ಡಾಲಿ ಧನಂಜಯ. ಇದೀಗ ಸ್ಯಾಂಡಲ್‍ವುಡ್‍ನಲ್ಲಿ ಕೇಳಿ ಬಂದಿರೋ ಹೊಸ ಸ್ಟಾರ್ ನಟ. ಚಿತ್ರರಂಗಕ್ಕೆ ಬಂದು ದಶಕಗಳಾಗಿದ್ದರೂ, ಸ್ಟಾರ್ ಗಿರಿ ಸಿಕ್ಕಿದ್ದು ಬಡವ ರಾಸ್ಕಲ್ ಗೆದ್ದ ಮೇಲೆ. ಟಗರು ಚಿತ್ರದಿಂದ ನೇಮುಫೇಮು ಬಂದಿದ್ದು ನಿಜವಾದರೂ ಹೀರೋ ಆಗಿ ಗೆದ್ದ ಧನಂಜಯ ಈಗ ಸ್ಟಾರ್ ನಟ. ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂನಲ್ಲೂ ಗುರುತಿಸಿಕೊಂಡಿರುವ ಡಾಲಿ ಧನಂಜಯ, ಎಲ್ಲ ಭಾಷೆಗಳಿಗೂ ಸಲ್ಲುವ ನಟ. ಹೀಗಿರುವಾಗ ಡಾಲಿ ಧನಂಜಯ ಏಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಾರದು? ಈ ಪ್ರಶ್ನೆ ಡಾಲಿಗೆ ಎದುರಾಗದೇ ಇಲ್ಲ.


ಇದು ಡಾಲಿ ಧನಂಜಯ್ ಹೇಳಿರುವ ವಿಷಯ. ಸದ್ಯಕ್ಕೆ ಡಾಲಿ ಧನಂಜಯ್ ಅವರ ಹೊಯ್ಸಳ ರಿಲೀಸ್ ಆಗಬೇಕಿದೆ. ಮಾರ್ಚ್ 30ಕ್ಕೆ ಡೇಟ್ ಕೂಡಾ ಫಿಕ್ಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ವಿತರಣೆಯಲ್ಲಿ ಪಳಗಿರುವ ಕಾರ್ತಿಕ್ ಗೌಡ ಅವರೇ ನಿರ್ಮಾಪಕರಾಗಿದ್ದರೂ ಹೊಯ್ಸಳ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ್ದನ್ನು ಮಾಡುತ್ತೇನೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮಾರ್ಕೆಟ್ ನೋಡಿಕೊಂಡೇ ಸಿನಿಮಾ ಮಾಡಬೇಕು ಎಂದು ಹೇಳಿದ್ದಾರೆ.



