್ಲಿ ಸಕ್ರಿಯರಾಗಿರುವುದು ಎನ್`ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು. ಲವ್ ಜಿಹಾದ್ ಹಾಗೂ ಐಸಿಸ್`ಗೆ ಸೇರಿಸುವ ಜಾಲದ ವಿರುದ್ಧ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಸಂಘಟನೆಗಳು ಕಾನೂನು ಹೋರಾಟವನ್ನೂ ನಡೆಸುತ್ತಿವೆ. ಇದನ್ನೇ ಸಿನಿಮಾದಲ್ಲಿ ತೋರಿಸಲಾಗಿದೆ. ಇದರ ವಿರುದ್ಧ ಕೇರಳದ ಕಾಂಗ್ರೆಸ್, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದೊಂದು ಸಂಘಪರಿವಾರದ ಅಜೆಂಡಾ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ. ಇದೆಲ್ಲದರ ಮಧ್ಯೆ ಸಿನಿಮಾ ಮೇ 5ರಂದು ರಿಲೀಸ್ ಆಗುತ್ತಿದೆ.



