ತತ್ಸಮ ತದ್ಭವ. ಕನ್ನಡದ ಈ ವ್ಯಾಕರಣ ವಿಶೇಷ ಹೊಸ ಸಿನಿಮಾ ಆಗಿದೆ.
ಆ ಸಿನಿಮಾದ ಹೀರೋಯಿನ್ ಮೇಘನಾ ರಾಜ್. ಮೇಘನಾರಾಜ್ ಅವರ ಆತ್ಮೀಯ ಗೆಳೆಯರೂ ಆಗಿರುವ ಪನ್ನಗಾಭರಣ ಹಾಗೂ ಸ್ಫೂರ್ತಿ ಅನಿಲ್ ನಿರ್ಮಾಣದ ಚಿತ್ರಕ್ಕೆ ವಿಶಾಲ್ ಅತ್ರೇಯ ಎಂಬುವವರು ಡೈರೆಕ್ಟರ್. ವಾಸುಕಿ ವೈಭವ್ ಸಂಗೀತ ನಿರ್ದೇಶಕ. ಸರ್`ಪ್ರೈಸ್ ಕೊಡುತ್ತೇನೆ ಎಂದು ಹೇಳಿದ್ದ ಮೇಘನಾ ರಾಜ್ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.


ಎಲ್ಲರಿಗೂ ಗೊತ್ತಿರುವಂತೆ ನಟಿ ಮೇಘನಾ ರಾಜ್ ಅವರು ಕನ್ನಡದ ಜೊತೆಗೆ ಮಲಯಾಳಂನಲ್ಲೂ ಸಾಕಷ್ಟು ಜನಪ್ರಿಯರಾಗಿದ್ದ ನಟಿ. ಹಾಗಾಗಿ, ಈ ಹೊಸ ಸಿನಿಮಾವನ್ನು ಕನ್ನಡದ ಜೊತೆಗೆ ಮಲಯಾಳಂನಲ್ಲೂ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಕನ್ನಡ ಮತ್ತು ಮಲಯಾಳಂ ಎರಡು ಭಾಷೆಗಳಲ್ಲೂ ಕೂಡ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ನಟಿ ಮೇಘನಾ ರಾಜ್ ಅವರು ಶನಿವಾರ (ಫೆ.18) ಒಂದು ಪೋಸ್ಟ್ ಹಂಚಿಕೊಂಡಿದ್ದರು. ‘2020ರ ಆ ಭಾನುವಾರ ನನ್ನ ಬದುಕು ಸಂಪೂರ್ಣವಾಗಿ ಬದಲಾಯಿತು. ಅಂದಿನಿಂದಲೂ ನನಗೆ ಒಂದು ಪ್ರಶ್ನೆ ಎದುರಾಗುತ್ತಲೇ ಇತ್ತು. ಈಗ ಫೆಬ್ರವರಿ 19ರಂದು ನಾನು ಆ ಪ್ರಶ್ನೆಗೆ ಉತ್ತರ ಕೊಡುತ್ತೇನೆ..’ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಈ ಪೋಸ್ಟ್ಗೆ ನಾನಾ ಥರ ಕಾಮೆಂಟ್ಗಳು ಬಂದಿದ್ದವು.
ಇದೊಂದು ಥ್ರಿಲ್ಲರ್ ಸ್ಟೋರಿ. ಕ್ರೈಂ ಥ್ರಿಲ್ಲರ್. ರಾತ್ರೋರಾತ್ರಿ ಆಕೆಯ ಬದುಕು ಬದಲಾಗಿ ಹೋಗುತ್ತದೆ. ಏನಾಯ್ತು ಎಂದು ಆಕೆ ಅರಿತುಕೊಳ್ಳುವಷ್ಟರಲ್ಲೇ ಬದುಕು ಸಡನ್ನಾಗಿ ಚೇಂಜ್ ಆಗಿರುತ್ತೆ. ಇದು ನನಗೆ ವಿಶೇಷವಾಗಿ ಕನೆಕ್ಟ್ ಆಯಿತು. 2020ರಲ್ಲಿ ನಡೆದ ಆ ಅಪಘಾತ ನನ್ನ ಬದುಕನ್ನೂ ಬದಲಿಸಿಬಿಟ್ಟಿತು ಎನ್ನುವ ಮೇಘನಾ ಚಿತ್ರ ನೋಡುತ್ತಾ ಪ್ರೇಕ್ಷಕರೂ ಒಂದಾಗುತ್ತಾರೆ. ಕ್ರೈಂ ಥ್ರಿಲ್ಲರ್ ಬಗೆಹರಿಸುವ ನಿಟ್ಟಿನಲ್ಲಿ ಪ್ರೇಕ್ಷಕರೂ ತಮ್ಮದೇ ಆದ ರೀತಿಯಲ್ಲಿ ಯೋಚನೆ ಮಾಡುವಂತ ಕಥೆ ಚಿತ್ರದಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಅವರದ್ದು ಮಧ್ಯಮ ವರ್ಗದ ಗೃಹಿಣಿಯ ಪಾತ್ರ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅತಿಥಿ ನಟರಾಗಿ ನಟಿಸುತ್ತಿದ್ದಾರೆ. ಆಟಗಾರ ಚಿತ್ರದ ನಂತರ ಮೇಘನಾ ರಾಜ್ ಕೂಡಾ ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.



