ಸುದೀಪ್ ಯಾರನ್ನೂ ಬಿಡುವುದಿಲ್ಲ. ಚಿತ್ರರಂಗದಲ್ಲಿ ತಾವು ಏನೇನೂ ಅಲ್ಲದಿದ್ದಾಗಲೂ ಸುದೀಪ್ (Kichcha Sudeep) ತಿರುಗಿಬಿದ್ದವರು. ಆದರೆ, ತಕ್ಷಣ ಉತ್ತರ ಕೊಡುವ ಗೋಜಿಗೆ ಹೋಗುವುದಿಲ್ಲ. ಸಮಯ ನೋಡುತ್ತಾರೆ. ಉತ್ತರ ಕೊಡುತ್ತಾರೆ. ಭಯಂಕರವಾಗಿಯೇ ಕೊಡುತ್ತಾರೆ.
ಕಿಚ್ಚ ಸುದೀಪ್ (Kichcha Sudeep) ಅವರಿಂದ ಮೋಸವಾಗಿದೆ. ವಂಚನೆಯಾಗಿದೆ. ಅಡ್ವಾನ್ಸ್ ಕೊಟ್ಟಿದ್ದೇನೆ. ಕಾಲ್ ಶೀಟ್ ಕೊಟ್ಟಿಲ್ಲ. 8 ವರ್ಷಗಳಿಂದ ಆಟವಾಡಿಸುತ್ತಿದ್ದಾರೆ ಎಂದೆಲ್ಲ ಎನ್.ಕುಮಾರ್ ಆರೋಪ ಮಾಡಿದ್ದರು. ಎನ್.ಕುಮಾರ್ (NKumar) ಕೂಡಾ ಚಿತ್ರರಂಗದ ಹಿರಿಯ ನಿರ್ಮಾಪಕ. ಸುದೀಪ್ ಅವರ ಚಿತ್ರಗಳನ್ನೂ ಕೂಡಾ ನಿರ್ಮಾಣ ಮಾಡಿದ್ದವರು. ಸುದೀಪ್ ಚಿತ್ರಗಳನ್ನು ವಿತರಣೆ ಮಾಡಿದ್ದವರು. ಇಂತಹ ಕುಮಾರ್ (N Kumar), ಸುದೀಪ್ ವಿರುದ್ದ
ಆರೋಪ ಮಾಡಿದ್ದಾರೆಂದರೆ.. ಚಿತ್ರರಂಗ ಕುತೂಹಲದಿಂದ ನೋಡುತ್ತಿತ್ತು. ಇದೀಗ ಸುದೀಪ್ ಅವುಗಳಿಗೆಲ್ಲ ಉತ್ತರವೇನೋ ಎಂಬಂತೆ ಟ್ವೀಟ್ ಮಾಡಿದ್ದಾರೆ.
ಒಳ್ಳೆಯತನಕ್ಕೆ ರಾಜಿ ಇಲ್ಲ, ಇದನ್ನು ಓದಿ, ತುಂಬ ಚೆನ್ನಾಗಿದೆ ತಿರುಚೋದಿಕ್ಕೆ ಅಥವಾ ದುರ್ಬಳಕೆ ಮಾಡಿಕೊಳ್ಳೋದಿಕ್ಕೆ ನನ್ನ ಒಳ್ಳೆಯತನ ಉಪಕರಣ ಅಲ್ಲ. ಅದು ನಿಜವಾಗಿದ್ದಾಗ ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿನಮ್ರವಾಗಿರಿ, ಸತ್ಯವಂತರಾಗಿರಿ ಇದು ಸುದೀಪ್ ಅವರ ಟ್ವೀಟ್. ಈ ಟ್ವೀಟ್ ಕುಮಾರ್ ಅವರಿಗೇ ಹೇಳಿದ್ದು ಎಂದು ಮಾತನಾಡಿಕೊಳ್ತಿದೆ ಗಾಂಧಿನಗರ. ತೆರೆಯ ಹಿಂದೆ ನಡೆದಿರುವ ಚಟುವಟಿಕೆಗಳೇನು.. ಎನ್ನುವುದು ಸುದೀಪ್ ಮತ್ತು ಕುಮಾರ್ ಅವರಿಗೆ ಗೊತ್ತು.
ಅಂದಹಾಗೆ ಕುಮಾರ್ ಅವರ ಸುದ್ದಿಗೋಷ್ಠಿಯಲ್ಲಿ ಫಿಲಂ ಚೇಂಬರ್ ಮತ್ತು ನಿರ್ಮಾಕರ ಸಂಘದ ಅಧ್ಯಕ್ಷರೂ ಇದ್ದದ್ದು ವಿಶೇಷವಾಗಿತ್ತು.
ವಿಶೇಷವೆಂದರೆ, ಫಿಲಂ ಚೇಂಬರ್`ನವರಾಗಲೀ, ನಿರ್ಮಾಪಕರ ಸಂಘದವರಾಗಲೀ ಸುದೀಪ್ ಅವರನ್ನು ಸಂಪರ್ಕ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ. ಇದಕ್ಕೆ ಸೂಕ್ತ ಉತ್ತರ ಸಿಕ್ಕಿಲ್ಲ. ಅದೇಕೋ ಏನೋ.. ಸುದೀಪ್ ಅವರ ಮೇಲೆ ಇಂತಹ ಆರೋಪಗಳು, ಒಳಸಂಚುಗಳು ನಿರಂತರವಾಗಿ ನಡೆಯುತ್ತಲೇ ಇವೆ.



