ನಮಾಮಿ ನಮಾಮಿ ಈಶ್ವರ ನಾಟ್ಯಪೂಜಿತಂ..
ನಮಾಮಿ ನಮಾಮಿ ಶಂಕರ ಪಾದ ವಂದಿತಂ..
ಗೆಜ್ಜೆಗಳ ನಾದ ತೋಂತನಂ..
ನಾದಗಳ ಕುಣಿತ ಧೀಂತನಂ..
ಸಂಗೀತ..ಸಾಹಿತ್ಯ..ಆನಂದ..ಆಲಾಪವೇ..
ತನಧಿರನ ದಿರನ ಧಿರನ.. ಹೇ..
ರಾಗ ತಾಳ ನಾಟ್ಯಂ.. ನಟರಾಜ ಸುಂದರಂ..
ನಾದ ವೇದ ಕಾವ್ಯಂ.. ನಟರಾಜ ಸುಂದರಂ..
ಇದು ಕಬ್ಜ ಚಿತ್ರದ ಹಾಡು. ಶಿವರಾತ್ರಿಯ ಸಂಭ್ರಮಕ್ಕೆ ನಿರ್ದೇಶಕ ಆರ್.ಚಂದ್ರು ಕೊಟ್ಟಿರುವ ಶಿವರಾತ್ರಿ ಕಾಣಿಕೆಯಂತಿದೆ ನಮಾಮಿ ನಮಾಮಿ.. ಪೋಸ್ಟರ್, ಟೀಸರ್‍ಗಳಿಂದಲೇ ವಿಜೃಂಭಿಸುತ್ತಿರುವ ಕಬ್ಜದ ಹಾಡೂ ಅಷ್ಟೇ ಅದ್ಧೂರಿ..ಸುಂದರ..ಶ್ರೇಯಾ ಸರಣ್ ಅವರಂತೂ ಮಹಾರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಕಾಸ್ಟ್ಯೂಮ್, ಸೆಟ್ ಅಷ್ಟೇ ಅಲ್ಲ, ಐಶ್ವರ್ಯಾ ರಂಗರಾಜನ್ ಧ್ವನಿಯೂ ಅಷ್ಟೇ ಮಧುರಾತಿಮಧುರವಾಗಿದೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದ ನಮಾಮಿ ಹಾಡಿಗೆ ಸಾಹಿತ್ಯ ನೀಡಿರುವುದು ಕಿನ್ನಾಲ್ ರಾಜ್.


ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಆಡಿಯೋ ರಿಲೀಸ್ ಆಗಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. 




